ಕರಾವಳಿಸುಳ್ಯ

ರಾಜ್ಯದಲ್ಲಿ ಸಂಚಲನ ಮೂಡಿಸಿದ್ದ ಪ್ರವೀಣ್ ನೆಟ್ಟಾರು ಪ್ರಕರಣದ ಪ್ರಮುಖ ಅರೋಪಿಗಳು ಸೌದಿ ಅರೇಬಿಯಾದಲ್ಲಿ ಪತ್ತೆ!

ನ್ಯೂಸ್ ನಾಟೌಟ್: ರಾಜ್ಯದಲ್ಲಿ ಸಂಚಲನ ಮೂಡಿಸಿದ್ದ ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲೂಕಿನ ಬೆಳ್ಳಾರೆಯ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಪ್ರಮುಖ ಅರೋಪಿಗಳು ಸೌದಿ ಅರೇಬಿಯಾದಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಪ್ರಕರಣದ ತನಿಖೆಯನ್ನು ಎನ್ ಐಎ ಅಧಿಕಾರಿಗಳು ಮುಂದುವರಿಸಿದ್ದು, ಪ್ರವೀಣ್‌ ಹತ್ಯೆಯಾದ ದಿನದಂದು ಕುಟುಂಬಸ್ಥರು, ತನ್ನ ಮಗನ ಕಾರ್ಯಮುಗಿಯುವುದರೊಳಗೆ  ಹಂತಕರನ್ನು ಹೆಡೆಮುರಿಕಟ್ಟುವಂತೆ ಪೊಲೀಸರಲ್ಲಿ ಮನವಿ ಮಾಡಿದ್ದರು.

ಇನ್ನಿಬ್ಬರು ಪ್ರಮುಖ ಆರೋಪಿಗಳಿಗಾಗಿ ತೀವ್ರ ಹುಡುಕಾಟ ನಡೆಸಿದ್ದಾರೆ. ಈ ಮಧ್ಯೆ ತಲೆಮರೆಸಿಕೊಂಡಿರುವ ಇಬ್ಬರು ಪ್ರಮುಖ ಆರೋಪಿಗಳಾದ ಶರೀಫ್ ಹಾಗೂ ಕೆ.ಎ.ಮಸೂದ್ ಬಗ್ಗೆ ಸುಳಿವು ನೀಡಿದರೆ 10 ಲಕ್ಷ ನಗದು ಬಹುಮಾನ ನೀಡುವುದಾಗಿ ಎನ್ ಐ ಎ ಅಧಿಕಾರಿಗಳು ಇತ್ತೀಚೆಗೆ ಘೋಷಿಸಿದ್ದರು.

ಎನ್‌ಐಎ ಸಲ್ಲಿಸಿದ್ದ ಚಾರ್ಜ್​ಶೀಟ್​ನಲ್ಲಿ ಹಲವು ವಿಚಾರ ಪ್ರಸ್ತಾಪಿಸಲಾಗಿದ್ದು, ಪ್ರಮುಖ ಆರೋಪಿಗಳಾದ ಮೊಹಮ್ಮದ್ ಶರೀಫ್​, ಕೆ.ಎ.ಮಸೂದ್​ ಎಂಬ ಇಬ್ಬರು ಪ್ರಮುಖ ಆರೋಪಿಗಳು ಸೌದಿ ಅರೇಬಿಯಾದಲ್ಲಿ ಕಂಡು ಬಂದಿದ್ದು ಮೊಹಮ್ಮದ್​ ಮುಸ್ತಫಾ, ಎಂ.ಹೆಚ್​.ತುಫೈಲ್​​, ಎಂ.ಆರ್​.ಉಮರ್​ ಫಾರೂಕ್​, ಅಬೂಬಕರ್​​ ಸಿದ್ಧಿಕಿ ಎಂಬುವವರು ಅರಬ್​ ದೇಶದಲ್ಲಿ ಪತ್ತೆಯಾಗಿದ್ದಾರೆ. ಹಂತಕರನ್ನು ಯಾವುದೇ ಕಾರಣಕ್ಕೂ ಬಿಡುಗಡೆ ಮಾಡಬಾರದು. ಜಾಮೀನು ಕೊಡಬಾರದು. ಅವರ ಪರವಾಗಿ ಯಾವುದೇ ವಕೀಲರೂ ವಾದ ಮಂಡಿಸಬಾರದು ಎಂದು ಹೆತ್ತವರು ಮನವಿ ಮಾಡಿದ್ದರು.

Related posts

ಮಂಗಳೂರು: ಇಡೀ ಮಂಗಳೂರಿಗೆ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಕುಖ್ಯಾತ ಪೆಡ್ಲರ್‌ಗಳ ಸೆರೆ, 2.6 ಲಕ್ಷ ಮೌಲ್ಯದ MDMA ಮಾದಕ ವಸ್ತು ವಶ

ಬಂಟ್ವಾಳ: ಜಿಲ್ಲಾಧಿಕಾರಿಯ ನಿರ್ಧಾರಕ್ಕೆ ಸಿಟಿಗೆದ್ದು ಮತ ಬಹಿಷ್ಕಾರದ ಫ್ಲೆಕ್ಸ್ ಹಾಕಿದ ರೈತ..! ಕೋವಿ ಬಳಕೆದಾರರ ಪರವಾಗಿರುವ ಈ ಫ್ಲೆಕ್ಸ್ ನಲ್ಲೇನಿದೆ..?

ಕೊಡಗು:ಗುಡುಗು ಸಹಿತ ಮಳೆಗೆ ರೈತರ ಮುಖದಲ್ಲಿ ಮಂದಹಾಸ