ಕ್ರೈಂದೇಶ-ವಿದೇಶರಾಜಕೀಯರಾಜ್ಯವೈರಲ್ ನ್ಯೂಸ್

ಪ್ರಜ್ವಲ್ ರೇವಣ್ಣ ವಿಡಿಯೋ ಪ್ರಕರಣ: ಸಂಸದರ ಕಚೇರಿ ಬಾಗಿಲ ಬಳಿ ಸಿಕ್ಕ ಪತ್ರದಲ್ಲೇನಿತ್ತು..? ಚುನಾವಣಾ ಫಲಿತಾಂಶಕ್ಕೂ ಮೊದಲೂ ಶುಭಾಶಯ ಕೋರಿದ್ದೇಕೆ ಆತ..?

245

ನ್ಯೂಸ್ ನಾಟೌಟ್: ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಅವರದ್ದು ಎನ್ನಲಾದ ಆಶ್ಲೀ* ವೀಡಿಯೋಗಳು ದೇಶಾದ್ಯಂತ ಭಾರೀ ಚರ್ಚೆ ಹುಟ್ಟುಹಾಕಿದ್ದು, ಈ ನಡುವೆ ಲೋಕಸಭಾ ಚುನಾವಣಾ ಸುದ್ದಿ ಮಂಕಾಗಿವೆ. ಈ ನಡುವೆ ಅಭಿಮಾನಿಯೊಬ್ಬ ಪ್ರಜ್ವಲ್‌ ರೇವಣ್ಣಗೆ ಶುಭಾಶಯಗಳನ್ನು ತಿಳಿಸಿ ಪತ್ರ ಬರೆದದ್ದು ಕುತೂಹಲ ಮೂಡಿಸಿದೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಯಾಗಿ ಚುನಾವಣಾ ಅಖಾಡಕ್ಕೆ ಇಳಿದಿರುವ ಪ್ರಜ್ವಲ್‌ ರೇವಣ್ಣಗೆ ಅಭಿಮಾನಿ ಶುಭಾಶಯಗಳನ್ನು ತಿಳಿಸಿ ಪತ್ರ ಬರೆದಿದ್ದಾನೆ.

ಈ ಪತ್ರ ಹಾಸನ ನಗರದ ಆರ್.ಸಿ. ರಸ್ತೆಯಲ್ಲಿರುವ ಸಂಸದರ ಕಚೇರಿ ಬಾಗಿಲ ಬಳಿ ಸಿಕ್ಕಿದೆ. ಪತ್ರದಲ್ಲೇನಿದೆ..?: ನೀವು ಈಗಾಗಲೇ ಹಾಸನ ಕ್ಷೇತ್ರದಿಂದ ಎರಡು ಬಾರಿ ಸಂಸದರಾಗಿ ಆಯ್ಕೆಯಾಗಿದ್ದೀರಿ. ಈ ಸಲವೂ ತಾವುಗಳೇ ಚುನಾಯಿತರಾಗುತ್ತೀರಿ ಎಂದು ನಾನು ನಂಬುತ್ತೇನೆ. ಇನ್ನು ಮುಂದೆಯೂ ಹಾಸನ ಮತ್ತು ಕರ್ನಾಟಕಕ್ಕೆ ತಮ್ಮಿಂದ ಅಭಿವೃದ್ಧಿ ಕೆಲಸಗಳು ಆಗುತ್ತವೆ ಎಂದು ನನಗೆ ವಿಶ್ವಾಸವಿದೆ ಎಂದು ಕುಷ್ಟಗಿ ಮೂಲದ ಶಂಕರಗೌಡ ಎಂಬವರು ಪತ್ರದಲ್ಲಿ ತಿಳಿಸಿದ್ದಾರೆ.

ಲೋಕಸಭಾ ಚುನಾವಣೆಗೆ ಮೊದಲನೇ ಹಂತದ ಮತದಾನ ಮುಗಿಯುತ್ತಂದೆಯೇ ಸಂಸದರ ಅಶ್ಲೀ* ವೀಡಿಯೋ ಪ್ರಕರಣ ಸದ್ದು ಮಾಡಿದೆ. ವೀಡಿಯೋ ಕುರಿತು ಸುದ್ದಿಯಾಗುತ್ತಿದ್ದಂತೆಯೇ ಸಂಸದರು ವಿದೇಶಕ್ಕೆ ಹಾರಿದ್ದಾರೆ. ಇತ್ತ ಪ್ರಕರಣವನ್ನು ಸರ್ಕಾರ ಎಸ್‌ಐಟಿ ತನಿಖೆಗೆ ವಹಿಸಿದೆ. ಈಗಾಗಲೇ ತನಿಖೆಗಿಳಿದಿರುವ ಎಸ್‌ಐಟಿ ಅಧಿಕಾರಿಗಳು ತನಿಖೆಗೆ ಹಾಜರಾಗುವಂತೆ ರೇವಣ್ಣ ಹಾಗೂ ಪ್ರಜ್ವಲ್‌ ರೇವಣ್ಣಗೆ ನೋಟಿಸ್‌ ನೀಡಿದೆ. ಆದರೆ ಇಬ್ಬರೂ ವಿಚಾರಣೆಗೆ ಹಾಜರಾಗಿಲ್ಲ. ಈ ನಡುವೆ ಪ್ರಜ್ವಲ್‌ ರೇವಣ್ಣ ಸಮಯ ಕೇಳಿದ್ದಾರೆ. ಹೀಗಾಗಿ ಇದೀಗ ಎಸ್‌ಐಟಿ ಅಧಿಕಾರಿಗಳು ಪ್ರಜ್ವಲ್‌ ರೇವಣ್ಣ ವಿರುದ್ಧ ಲುಕೌಟ್‌ ನೋಟಿಸ್‌ ಜಾರಿ ಮಾಡಿದ್ದಾರೆ ಎನ್ನಲಾಗಿದೆ.

See also  'ಹರೀಶ್ ಪೂಂಜಾನ ಚೇಲಾ ಶಶಿರಾಜ್ ಶೆಟ್ಟಿ ಜತೆ ಬಾರಿ ತಿರುಗಾಡುತ್ತೀಯಾ'ಮೆಸ್ಕಾಂ ಉದ್ಯೋಗಿಯಿಂದ ಪಿಕಪ್ ವಾಹನ ತಡೆದು ಜೀವ ಬೆದರಿಕೆ, ದೂರು ದಾಖಲು
  Ad Widget   Ad Widget   Ad Widget     Ad Widget   Ad Widget   Ad Widget Ad Widget     Ad Widget   Ad Widget   Ad Widget