Latest

ಕುಂಭಮೇಳ ಮುಗಿಸಿ ಪಿಜ್ಜಾ ತಿನ್ನಲು ಬಂದ ಸಾಧುಗಳು:ವಿಡಿಯೋ ಸೆರೆ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟ ಯುವತಿ!ವಿಡಿಯೋ ವೈರಲ್

735

ನ್ಯೂಸ್‌ ನಾಟೌಟ್: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆದ ಮಹಾಕುಂಭ ಮೇಳ ಮಹಾಶಿವರಾತ್ರಿಯಂದು ಮುಕ್ತಾಯಗೊಂಡಿದೆ. ಕುಂಭಮೇಳದಲ್ಲಿ ಭಾಗವಹಿಸಿದ್ದ ಒಂದಷ್ಟು ಸಾಧುಸಂತರ ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದವು. ಇದೀಗ ಕುಂಭಮೇಳ ಮುಗಿದ ಬಳಿಕವೂ ಇಲ್ಲೊಂದು ಸಾಧುಗಳ ವಿಡಿಯೋ ವೈರಲ್ ಆಗಿದೆ. ಮಹಾಕುಂಭ ಮೇಳ ಮುಗಿದ ಬಳಿಕ ಒಂದಷ್ಟು ಸಾಧುಗಳು ಡೋಮಿನೋಸ್ ಗೆ ಪಿಜ್ಜಾ ತಿನ್ನಲು ಬಂದಿದ್ದು, ಈ ದೃಶ್ಯವನ್ನು ಯುವತಿಯೊಬ್ಬಳು ವಿಡಿಯೋ ಮಾಡಿ ಹರಿಬಿಟ್ಟಿದ್ದಾಳೆ.ಈ ದೃಶ್ಯ ವೈರಲ್ ಆಗುತ್ತಿದ್ದಂತೆ ಅವರನ್ನು ನೆಮ್ಮದಿಯಿಂದ ತಿನ್ನಲು ಬಿಡಿ ಯುವತಿಗೆ ನೆಟ್ಟಿಗರು ಕ್ಲಾಸ್‌ ತೆಗೆದುಕೊಂಡಿದ್ದಾರೆ.

ಪ್ರಯಾಗ್‌ರಾಜ್‌ನಲ್ಲಿರುವ ಡೋಮಿನೋಸ್ ಔಟ್‌ಲೇಟ್ ಗೆ ಮೂವರು ಸಾಧುಗಳು ಪಿಜ್ಜಾ ತಿನ್ನಲು ಬಂದಿದ್ದ ಸಂದರ್ಭದಲ್ಲಿ ಯುವತಿಯೊಬ್ಬಳು ಅದನ್ನು ಸೆರೆ ಹಿಡಿದಿದ್ದಾಳೆ.ಈ ಕುರಿತ ವಿಡಿಯೋವನ್ನು prayagrajxpress ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಶೇರ್‌ ಮಾಡಲಾಗಿದೆ. “ಪಿಜ್ಜಾ ತಿನ್ನಲು ಬಂದ ಸಾಧುಗಳುʼ ಎಂಬ ಶೀರ್ಷಿಕೆಯನ್ನು ಬರೆಯಲಾಗಿದೆ. ವೈರಲ್ ಆಗುತ್ತಿರುವ ವಿಡಿಯೋದಲ್ಲಿ ನಾಲ್ಕು ಜನ ಸಾಧುಗಳು ಪ್ರಯಾಗ್‌ರಾಜ್‌ನಲ್ಲಿರುವ ಡೊಮಿನೋಸ್ ಔಟ್‌ಲೆಟ್‌ನಲ್ಲಿ ಎಲ್‌ಇಡಿ ಮೆನುವನ್ನು ನೋಡುತ್ತಾ ಏನು ಆರ್ಡರ್‌ ಮಾಡೋದು ಎಂದು ಯೋಚಿಸುತ್ತಾ ನಿಂತಿರುವ ದೃಶ್ಯವನ್ನು ಕಾಣಬಹುದು. ಆ ಸಂದರ್ಭದಲ್ಲಿ ವಿಡಿಯೋ ಮಾಡುತ್ತಾ ಬಂದ ಯುವತಿಯೊಬ್ಬಳು ನೋಡಿ ಸಾಧುಗಳು ಪಿಜ್ಜಾ ತಿನ್ನಲು ಬಂದಿದ್ದಾರೆ, ನೀವು 250 ಪಿಜ್ಜಾ ತಿನ್ನಿ ಬಾಬಾ ಎಂದು ತಮಾಷೆ ಮಾಡುತ್ತಾ ಹೇಳಿದ್ದಾಳೆ.

See also  5 ವರ್ಷದ ಬಾಲಕಿಯ ದೇಹ ಗದ್ದೆಯಲ್ಲಿ ತುಂಡು ತುಂಡಾದ ರೀತಿಯಲ್ಲಿ ಪತ್ತೆ..! ಇತರ ಭಾಗಗಳ ಪತ್ತೆಗೆ ಡ್ರೋನ್‌ ಮೂಲಕ ಶೋಧ..!
  Ad Widget   Ad Widget   Ad Widget     Ad Widget   Ad Widget   Ad Widget Ad Widget     Ad Widget   Ad Widget   Ad Widget