ಕ್ರೈಂರಾಜಕೀಯವೈರಲ್ ನ್ಯೂಸ್

ಸಂಸದ ಪ್ರಜ್ವಲ್​ ರೇವಣ್ಣನ ಸರ್ಕಾರಿ ನಿವಾಸಕ್ಕೆ ಬೀಗ ಜಡಿದ ಅಧಿಕಾರಿಗಳು, ಸಂತ್ರಸ್ತೆಯ ಸಮ್ಮುಖದಲ್ಲಿ ರಾತ್ರಿ ಮಹಜರು

263

ನ್ಯೂಸ್ ನಾಟೌಟ್: ಲೈಂಗಿಕ ಕಿರುಕುಳ ಆರೋಪ ಹೊತ್ತಿರುವ ಹಾಸನ ಸಂಸದ ಪ್ರಜ್ವಲ್​ ರೇವಣ್ಣ(Prajwal Revanna) ಸರ್ಕಾರಿ ನಿವಾಸಕ್ಕೆ ಎಸ್​ಐಟಿ ತಂಡ ಬೀಗ ಜಡಿದಿದೆ. ಸಂತ್ರಸ್ತೆಯ ಸಮ್ಮುಖದಲ್ಲಿ ನಿನ್ನೆ ರಾತ್ರಿ ಎಸ್​ಐಟಿ ಸ್ಥಳ ಮಹಜರು ನಡೆಸಿದೆ, ಮಹಜರು ಪ್ರಕ್ರಿಯೆ ಬಳಿಕ ನಿವಾಸದ ಕೀ ವಶಕ್ಕೆ ಪಡೆದಿದೆ. ಸಂಸದರ ನಿವಾಸವನ್ನ ಸಂಪೂರ್ಣವಾಗಿ ಸೀಜ್ ಮಾಡಲಾಗಿದ್ದು, ನಿನ್ನೆ ರಾತ್ರಿ 5 ಗಂಟೆ ಕಾಲ ಮಹಜರು, ಪರಿಶೀಲನೆ ನಡೆಸಲಾಗಿದೆ.

ಸಂಸದರ ನಿವಾಸದ ಮೊದಲ ಮಹಡಿಯ ಕೊಠಡಿಯಲ್ಲಿ ಅತ್ಯಾಚಾರ ಆಗಿದೆ ಎನ್ನುವ ಆರೋಪ ಕೇಳಿಬಂದಿದೆ. ಸಂಸದರ ಸರ್ಕಾರಿ ನಿವಾಸದಲ್ಲೇ ಅಶ್ಲೀಲ ವಿಡಿಯೋ ರೆಕಾರ್ಡ್ ಶಂಕೆ ವ್ಯಕ್ತವಾಗಿದೆ. ಅಶ್ಲೀಲ ವಿಡಿಯೋ ರೆಕಾರ್ಡ್ ಸಂಬಂಧವೂ ಎಸ್​ಐಟಿ ತನಿಖೆ ನಡೆಸಲಿದೆ. ಸಂಸದರ ನಿವಾಸದಿಂದ ಬೆಂಗಳೂರಿಗೆ ಹೋಗಿ ವಿದೇಶಕ್ಕೆ ಪ್ರಜ್ವಲ್ ತೆರಳಿದ್ದಾರೆ ಎನ್ನಲಾಗಿದೆ. ಹಾಸನ ನಗರದ ಆರ್‌ಸಿ ರಸ್ತೆಯಲ್ಲಿರುವ ಸಂಸದರ ಸರ್ಕಾರಿ ನಿವಾಸವನ್ನು ಮುಚ್ಚಲಾಗಿದೆ. ರೇವಣ್ಣ ಬಂಧನ ಬೆನ್ನಲ್ಲೇ SIT ಮುಂದೆ ಹಾಜರಾಗಲು ಪ್ರಜ್ವಲ್ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ. ನಾಳೆ(ಫೆ.೦೬) ಮಧ್ಯಾಹ್ನದೊಳಗೆ SIT ಮುಂದೆ ಹಾಜರಾಗಲು ಪ್ರಜ್ವಲ್ ಮುಂದಾಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

See also  ಸುಳ್ಯ: ಸ್ಥಳೀಯ ವಾರ ಪತ್ರಿಕೆಯ ವರದಿಗಾರನಿಗೆ ಜೀವ ಬೆದರಿಕೆ ಹಾಕಿದ ಬಿಎಸ್ಎನ್ಎಲ್ ಗುತ್ತಿಗೆ ನೌಕರ..! ಪೊಲೀಸ್ ಠಾಣೆ ಮೆಟ್ಟಿಲೇರಿದ ವರದಿಗಾರ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget