ಕ್ರೈಂರಾಜಕೀಯರಾಜ್ಯ

ಪ್ರಜ್ವಲ್ ರೇವಣ್ಣಗೆ ಮತ್ತಷ್ಟು ದಿನ ಜೈಲು, ಜಾಮೀನು ಅರ್ಜಿ ಮುಂದೂಡಿಕೆ..! ಇನ್ನೂ ವಿಚಾರಣೆ ಮುಗಿದಿಲ್ಲವೇಕೆ..?

260

ನ್ಯೂಸ್‌ ನಾಟೌಟ್‌ : ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಜ್ವಲ್ ರೇವಣ್ಣ ಜಾಮೀನು ಅರ್ಜಿಯನ್ನು ಕೋರ್ಟ್​ ಮುಂದೂಡಿದೆ.

ಹೊಳೆನರಸೀಪುರ ಪ್ರಕರಣದಲ್ಲಿ ಜಾಮೀನು ಕೋರಿ ಪ್ರಜ್ವಲ್ ಪರ ವಕೀಲರು ಅರ್ಜಿ ಸಲ್ಲಿಸಿದ್ದು, ನಿರೀಕ್ಷಣಾ ಜಾಮೀನು ಅರ್ಜಿ ಪರಿಗಣಿಸುವಂತೆ ವಕೀಲರ ಮನವಿ ಮಾಡಿದ್ದಾರೆ. ಆದ್ರೆ, ಕೃಷ್ಣ ಎಸ್ ದೀಕ್ಷಿತ್‌ ಅವರಿದ್ದ ಹೈಕೋರ್ಟ್ ಪೀಠ, ತನಿಖೆ ನಡೆಯಲಿ. ಶೀಘ್ರ ವಿಚಾರಣೆ ಅಗತ್ಯವಿಲ್ಲ ಎಂದು ಹೇಳಿ ಜಾಮೀನು ಅರ್ಜಿ ವಿಚಾರಣೆಯನ್ನು ಎರಡು ವಾರಗಳ ಕಾಲ ಮುಂದೂಡಿ ಆದೇಶ ಹೊರಡಿಸಿದ್ದಾರೆ. ಇದರಿಂದ ಪ್ರಜ್ವಲ್ ರೇವಣ್ಣಗೆ ಹೊಳೆನರಸೀಪುರ ಪ್ರಕರಣದಲ್ಲಿ ಎರಡೂ ವಾರಗಳ ಕಾಲ ಪರಪ್ಪನ ಅಗ್ರಹಾರ ಜೈಲೇ ಗತಿಯಾಗಿದೆ.

ಪ್ರಜ್ವಲ್ ರೇವಣ್ಣ ಪರ ವಕೀಲರು, ವಿಚಾರಣೆ ತ್ವರಿತವಾಗಿ ನಡೆಸುವಂತೆ ಜಡ್ಜ್‌ಗೆ ಮನವಿ ಮಾಡಿದರು. ಇದಕ್ಕೆ ನ್ಯಾಯಮೂರ್ತಿಗಳು ಪ್ರತಿಕ್ರಿಯಿಸಿ, ಆಕ್ಷೇಪಣೆ ಸಲ್ಲಿಕೆ ಆಗಲಿ ನೋಡೋಣ ಎಂದು ಹೇಳಿ 2 ವಾರಗಳ ಕಾಲ ವಿಚಾರಣೆಯನ್ನು ಮುಂದೂಡಿದರು. ಇದೇ ವೇಳೆ ಸರ್ಕಾರದ ಪರ ಎಸ್‌ಪಿಸಿ ಜಗದೀಶ್ ಹಾಜರಾಗಿದ್ದರು. ಪ್ರಜ್ವಲ್‌ ವಿರುದ್ಧ ದಾಖಲಾಗಿರುವ 5 ಪ್ರಕರಣಗಳಲ್ಲಿ ಎಸ್‌ಐಟಿ ವಿಚಾರಣೆ ನಡೆಸಿ ಹೇಳಿಕೆಯನ್ನು ದಾಖಲಿಸಿಕೊಂಡಿದೆ.

ದೂರುದಾರ ಮಹಿಳೆಯರ ಕುರಿತು ತನಿಖಾಧಿಕಾರಿಗಳು ಪ್ರಶ್ನಿಸಿದಾಗ ʼನನಗೇನೂ ಗೊತ್ತಿಲ್ಲ’ ಎಂದು ತಿಳಿಸಿದ್ದರು. ಇತ್ತೀಚೆಗೆ ಪ್ರಜ್ವಲ್‌ ವಿರುದ್ಧ ದೂರು ನೀಡಿದ್ದ ಸಂತ್ರಸ್ತೆಯ ಬಗ್ಗೆ ವಿಚಾರಿಸಿದಾಗ, ʼನನಗೆ ಅವರು ಯಾರೆಂಬುದೇ ಗೊತ್ತಿಲ್ಲ’ ಎಂದು ಪ್ರಜ್ವಲ್‌ ಹೇಳಿದ್ದಾರೆನ್ನಲಾಗಿದೆ. ಹಾಗಾಗಿ ತನಿಖೆಗೆ ಸಹಕಾರ ನೀಡಿಲ್ಲ ಎಂದು ಮತ್ತೆ ವಿಚಾರಣೆ ನಡೆಸಲಾಗುತ್ತಿದೆ. ಈ ನಡುವೆ ಪ್ರಜ್ವಲ್‌ ರೇವಣ್ಣ ಜಾಮೀನು ಕೋರಿ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ. ಅದನ್ನು ಕೋರ್ಟ್ ಮುಂದೂಡಿದೆ.

Click 👇

https://newsnotout.com/2024/07/pendrive-prajwal-revanna-tanisha-actor-kannada-news-viral-news
https://newsnotout.com/2024/07/conflict-with-lover-private-bus-in-udupi-travellers-are-confused-kannada-news
https://newsnotout.com/2024/07/google-pay-phone-pay-in-ksrtc-kannada-news-govt-bus-updated-in-terms-of-payment
https://newsnotout.com/2024/07/dengue-kannada-newsfever-8-year-old-girl-nomore-doctors
https://newsnotout.com/2024/07/21-ias-officers-transferred-to-different-districts-and-postions-karnataka-government-order
See also  ಸ್ನೇಹಿತನ ಕತ್ತು ಕೊಯ್ದು ರಕ್ತ ಕುಡಿದ ಕ್ರೂರಿ, ಬೆಚ್ಚಿಬಿದ್ದ ಜನತೆ! ಏನಿದು ವಿಚಿತ್ರ ದ್ವೇಷದ ಕಥೆ!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget