ಕ್ರೈಂರಾಜಕೀಯವೈರಲ್ ನ್ಯೂಸ್

ಪ್ರಜ್ವಲ್ ರೇವಣ್ಣ ವಿರುದ್ಧ ‘ಬ್ಲೂ ಕಾರ್ನರ್ ‘ ನೋಟಿಸ್ ಜಾರಿ..! ಪ್ರಜ್ವಲ್ ಎಲ್ಲೇ ಕಾಣಿಸಿಕೊಂಡರೂ ಮಾಹಿತಿ ನೀಡಲು 196 ರಾಷ್ಟ್ರಗಳಿಗೆ ಸೂಚನೆ

186

ನ್ಯೂಸ್ ನಾಟೌಟ್: ಮಹಿಳೆಯರಿಗೆ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದೇಶದಲ್ಲಿರುವ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಈಗಾಗಲೇ ರೆಡ್ ಕಾರ್ನರ್ ನೋಟಿಸ್ ಜಾರಿಯಾಗಿತ್ತು, ಈಗ ಬ್ಲೂ ಕಾರ್ನರ್ ನೋಟಿಸ್ ಜಾರಿ ಮಾಡಲಾಗಿದ್ದು, 196 ರಾಷ್ಟ್ರಗಳಿಗೆ ಮಾಹಿತಿ ರವಾನಿಸಿರುವುದಾಗಿ ಇಂಟರ್ ಫೋಲ್ ಮಾಹಿತಿ ನೀಡಿರುವುದಾಗಿ ವಿಶೇಷ ತನಿಖಾ ತಂಡ- ಎಸ್ ಐಟಿ ತಿಳಿಸಿದೆ. ವಿದೇಶಗಳಲ್ಲಿ ಅಡಗಿಕೊಂಡಿರುವ ಆರೋಪಿಗಳ ಮಾಹಿತಿ ಸಂಗ್ರಹಕ್ಕೆ ಇಂಟರ್‌ಪೋಲ್‌ಗಳ ಮೂಲಕ ಹೊರಡಿಸುವ ನೋಟಿಸ್ ಬ್ಲೂ ಕಾರ್ನರ್ ನೋಟಿಸ್ ಎನ್ನಲಾಗಿದೆ .

ಇಂಟರ್‌ಪೋಲ್ ತನ್ನ ಸದಸ್ಯ ರಾಷ್ಟ್ರಗಳಲ್ಲಿ ಬ್ಲೂ ಕಾರ್ನರ್ ನೋಟಿಸ್ ಜಾರಿಗೊಳಿ ಆರೋಪಿಯ ಗುರುತು, ಸ್ಥಳ, ಅನುಮಾನಾಸ್ಪದ ಚಟುವಟಿಕೆಗಳ ಕುರಿತು ಮಾಹಿತಿ ಕಲೆಹಾಕುತ್ತದೆ. ಇಂಟರ್ ಪೋಲ್ ಒಟ್ಟು 7 ರೀತಿಯ ನೋಟಿಸ್‌ಗಳನ್ನು ನೀಡಬಹುದು. ಅದರಲ್ಲಿ ಬ್ಲೂ ಕಾರ್ನರ್ ನೋಟಿಸ್ ಆರೋಪಿಯ ವಿರುದ್ಧ ಮಾಹಿತಿ ಸಂಗ್ರಹಕ್ಕೆ, ರೆಡ್ ಕಾರ್ನರ್ ಬಂಧನಕ್ಕೆ, ಯೆಲ್ಲೋ ಕಾರ್ನರ್ ನೋಟಿಸ್ ನಾಪತ್ತೆಯಾದವನ ಪತ್ತೆಗೆ ಬಳಸಲಾಗುತ್ತದೆ. ಆದ್ರೆ ಭಾರತದಲ್ಲಿ ಇಂಟರ್ ಪೋಲ್‌ಗೆ ಸಿಬಿಐ ನೋಡಲ್ ಏಜೆನ್ಸಿಯಾಗಿದ್ದು, ಯಾವುದೇ ತನಿಖಾ ಸಂಸ್ಥೆಗಳು ನೋಟಿಸ್ ನೀಡಲು ಮೊದಲು ಸಿಬಿಐಗೆ ಮನವಿ ಸಲ್ಲಿಸಬೇಕಾಗುತ್ತದೆ.

ಬ್ಲೂ ಕಾರ್ನರ್ ನೋಟಿಸ್ ಮೂಲಕ ಪ್ರಜ್ವಲ್ ರೇವಣ್ಣ ಯಾವ ದೇಶದಲ್ಲಿದ್ದಾರೆ, ಅವರು ಏನು ಮಾಡುತ್ತಿದ್ದಾರೆ ಎಂಬುದರ ಮಾಹಿತಿ ಇಂಟರ್ ಫೋಲ್ ನಿಂದ ಎಸ್ ಐಟಿಗೆ ಲಭ್ಯವಾಗಲಿದೆ ಎಂದು ವರದಿ ತಿಳಿಸಿದೆ. ಪ್ರಜ್ವಲ್ ರೇವಣ್ಣ ಯಾವುದೇ ವಿಮಾನ ನಿಲ್ದಾಣ, ಬಂದರು, ಗಡಿಯಲ್ಲಿ ಕಾಣಿಸಿಕೊಂಡರೆ ಮಾಹಿತಿ ನೀಡಲಾಗುವುದು ಎಂದು ಇಂಟರ್ಫೋಲ್ ನಿಂದ ಎಸ್ ಐಟಿಗೆ ನಿನ್ನೆ(ಮೇ.೭) ಸಂಜೆ ಮಾಹಿತಿ ಲಭ್ಯವಾಗಿದೆ ಎಂದು ತಿಳಿದುಬಂದಿದೆ. ಯಾವುದೇ ಒಬ್ಬ ವ್ಯಕ್ತಿಯ ಕುರಿತಾಗಿ ಹೆಚ್ಚಿನ ಮಾಹಿತಿ ಸಂಗ್ರಹ ಮಾಡಲು, ಆತನ ಗುರುತು, ಆತ ಇರುವ ನಿಖರ ಸ್ಥಳ ಹಾಗೂ ಆತನ ಚಟುವಟಿಕೆಗಳನ್ನು ಗಮನಿಸಿ ಅಪರಾಧಿಕ ಕೃತ್ಯಗಳ ತನಿಖಾ ತಂಡಕ್ಕೆ ನೆರವಾಗಲು ಬ್ಲೂ ನೋಟಿಸ್ ಜಾರಿ ಮಾಡಲಾಗುತ್ತದೆ. ಸದ್ಯ ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಇದೇ ನೋಟಿಸ್ ಜಾರಿಯಾಗಿದೆ.

See also  ಕೊರಿಯರ್‌ ನಲ್ಲಿ ಬಂದ 'ಹೇರ್ ಡ್ರೈಯರ್' ಸ್ಪೋಟ.! ಮೃತ ಯೋಧನ ಪತ್ನಿಯ ಎರಡೂ ಕೈಗಳೂ ಕಟ್..!
  Ad Widget   Ad Widget   Ad Widget   Ad Widget   Ad Widget   Ad Widget   Ad Widget