ಕ್ರೈಂದೇಶ-ಪ್ರಪಂಚದೇಶ-ವಿದೇಶರಾಜಕೀಯರಾಜ್ಯ

ಪ್ರಜ್ವಲ್ ರೇವಣ್ಣನ ವಿದೇಶದಿಂದ ವಿಡಿಯೋ ಮೂಲಕ ಪ್ರತ್ಯಕ್ಷ..! ತಾತನ ಎಚ್ಚರಿಕೆಗೆ ಹೆದರಿದನಾ ಮೊಮ್ಮಗ..? ವಿಡಿಯೋದಲ್ಲಿ ಪ್ರಜ್ವಲ್ ರೇವಣ್ಣ ಹೇಳಿದ್ದೇನು..?

ನ್ಯೂಸ್ ನಾಟೌಟ್: ಪ್ರಜ್ವಲ್ ರೆವಣ್ಣ ವಿದೇಶದಿಂದ ಇಂದು(ಮೇ.27) ವಿಡಿಯೋ ಮೂಲಕ ಪ್ರತ್ಯಕ್ಷವಾಗಿದ್ದು, ಮೇ.೩೦ರಂದು ರಾಜ್ಯಕ್ಕೆ ಬಂದು ಎಸ್.ಐ.ಟಿ ಮುಂದೆ ಬರುವುದಾಗಿ ಹೇಳಿಕೊಂಡಿದ್ದಾರೆ.

“ನನಗೆ ಈ ವಿಷಯ ವಿದೇಶಕ್ಕೆ ಹೋದ 4 ದಿನಗಳ ಬಳಿಕ ನನಗೆ ಪ್ರಕರಣ ದಾಖಲಾಗಿರುವ ಬಗ್ಗೆ ತಿಳಿಯಿತು. ಬಳಿಕ ನಾನು ಎಸ್.ಐ.ಟಿ ಗೆ 7 ದಿನಗಳ ಅವಕಾಶ ಕೇಳಿದೆ ಆದರೆ, ಕಾಂಗ್ರೆಸ್ ನ ಹಲವರ ರಾಜಕೀಯ ಪಿತೂರಿಯಿಂದ ಅದು ಮಾನ್ಯವಾಗಲಿಲ್ಲ. ಆ ನಂತರ ನಾನು ಡಿಪ್ರೆಷನ್ ಗೆ ಹೋಗಿದ್ದೆ” ಎಂದು ಪ್ರಜ್ವಲ್ ರೇವಣ್ಣ ಕ್ಷಮೆ ಯಾಚಿಸಿದ್ದಾರೆ. ಎಸ್.ಐ.ಟಿ ಮುಂದೆ ಮೇ.31 ಕ್ಕೆ ನಾನೇ ಹಾಜರಾಗುತ್ತೇನೆ ಎಂದಿದ್ದು, ಇದು ರಾಜಕೀಯವಾಗಿ ನಾನು ಬೆಳೆಯುತ್ತಿರುವುದಕ್ಕೆ ಸುಳ್ಳು ಪ್ರಕರಣಗಳನ್ನು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಕ್ಷೇತ್ರದ ಜನ, ಕುಮಾರಸ್ವಾಮಿ, ತಾತ ದೇವೇಗೌಡರು ಮತ್ತು ತಂದೆ, ಕುಟುಂಬಸ್ಥರಲ್ಲಿ ವಿಡಿಯೋದಲ್ಲಿ ಕ್ಷಮೆ ಕೇಳಿದ್ದಾರೆ. ಪ್ರಜ್ವಲ್‌ ನೀನು ಎಲ್ಲಿಯೇ ಇದ್ದರೂ ಪೋಲಿಸರ ಮುಂದೆ ಶರಣಾಗಿ, ವಿಚಾರಣೆಯನ್ನು ಎದುರಿಸಬೇಕು, ನನ್ನ ತಾಳ್ಮೆಯನ್ನು ಪರೀಕ್ಷಿಸಬೇಡ ಎಂದು ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡ ಮೊಮ್ಮಗನಿಗೆ ಖಡಕ್ ಎಚ್ಚರಿಕೆ ನೀಡಿದ್ದರು. ಈಗ ಪ್ರಜ್ವಲ್ ವಿಡಿಯೋವನ್ನು ವಿದೇಶದಿಂದ ಬಿಡುಗಡೆ ಮಾಡಿದ್ದಾರೆ.

Click 👇

https://newsnotout.com/2024/05/kannada-news-festival-of-ajja-in-uttara-kannada
https://newsnotout.com/2024/05/fans-of-darshan-and-arjuna-memory
https://newsnotout.com/2024/05/dharmasthala-temple-visit-by-revanna-and-reaction

Related posts

ಬೆಳ್ತಂಗಡಿ ಮಾಜಿ ಶಾಸಕ ವಸಂತ​ ಬಂಗೇರ ನಿಧನ..! ಐದು ಬಾರಿ ಶಾಸಕರಾಗಿದ್ದ ಪ್ರಭಾವಿ ರಾಜಕಾರಣಿ ಇನ್ನು ನೆನಪು ಮಾತ್ರ..!

ನರ್ಸರಿಯಿಂದ 8ನೇ ತರಗತಿವರೆಗಿನ ಶಾಲೆಗಳಿಗೆ 5 ದಿನ ರಜೆ – ಶಿಕ್ಷಣಾಧಿಕಾರಿ ಆದೇಶ! ಯಾವ ಯಾವ ಜಿಲ್ಲೆಗಳಲ್ಲಿ ರಜೆ..? ಇಲ್ಲಿದೆ ಸಂಪೂರ್ಣ ಮಾಹಿತಿ

ಯತ್ನಾಳ್‌ಗೆ ಹುಚ್ಚು ನಾಯಿ ಎಂದ್ರಾ ರೇಣುಕಾಚಾರ್ಯ..? ಏನಿದು ಸ್ವಪಕ್ಷೀಯರ ಗುದ್ದಾಟ..?