ಕ್ರೈಂವೈರಲ್ ನ್ಯೂಸ್

ಸಂಸತ್‌ ಭದ್ರತಾ ವೈಫಲ್ಯ: ರಾಜ್ಯಕ್ಕೆ ಬಂದಾಗಲೂ ಪ್ರತಿಕ್ರಿಯೆ ನೀಡಲಿಲ್ಲವೇಕೆ ಪ್ರತಾಪ್‌ ಸಿಂಹ? ಕೊನೆಗೂ ಪತ್ರಕರ್ತರ ಬಳಿ ಸಂಸದ ಹೇಳಿದ್ದೇನು?

258

ನ್ಯೂಸ್ ನಾಟೌಟ್: ಸಂಸತ್‌ ಭದ್ರತಾ ವೈಫಲ್ಯಕ್ಕೆ ಸಂಬಂಧಿಸಿದಂತೆ ಇಬ್ಬರು ದಾಳಿಕೋರರಿಗೆ ಸಂಸತ್‌ ಭವನದ ಪಾಸ್‌ ನೀಡಿದ್ದ ಮೈಸೂರು-ಕೊಡಗು ಬಿಜೆಪಿ ಸಂಸದ ಪ್ರತಾಪ್ ಸಿಂಹ, ಬೆಂಗಳೂರಿನ ಕೆಂಪೇಗೌಡ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ರಾಜ್ಯಕ್ಕೆ ಆಗಮಿಸಿದ್ದಾರೆ. ಈ ವೇಳೆ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ ಎನ್ನಲಾಗಿದೆ.

ಸಂಸತ್ ಭದ್ರತಾ ವೈಫಲ್ಯ ವಿಚಾರಕ್ಕೆ ಸಂಬಂಧಿಸಿದಂತೆ ಈವರೆಗೆ ಒಂದೇ ಒಂದು ಅಧಿಕೃತ ಹೇಳಿಕೆಯನ್ನು ನೀಡದ ಸಂಸದ ಪ್ರತಾಪ್‌ ಸಿಂಹ, ಈವರೆಗೂ ಮಾಧ್ಯಮಗಳಿಂದ ಅಂತರ ಕಾಯ್ದುಕೊಂಡಿದ್ದಾರೆ ಎನ್ನಲಾಗಿದೆ. ನಿನ್ನೆ(ಡಿ.22) ಬೆಂಗಳೂರಿಗೆ ಆಗಮಿಸಿದ್ದ ಸಂಸದ ಮಾಧ್ಯಮಗಳ ಕಣ್ಣಿಗೆ ಬೀಲುತ್ತಿದ್ದಂತೆಯೇ ದಾಳಿಗೆ ಸಂಬಂಧಿಸಿದಂತೆ ಯಾವುದೇ ಪ್ರತಿಕ್ರಿಯೆ ನೀಡದೆ ತೆರಳಿದ್ದಾರೆ ಎಂದು ವರದಿ ತಿಳಿಸಿದೆ.

ಡಿ. 13ರಂದು ಸಂದರ್ಶಕರ ಸೋಗಿನಲ್ಲಿ ಲೋಕಸಭೆಯ ಗ್ಯಾಲರಿಯಿಂದ ಇಬ್ಬರು ಅಪರಿಚಿತರು, ಸಂಸದರು ಕುಳಿತಿರುವ ಸ್ಥಳಕ್ಕೆ ಜಿಗಿದು ಹೊಗೆ ಬಾಂಬ್‌ ಸಿಡಿಸಿದ್ದ ದುಷ್ಕರ್ಮಿಗಳು ಸಂಸದ ಪ್ರತಾಪ್ ಸಿಂಹ ಕಚೇರಿಯಿಂದ ಪಾಸ್ ಪಡೆದು ಒಳ ಪ್ರವೇಶಿಸಿದ್ದರು ಎನ್ನಲಾಗಿದೆ.

“ನಾನೂ ಕೂಡ ಒಬ್ಬ ಜರ್ನಲಿಸ್ಟ್‌, ದಯವಿಟ್ಟು ನನ್ನನ್ನು ಚೇಸ್ ಮಾಡಬೇಡಿ ” ಎಂದಷ್ಟೇ ಹೇಳಿದ್ದಾರೆ. ಈ ನಡುವೆ ಖಾಸಗಿ ಮಾಧ್ಯಮ ಪ್ರತಿನಿಧಿಯೋರ್ವನಿಗೆ, “ನೀನು ಈ ವೃತ್ತಿಗೆ ಹೊಸಬರು. ನಾನು ಐದು ವರ್ಷ ಜರ್ನಲಿಸಂ ಓದಿದ್ದೀನಿ. ಸುಮ್ಮನಿದ್ದು ಬಿಡು” ಎಂದು ಹೇಳಿ ಬೇರೇನು ಮಾತನಾಡದೆ ತೆರಳಿದ್ದಾರೆ ಎನ್ನಲಾಗಿದೆ.

See also  7 ವರ್ಷ ಜೈಲು ಶಿಕ್ಷೆಯಿಂದ ಜನಾರ್ದನ ರೆಡ್ಡಿಗೆ ರಿಲೀಫ್..! ತೆಲಂಗಾಣ ಹೈಕೋರ್ಟ್‌ನಿಂದ ಜಾಮೀನು ಮಂಜೂರು..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget