ಕರಾವಳಿಸುಳ್ಯ

ತಾ.ಮಟ್ಟದ ಕ್ರೀಡಾ ಕೂಟದ ಬಗ್ಗೆ ಪೋಷಕರೊಂದಿಗೆ ಪೂರ್ವಭಾವಿ ಸಭೆ;ಪೂರ್ವ ತಯಾರಿ, ವಿವಿಧ ಸಮಿತಿ ರಚಿಸುವ ಕುರಿತು ಚರ್ಚೆ

186

ನ್ಯೂಸ್ ನಾಟೌಟ್ : ಸುಳ್ಯ ಎಂ.ಜಿ.ಎಂ ಶಾಲಾ ಕ್ರೀಡಾಂಗಣದಲ್ಲಿ ಅ.26,27 ರಂದು ನಡೆಯಲಿರುವ ತಾಲೂಕು ಮಟ್ಟದ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಕ್ರೀಡಾ ಕೂಟದ ಬಗ್ಗೆ ಪೋಷಕರ ಜತೆ ಪೂರ್ವ ಭಾವಿ ಸಭೆ ನಡೆಯಿತು.

ಸಂತಬ್ರಿಜಿತರ ಚರ್ಚ್ ಕಲಾ ಮಂದಿರದಲ್ಲಿ ನಡೆದ ಈ ಸಭೆಯಲ್ಲಿ ಕ್ರೀಡಾಕೂಟದ ಪೂರ್ವ ತಯಾರಿ ಮತ್ತು ವಿವಿಧ ಸಮಿತಿಗಳನ್ನು ರಚಿಸುವ ಕುರಿತು ಪೋಷಕರಲ್ಲಿ ಚರ್ಚಿಸಲಾಯಿತು.

ಈ ವೇಳೆ ಸಂತ ಜೋಸೆಫ್ ಶಾಲಾ ಸಂಚಾಲಕರಾದ ರೆ.ಫಾ.ವಿಕ್ಟರ್ ಡಿ’ಸೋಜಾ,ಸೈಂಟ್ ಜೋಸೆಫ್ ಶಾಲಾ ಮುಖ್ಯೋಪಧ್ಯಾಯಿನಿ ಸಿಸ್ಟರ್ ಬಿನೋಮ,ಪೋಷಕರ ಸಂಘದ ಅಧ್ಯಕ್ಷ ಜೆ.ಕೆ ರೈ,ಸೈಂಟ್ ಬ್ರಿಜಿಡ್ಸ್ ಚರ್ಚ್ ಪಾಲನ ಸಮಿತಿ ಉಪಾಧ್ಯಕ್ಷ ನವೀನ್ ಮಚಾದೋ, ಸೈಂಟ್ ಬ್ರಿಜಿಡ್ಸ್ ಶಾಲಾ ಮುಖ್ಯೋಪಧ್ಯಾಯಿನಿ ಸಿಸ್ಟರ್ ಅಂತೋನಿ ಮೇರಿ, ಶಿಕ್ಷಕರಾದ ಕೊರಗಪ್ಪ, ಉಮೇಶ್ , ದೈಹಿಕ ಶಿಕ್ಷಕರಾದ ಭವ್ಯ, ಪೋಷಕರ ಸಮಿತಿ ಅಧ್ಯಕ್ಷರು ಹಾಗೂ ಶಾಲಾ ಮಕ್ಕಳ ಪೋಷಕರು ಉಪಸ್ಥಿತರಿದ್ದರು.

See also  ಸುಳ್ಯದ ಹುಡುಗರ "ಮೌನ ಮಾತಾದಾಗ"  ಬಿಡುಗಡೆ
  Ad Widget   Ad Widget   Ad Widget   Ad Widget   Ad Widget   Ad Widget   Ad Widget