ಕರಾವಳಿ

ಬಿಜೆಪಿ ಸರಕಾರದವ್ರು ನನ್ನ ಗನ್ ಮ್ಯಾನ್ ಕಸ್ಕೊಂಡ್ರು..!

397

ನ್ಯೂಸ್ ನಾಟೌಟ್ : ಹಿಂದುತ್ವದ ಪ್ರಖರ ಕಿಡಿ ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಬಿಜೆಪಿ ಸರಕಾರದ ವಿರುದ್ಧ ಬಹಿರಂಗವಾಗಿ ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ. ಖಾಸಗಿ ಟೀವಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಮುತಾಲಿಕ್ ಈ ವಿಚಾರ ಬಹಿರಂಗಪಡಿಸಿದ್ದಾರೆ. ಹಾಗಾದರೆ ಮುತಾಲಿಕ್ ಏನು ಹೇಳಿದ್ರು ಅನ್ನುವುದನ್ನು ನೋಡೋಣ ಬನ್ನಿ.

ಕಾಂಗ್ರೆಸ್ ಸರಕಾರ ಇದ್ದಾಗ ನನ್ನ ಪ್ರಾಣ ರಕ್ಷಣೆಗೆ ಇಬ್ಬರು ಗನ್ ಮ್ಯಾನ್ ಇದ್ದರು. ಬಿಜೆಪಿ ಸರಕಾರ ಬಂದಾಗ ಒಬ್ಬರು ಗನ್ ಮ್ಯಾನ್ ಅನ್ನು ವಾಪಸ್ ಪಡಕೊಂಡ್ರು. ಇನ್ನು ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿದ್ದಾಗ ನನಗೆ ಗನ್ ಲೈಸನ್ಸ್ ಕೊಟ್ರು. ಬಿಜೆಪಿ ಸರಕಾರ ಇದ್ದಾಗ ಅದನ್ನು ರದ್ದು ಮಾಡಿದ್ರು. ಬಿಜೆಪಿಯವರು ಯಾಕೆ ನನ್ನ ವಿಚಾರದಲ್ಲಿ ಹೀಗೆ ಮಾಡಿದ್ರು ಅಂದರೆ ನನ್ನ ಮೇಲೆ ಯಾರಾದರೂ ದಾಳಿ ಮಾಡಿ ನಾನು ಸತ್ತು ಹೋದರೆ ನನ್ನ ಹೆಣವನ್ನು ಮುಂದೆ ಇಟ್ಟುಕೊಂಡು ಹಿಂದೂ ನಾಯಕನ ಹತ್ಯೆ ಎಂದು ಸಮಾಜದಲ್ಲಿ ಬಿಂಬಿಸಿ ಮತ ಪಡೆದುಕೊಳ್ಳುವುದಕ್ಕೆ ಆಗಿದೆ ಎಂದು ಮುತಾಲಿಕ್‌ ಟೀಕಿಸಿದ್ದಾರೆ. ಇದೇ ವೇಳೆ ಮಾತು ಮುಂದುವರಿಸಿದ ಅವರು, ನನ್ನ ಜೀವದ ಬಗ್ಗೆ ನನಗೆ ಭಯವಿಲ್ಲ. ಹಿಂದೂತ್ವಕ್ಕಾಗಿ ಜೀವನದ ಕೊನೆ ಉಸಿರುವ ಇರುವ ತನಕ ಹೋರಾಡುವುದಕ್ಕೆ ಸಿದ್ಧವಾಗಿದ್ದೇನೆ. ಯಾವುದೇ ಬೆದರಿಕೆಗಳಿಗೆ ಹೆದರುವುದಿಲ್ಲ ಎಂದು ತಿಳಿಸಿದರು.

See also  Exit Poll Results 2024 Lokasabha election: ಬಿಜೆಪಿ ನೇತೃತ್ವದ NDA ಹಿಡಿಯಲಿದೆ ಅಧಿಕಾರ, ಕರ್ನಾಟಕದಲ್ಲಿ ಏನಾಗಬಹುದು ಫಲಿತಾಂಶ, ಇಲ್ಲಿದೆ ಎಕ್ಸಿಟ್ ಪೋಲ್ ರಿಸಲ್ಟ್..
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget