ಕ್ರೈಂರಾಜಕೀಯವೈರಲ್ ನ್ಯೂಸ್

ಬಿಜೆಪಿ ಸಂಸದ ಪ್ರತಾಪ್ ಸಿಂಹ ಸಹೋದರ ವಿಕ್ರಂ ಸಿಂಹಗೆ ಜಾಮೀನು ನೀಡಿದ್ಯಾರು..? ಈ ಬಗ್ಗೆ ಪ್ರತಾಪ್ ಸಿಂಹ ಹೇಳಿದ್ದೇನು..?

ನ್ಯೂಸ್ ನಾಟೌಟ್: ನಂದಗೋಡನಹಳ್ಳಿಯಲ್ಲಿ 126 ಕ್ಕೂ ಹೆಚ್ಚು ಮರ ಕಡಿದು ಸಾಗಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಸಂಸದ ಪ್ರತಾಪ್ ಸಿಂಹ ಸಹೋದರ ವಿಕ್ರಂ ಸಿಂಹಗೆ ಜಾಮೀನು ನೀಡಿ ಬೇಲೂರಿನ ಸೀನಿಯರ್​ ಸಿವಿಲ್ ಜಡ್ಜ್​​ ಆದೇಶ ಹೊರಡಿಸಿದೆ ಎನ್ನಲಾಗಿದೆ.

ಜಿಲ್ಲೆಯ ಬೇಲೂರು ತಾಲೂಕಿನ ನಂದಗೋಡನಹಳ್ಳಿ ಬಳಿ 126ಕ್ಕೂ ಹೆಚ್ಚು ಮರ ಕಡಿದು ಸಾಗಣೆ ಪ್ರಕರಣದಲ್ಲಿ ನಿನ್ನೆ ಬಂಧಿಸಲಾಗಿತ್ತು. ವಿಕ್ರಂ ಸಿಂಹರನ್ನು ಇಂದು ಜಡ್ಜ್​​ ಮುಂದೆ ಅರಣ್ಯಾಧಿಕಾರಿಗಳು ಹಾಜರುಪಡಿಸಿದ್ದರು.

ವಿಕ್ರಂ ಪರ ವಕೀಲ ಚಂದ್ರೇಗೌಡ, ಧರ್ಮೇಗೌಡ ಜಾಮೀನು ಅರ್ಜಿ ಸಲ್ಲಿಸಿದ್ದರು ಎನ್ನಲಾಗಿದೆ. ವಿಚಾರಣೆ ನಡೆಸಿದ ನ್ಯಾಯಾಧೀಶರು ಜಾಮೀನು ಮಂಜೂರು ಮಾಡಿದ್ದಾರೆ. ಹಾಸನ ‌ಜಡ್ಜ್​​​ ಮನೆಯಿಂದ ವಕೀಲರ ಜೊತೆ ವಿಕ್ರಂ ಸಿಂಹ ಹೊರಬಂದಿದ್ದಾರೆ.
ಪ್ರಕರಣ ಸಂಬಂಧ ರಾಕೇಶ್ ಶೆಟ್ಟಿ, ಜಯಮ್ಮ ವಿರುದ್ಧ ಬೇಲೂರು ತಹಶೀಲ್ದಾರ್ ಮಮತಾ ನೀಡಿದ್ದ ದೂರು ಆಧರಿಸಿ FIR ದಾಖಲಾಗಿತ್ತು. ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪ ಹಿನ್ನೆಲೆ ವಿಕ್ರಂ ಸಿಂಹರನ್ನು ಅರೆಸ್ಟ್ ಮಾಡಲಾಗಿತ್ತು.

ನನ್ನ ವಿರುದ್ಧ ಎಷ್ಟು ಪಿತೂರಿ ಮಾಡ್ತಿದ್ದಾರೆ ಎಂಬುದನ್ನ ಟೈಮ್ ಬರಲಿ ಎಲ್ಲದನ್ನೂ ಹೇಳಲುತ್ತೇನೆ ಎಂದು ವಿಕ್ರಂ ಸಿಂಹ ಕಿಡಿ ಕಾರಿದ್ದಾರೆ. ಆರೋಗ್ಯ ತಪಾಸಣೆಗೆ ಕರೆತಂದ ವೇಳೆ ಆಕ್ರೋಶ ವ್ಯಕ್ತಪಡಿಸಿದ್ದರು ಎನ್ನಲಾಗಿದೆ.

ಪ್ರಕರಣ ಸಂಬಂಧ ಮೈಸೂರಿನಲ್ಲಿ ಸಂಸದ ಪ್ರತಾಪ್ ಸಿಂಹ ಪ್ರತಿಕ್ರಿಯೆ ನೀಡಿದ್ದು, ನನ್ನ ಮುಗಿಸೋಕೆ ಎಲ್ಲಾ ಪ್ರಯತ್ನವೂ ಮಾಡುತ್ತಿದ್ದೀರಿ. ನಿಮ್ಮ ಮಗನನ್ನ ಸಂಸದನನ್ನಾಗಿ ಮಾಡಲು ಎಲ್ಲಾ ಪ್ರಯತ್ನ ಮಾಡುತ್ತಿದ್ದೀರಿ. ನನ್ನ ವೃದ್ಧ ತಾಯಿ ಇದ್ದಾರೆ, ನನ್ನ ತಂಗಿ ಇದ್ದಾಳೆ ಅವರನ್ನೂ ನೀವು ಅರೆಸ್ಟ್ ಮಾಡಿ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಕಿಡಿ ಕಾರಿದ್ದಾರೆ ಎನ್ನಲಾಗಿದೆ.

https://newsnotout.com/2023/12/bigg-boss-cadidate-health-issue/

Follow us for more updates:

FB PAGE : https://www.facebook.com/NewsNotOut2023

Insta : https://www.instagram.com/newsnotout/

Tweet : https://twitter.com/News_Not_Out

YouTube https://www.youtube.com/@newsnotout8209

Koo apphttps://www.kooapp.com/profile/NewsNotOut

Website : https://newsnotout.com/

Related posts

ಉಗ್ರರ ಒಳನುಸುಳುವಿಕೆಗೆ ಸೇನೆಯಿಂದ ತಕ್ಕ ಉತ್ತರ..! ರಾತ್ರೋರಾತ್ರಿ ಉಗ್ರನ ಶವ ಎಳೆದೊಯ್ದದ್ದೇಗೆ ಸಹಚರರು..?

ಫೇಸ್‌ಬುಕ್‌ ಸ್ಟೇಟಸ್ ನಲ್ಲಿ ಪಾಕ್ ಧ್ವಜ ಹಾಕಿದ್ದ ಯುವಕನನ್ನು ಬಂಧಿಸಿದ್ದೇಕೆ? ಯಾರೀತ..? ಏನಿದು ಪ್ರಕರಣ?

ಡೆಂಗ್ಯೂಗೆ 6 ವರ್ಷದ ಬಾಲಕಿ ದುರಂತ ಅಂತ್ಯ..! 4 ಲಕ್ಷ ರೂ. ಖರ್ಚು ಮಾಡಿದ್ರು ಉಳಿಸಿಕೊಳ್ಳಲಾಗಲಿಲ್ಲ ಎಂದು ತಂದೆ ಕಣ್ಣೀರು..!