ಕರಾವಳಿಕ್ರೈಂರಾಜಕೀಯಸುಳ್ಯ

ಹಿಂದೂ -ಮುಸ್ಲಿಂ ಸಂಘರ್ಷದ ಕಥೆಯುಳ್ಳ ‘ಬೇರ’ ಸಿನಿಮಾದ ಟೀಸರ್ ನೋಡಿ ‘ಯಾರಿಗೆ ಯಾರನ್ನು ಕೊಲ್ಲುವ ಹಕ್ಕೂ ಇಲ್ಲ’ ಎಂದು ಕಣ್ಣೀರಿಟ್ಟ ಪ್ರವೀಣ್ ನೆಟ್ಟಾರ್ ಪತ್ನಿ

350

ನ್ಯೂಸ್ ನಾಟೌಟ್: ಕರಾವಳಿಯ ಹಿಂದೂ-ಮುಸ್ಲಿಂ ಕೋಮು ಸಂಘರ್ಷದ ಕಥಾ ಹಿನ್ನೆಲೆಯುಳ್ಳ ‘ಬೇರ’ ಸಿನಿಮಾದ ಟೀಸರ್ ಬಿಡುಗಡೆಯಾಗಿದ್ದು ಭಾರಿ ಕುತೂಹಲ ಮೂಡಿಸಿದೆ. ಈ ಸಿನಿಮಾದಲ್ಲಿ ಅಂಥದ್ದೇನಿದೆ? ಎಂದು ಜನ ಕುತೂಹಲದಿಂದ ಕಾಯುತ್ತಿದ್ದಾರೆ. ಈ ನಡುವೆ ದುಷ್ಕರ್ಮಿಗಳ ಅಟ್ಟಹಾಸಕ್ಕೆ ಬಲಿಯಾದ ದಿವಂಗತ ಪ್ರವೀಣ್ ನಟ್ಟಾರ್ ಅವರ ಪತ್ನಿ ನೂತನ ನೆಟ್ಟಾರ್ ‘ಬೇರ’ ಸಿನಿಮಾದ ಟೀಸರ್ ನೋಡಿ ಪ್ರತಿಕ್ರಿಯಿಸಿದ್ದಾರೆ.


ನೂತನ ನೆಟ್ಟಾರ್ ವಿಡಿಯೋ ಸಂದೇಶವೊಂದರಲ್ಲಿ ಬೇರ ಸಿನಿಮಾದ ಬಗೆಗೆ ತಮ್ಮ ಪ್ರತಿಕ್ರಿಯೆ ನೀಡಿ, ‘ಯಾರಿಗೆ ಯಾರನ್ನೂ ಕೊಲ್ಲುವ ಹಕ್ಕಿಲ್ಲ. ಒಂದು ಗಿಡ ನೆಟ್ಟು ಅದು ದೊಡ್ಡ ಮರವಾದ ನಂತರ ಅದನ್ನು ಕಡಿಯುವ ಅಧಿಕಾರ ಯಾರಿಗೂ ಇರುವುದಿಲ್ಲ. ಬೇರ ಸಿನಿಮಾದ ಟೀಸರ್ ನೋಡಿದೆ. ಅದನ್ನು ನೋಡಿದಾಗ ಮನಸ್ಸಿಗೆ ತುಂಬಾ ನೋವಾಯಿತು. ಇಬ್ಬರು ಯುವಕರು ಮತಾಂದರ ದುಷ್ಕೃತ್ಯಕ್ಕೆ ಬಲಿಯಾಗುವಂತಹ ಸನ್ನಿವೇಶದ ಬಗ್ಗೆ ನೋಡಿದೆ. ನನ್ನ ಪತಿಯನ್ನು ಕಳೆದುಕೊಂಡು ನಾನೆಷ್ಟು ನೋವು ಅನುಭವಿಸಿದ್ದೇನೆ ಅನ್ನುವುದು ನನಗೆ ಗೊತ್ತು. ಅಂತಹ ಕಷ್ಟ ಮುಂದೆ ಯಾರಿಗೂ ಬರಬಾರದು’ ಎಂದು ತಿಳಿಸಿದ್ದಾರೆ.

See also  ಮುಸ್ಲಿಂ ಮಹಿಳೆ ಮನೆಗೆ ಹೋಗಿದ್ದ ಹಿಂದೂ ಯುವಕ,ಐದಕ್ಕೂ ಹೆಚ್ಚು ಜನರ ಗುಂಪಿನಿಂದ ಮಾರಾಣಾಂತಿಕ ಹಲ್ಲೆ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget