ಕರಾವಳಿಕ್ರೀಡೆ/ಸಿನಿಮಾಕ್ರೈಂ

ಅನುಮಾನವಿದ್ದರೆ ಯಾರಾದರೇನು ಎಲ್ಲರನ್ನೂ ಮಂಪರು ಪರೀಕ್ಷೆಗೊಳಪಡಿಸಿ; ಸೌಜನ್ಯ ಪ್ರಕರಣದ ಬಗ್ಗೆ ಪ್ರಕಾಶ್ ರಾಜ್ ಹೇಳಿದ್ದೇನು?

ನ್ಯೂಸ್ ನಾಟೌಟ್ : ಸೌಜನ್ಯ ಪ್ರಕರಣದ ಮರು ತನಿಖೆಯ ಕೂಗು ಹೆಚ್ಚುತ್ತಿದ್ದಂತೆ ನಿನ್ನೆ (ಆಗಸ್ಟ್ 8 ರಂದು) ಸುಳ್ಯದಲ್ಲಿ ಬೃಹತ್ ಜಾಥ ನಡೆದಿತ್ತು. ಜೊತೆಗೆ ಮಹೇಶ್ ಶೆಟ್ಟಿ ತಿಮರೋಡಿ ನ್ಯಾಯಕ್ಕಾಗಿ ಗರ್ಜಿಸಿದ್ದರು. ಸುಳ್ಯದ ಈ ಹೋರಾಟದ ಬಗ್ಗೆ ನ್ಯೂಸ್ ನಾಟೌಟ್ ನೇರ ಪ್ರಸಾರ ಮಾಡಿತ್ತು. ಇದರ ಬೆನ್ನಲ್ಲೆ ಬಹುಭಾಷಾ ನಟ ಪ್ರಕಾಶ್ ರಾಜ್ ಈ ಬಗ್ಗೆ ಮಾತನಾಡಿದ್ದಾರೆ. ಗುಪ್ತಚರ ಇಲಾಖೆಗೆ ಅನುಮಾನಗಳಿದ್ದರೆ ಯಾರನ್ನು ಬೇಕಾದರೂ ಮಂಪರು ಪರೀಕ್ಷೆಗೆ ಒಳಪಡಿಸುವುದರಲ್ಲಿ ತಪ್ಪೇನಿದೆ. ಪೊಲೀಸರು ಇದನ್ನು ನೋಡಿಕೊಳ್ಳುತ್ತಾರೆ. ಸತ್ಯ ಹೊರಗೆ ಬಂದೇ ಬರುತ್ತದೆ ಎಂದು ನಟ ಪ್ರಕಾಶ್ ರಾಜ್‌ ಹೇಳಿದ್ದಾರೆ.

ಶಿವಮೊಗ್ಗ ನಗರದಲ್ಲಿ ಪತ್ರಕರ್ತರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿರುವ ಅವರು, ಉಜಿರೆಯಲ್ಲಿ ಸೌಜನ್ಯ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ.

ಧರ್ಮದ ಸೋಗಿನಲ್ಲಿರುವರು ತಪ್ಪು ಮಾಡಿದರೆ ಅದನ್ನು ತನಿಖೆ ಮಾಡುವುದು ಸರಿಯಾಗಿಯೇ ಇದೆ ಎಂದು ಹೇಳಿದ್ದಾರೆ. ಯಾರನ್ನಾದರೂ ಮಂಪರು ಪರೀಕ್ಷೆಗೆ ಒಳಪಡಿಸಬೇಕೆಂದು ಆಗ್ರಹ ಕೇಳಿ ಬಂದರೆ, ಇದು ತನಿಖೆಯ ಭಾಗವಾಗಿದ್ದರೆ, ನಿಜಾಂಶ ತಿಳಿಯುವ ಅವಶ್ಯಕತೆ ಇದ್ದರೆ ಮಾಡಲಿ. ಈ ಬಗ್ಗೆ ನನ್ನ ಆಕ್ಷೇಪವೇನೂ ಇಲ್ಲ. ಕೊನೆಯದಾಗಿ ಧರ್ಮ ಉಳಿಯಬೇಕು ಎಂದಿದ್ದಾರೆ.

ಜಸ್ಟಿಸ್​ ಫಾರ್​ ಸೌಜನ್ಯ ಕೂಗು ರಾಜ್ಯದೆಲ್ಲೆಡೆ ಜೋರಾಗಿದೆ. ಪ್ರಕರಣ ನಡೆದು ದಶಕಗಳೇ ಉರುಳಿದರೂ ನೊಂದ ಕುಟುಂಬಕ್ಕೆ ನ್ಯಾಯ ಸಿಕ್ಕಿಲ್ಲ. ಸೌಜನ್ಯ ಕುಟುಂಬಸ್ಥರು ಸತತ ಹೋರಾಟ ನಡೆಸುತ್ತಿದ್ದಾರೆ. ಇತ್ತೀಚೆಗೆ ಸಿಬಿಐ ಕೋರ್ಟ್ ತೀರ್ಪಿನ ಬಳಿಕ ಮತ್ತೆ ಹೋರಾಟಗಳು ಜೋರಾಗಿವೆ. ಸ್ಯಾಂಡಲ್​ವುಡ್ ಹಲವು​ ನಟರು ಈ ಬಗ್ಗೆ ಮಾತನಾಡಿದ್ದಾರೆ ಮತ್ತು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

Related posts

ಮಟಮಟ ಮಧ್ಯಾಹ್ನ ಗುಂಡಿನ ದಾಳಿ..! ಅನಾಥ ಸ್ಥಿತಿಯಲ್ಲಿ ಕಾರಿನ ಬಳಿ ಇಬ್ಬರ ಹೆಣ ಪತ್ತೆ..! ಈ ಬಗ್ಗೆ ಪೊಲೀಸರು ಹೇಳಿದ್ದೇನು..?

ಮಡಿಕೇರಿ:’ಜೀವನದಾರಿ’ ವೃದ್ಧಾಶ್ರಕ್ಕೆ ಭೇಟಿ ನೀಡಿ ಧೈರ್ಯ ತುಂಬಿದ ಶಾಸಕ ಮಂತರ್‌ ಗೌಡ,ಸಮಾಜ ಸೇವಕ ರಮೇಶ್ ಮತ್ತು ರೂಪ ದಂಪತಿ ಭಾವಚಿತ್ರಕ್ಕೆ ಪುಷ್ಪಾರ್ಚನೆ

ಸುಳ್ಯ: ಅತ್ಯಾಕರ್ಷಕ ವಸ್ತ್ರಗಳ ‘ಪಾದುಕ ಡ್ರೆಸ್ ಕಲೆಕ್ಷನ್’ ಶುಭಾರಂಭ, 1 ಗ್ರಾಂ ಚಿನ್ನದ ಗ್ಯಾರಂಟಿ ಆಭರಣಗಳು ಮತ್ತು ವಾಚ್ ಗಳು ಲಭ್ಯ