ಕ್ರೈಂಬೆಂಗಳೂರುರಾಜಕೀಯರಾಜ್ಯ

ಜೈಲಿನಲ್ಲಿರುವ ಪ್ರಜ್ವಲ್ ರೇವಣ್ಣ ಬಳಿ 15 ಸಿಮ್ ಕಾರ್ಡ್ ಗಳು ಪತ್ತೆ..! ಒಂದು ನಂಬರ್ ಬ್ಲಾಕ್ ಮಾಡಿದ್ರೆ ಮತ್ತೊಂದು ನಂಬರ್ ನಿಂದ ಕಾಲ್..! ತನಿಖೆಯಲ್ಲಿ ಮತ್ತಷ್ಟು ಕರಾಳ ಮುಖ ಬಯಲು..!

ನ್ಯೂಸ್ ನಾಟೌಟ್: ಜೈಲಿನಲ್ಲಿರುವ ಅತ್ಯಾಚಾರ ಆರೋಪಿ, ಮಾಜಿ ಸಂಸದ ಪ್ರಜ್ವಲ್ ರೇವಣ್ಣನ (Prajwal Revanna) ಮತ್ತಷ್ಟು ನೀಚ ಕೃತ್ಯಗಳು ಬಯಲಾಗುತ್ತಿವೆ. ಪ್ರಜ್ವಲ್ ರೇವಣ್ಣ ಬಳಿ ಒಂದಲ್ಲ.. ಎರಡಲ್ಲ.. ಬರೋಬ್ಬರಿ 15 ಸಿಮ್‍ಗಳು ಪತ್ತೆಯಾಗಿವೆ.

ಒಂದು ನಂಬರ್ ಬ್ಲಾಕ್ ಮಾಡಿದ್ರೆ ಮತ್ತೊಂದು ನಂಬರ್ ನಿಂದ ಕಾಲ್. ಹೀಗೆ ಪ್ರಜ್ವಲ್ ರೇವಣ್ಣ ಬರೋಬ್ಬರಿ 15 ಸಿಮ್ ಕಾರ್ಡ್ ಹೊಂದಿದ್ದ ಎಂಬ ಮಾಹಿತಿ ಲಭ್ಯವಾಗಿದೆ. ಕೆಲ ಪರಿಚಿತರ ಪತ್ನಿಯರೇ ಪ್ರಜ್ವಲ್‍ಗೆ ಟಾರ್ಗೆಟ್ ಆಗಿದ್ದರು ಎಂಬ ವಿಷಯ ಬಯಲಾಗಿದ್ದು, ಕೆಲಸ ಕೇಳಿಕೊಂಡು, ಮಕ್ಕಳಿಗೆ ಸೀಟ್ ಕೇಳಿಕೊಂಡು ಬಂದವರ ಮೇಲೂ ಕಣ್ಣು ಹಾಕಿದ್ದ. ಅವರ ಬಳಿ ಫೋನ್ ನಂಬರ್ ಪಡೆದು ಪದೇ ಪದೇ ಕಾಲ್ ಮಾಡುತ್ತಿದ್ದ. ಕ್ರಮೇಣ ಅವರೊಂದಿಗೆ ಸಲುಗೆ ಬೆಳೆಸಿ ಕರೆ ಮಾಡುತ್ತಿದ್ದ. ನಂತರ ವೀಡಿಯೋ ಕಾಲ್ ಮಾಡಿ ಬೆತ್ತಲಾಗುವಂತೆ ಬೆದರಿಕೆ ಹಾಕುತ್ತಿದ್ದ ಎನ್ನಲಾಗಿದೆ.

ಇಷ್ಟು ಮಾತ್ರವಲ್ಲದೇ ನನ್ನೊಂದಿಗೆ ಸಹಕರಿಸದಿದ್ದರೆ ಫೋಟೋ ವೈರಲ್ ಮಾಡುವುದಾಗಿ ಬ್ಲ್ಯಾಕ್‍ಮೇಲ್ ಮಾಡುತ್ತಿದ್ದ. ಬೆದರಿಕೆಗೆ ಹೆದರಿ ನಗ್ನರಾಗಿರುವುದಾಗಿ ಇತ್ತೀಚಿಗೆ ಮತ್ತೊಬ್ಬ ಸಂತ್ರಸ್ತೆ ಕೊಟ್ಟ ದೂರಿನಲ್ಲಿ ಬಯಲಾಗಿದೆ. ಕಾನೂನು ಮೂಲಕ ಶಿಕ್ಷೆಗಳು ಮತ್ತಷ್ಟು ಕಠಿಣವಾಗುವ ಸಾಧ್ಯತೆಗಳಿವೆ.

Click 👇

https://newsnotout.com/2024/06/actor-darshan-in-jail-accused-number-is-in-trendingkannada-news
https://newsnotout.com/2024/06/drupadi-murmu-kannada-news-healthcare-from-govt-announced-by-president
https://newsnotout.com/2024/06/sea-flood-issue-ullala-house-collapsed-kannada-news-sea-bank-slide
https://newsnotout.com/2024/06/statement-of-telugu-actor-to-darshan-kannada-news-sandalwood-news

Related posts

ಇಂದು(ಡಿ.1) ಮುಂಜಾನೆ 7 ಮಂದಿ ನಕ್ಸಲರ ಎನ್‌ ಕೌಂಟರ್‌..! ಪೊಲೀಸ್ ಮಾಹಿತಿದಾರರೆಂದು ನಂಬಿಸಿ ಇಬ್ಬರು ಬುಡಕಟ್ಟು ಜನರನ್ನು ಕೊಂದಿದ್ದ ನಕ್ಸಲರು..!

ಸೋದರಳಿಯನಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ವ್ಯಕ್ತಿ! ರಕ್ಷಿಸಲು ಬಂದ ಪತ್ನಿಯೂ ಸುಟ್ಟು ಕರಕಲು! ಏನಿದು ಗಲಾಟೆ?

ವಿಟ್ಲ:ನಿಯಂತ್ರಣ ಕಳೆದುಕೊಂಡು ರಿಕ್ಷಾ ಪಲ್ಟಿ,ಪಂಜದ ಆಟೋ ಚಾಲಕ ಸ್ಥಳದಲ್ಲೇ ಸಾವು