ಕರಾವಳಿ

ಪ್ರವೀಣ್ ನೆಟ್ಟಾರ್ ಹತ್ಯೆ ನಡೆಸಿದ್ದು ಪಿಎಫ್‌ಐ, ಕೇಂದ್ರ ಗಜೆಟ್ ನಲ್ಲಿ ಸ್ಪಷ್ಟ ಉಲ್ಲೇಖ

ನ್ಯೂಸ್ ನಾಟೌಟ್ : ಐದು ವರ್ಷ ಪಿಎಫ್‌ಐ ಹಾಗೂ ಮಿತ್ರ ಸಂಘಟನೆಗಳನ್ನು ಅನ್ನು ನಿಷೇಧಿಸಿ ಕೇಂದ್ರ ಸರಕಾರ ಮಹತ್ವದ ಆದೇಶ ಹೊರಡಿಸಿದೆ.

ಪಿಎಫ್‌ಐ ಹಾಗೂ ಅದರ ಬೆಂಬಲಿತ ಸಂಸ್ಥೆಯನ್ನು ಯಾಕೆ ನಿಷೇಧ ಮಾಡಿದ್ದೇವೆ ಅನ್ನುವುದರ ಬಗ್ಗೆ ಕೇಂದ್ರ ಸರಕಾರ ಸ್ಪಷ್ಟವಾದ ಕಾರಣಗಳನ್ನು ಗಜೆಟ್ ನಲ್ಲಿ ನೀಡಿದೆ. ಈ ಪ್ರಕಾರವಾಗಿ ನೋಡುವುದಾದರೆ ಬೆಳ್ಳಾರೆಯಲ್ಲಿ ನಡೆದಿದ್ದ ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣ ಅನ್ನುವುದನ್ನು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಇದು ಪಿಎಫ್ಐ ನಡೆಸಿದ ಕೊಲೆ ಎಂದು ಇದರಲ್ಲಿ ತಿಳಿಸಲಾಗಿದೆ.

ಕೇರಳ, ತಮಿಳುನಾಡು ಹಾಗೂ ಕರ್ನಾಟಕದಲ್ಲಿ ನಡೆದ ಹಲವು ಕೊಲೆ ಪ್ರಕರಣಗಳಲ್ಲಿ ಪಿಎಫ್ ಐ ಭಾಗಿಯಾಗಿತ್ತು ಎಂದು ಕೇಂದ್ರ ಗಜೆಟ್ ನಲ್ಲಿ ನಮೂದಿಸಿದೆ. 2016 ರಲ್ಲಿ ಕರ್ನಾಟಕದಲ್ಲಿ ನಡೆದ ರುದ್ರೇಶ್, ಶರತ್ ಕೊಲೆ ಪ್ರಕರಣದಲ್ಲಿ ಪಿಎಫ್ಐ ಕಾರ್ಯಕರ್ತರು ಭಾಗಿಯಾಗಿದ್ದರು  ಎಂದು ತಿಳಿಸಲಾಗಿದೆ.

Related posts

ನಾಳೆ ದೇಶಾದ್ಯಂತ ಸರ್ಕಾರಿ ಬ್ಯಾಂಕ್ ಮು‍ಷ್ಕರ

ಸಮಾಜದ ಅಭಿವೃದ್ಧಿಗೆ ಉತ್ತಮ ಬರಹಗಳು ಅವಶ್ಯಕ : ಡಾ. ಉಮ್ಮರ್ ಬೀಜದಕಟ್ಟೆ

ಮಡಿಕೇರಿ:ಪ್ರವಾಸಿ ತಾಣದಲ್ಲಿ ಪ್ರವಾಸಿಗರ ಜತೆ ಅನುಚಿತವಾಗಿ ವರ್ತಿಸಿದರೆ ಹುಷಾರ್ , ಕೊಡಗು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹೇಳಿದ್ದೇನು?