ಕ್ರೈಂರಾಜಕೀಯವೈರಲ್ ನ್ಯೂಸ್

ವಿಮಾನ ನಿಲ್ದಾಣದಲ್ಲಿಯೇ ಪ್ರಜ್ವಲ್ ನನ್ನು ಬಂಧಿಸುತ್ತೇವೆ ಎಂದ ಗೃಹ ಸಚಿವ..! ನಿರೀಕ್ಷಣಾ ಜಾಮೀನು ಮಂಜೂರಾಗುತ್ತಾ..?

ನ್ಯೂಸ್ ನಾಟೌಟ್: ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಎದುರಿಸುತ್ತಿರುವ ಅಮಾನತ್ತುಗೊಂಡಿರುವ ಜೆಡಿಎಸ್ ಮುಖಂಡ ಹಾಗೂ ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿಮಾನ ನಿಲ್ದಾಣಕ್ಕೆ ಆಗಮಿಸಿದ ತಕ್ಷಣ ಅಲ್ಲಿಯೇ ಬಂಧಿಸಲಾಗುವುದು ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ ಮೇ.೨೯ ಕ್ಕೆ ಹೇಳಿಕೆ ನೀಡಿದ್ದಾರೆ. ಮೇ 31 ರಂದು ತನ್ನ ವಿರುದ್ಧದ ಪ್ರಕರಣಗಳ ತನಿಖೆ ನಡೆಸುತ್ತಿರುವ ಎಸ್‌ಐಟಿ ಮುಂದೆ ಹಾಜರಾಗುವುದಾಗಿ ವಿಡಿಯೋ ಹೇಳಿಕೆಯನ್ನು ಬಿಡುಗಡೆ ಮಾಡಿದ ಎರಡು ದಿನಗಳ ನಂತರ ಪರಮೇಶ್ವರ ಈ ಹೇಳಿಕೆ ನೀಡಿದ್ದಾರೆ.

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಮೇ 30 ರಂದು ಮ್ಯೂನಿಚ್‌ನಿಂದ ಬೆಂಗಳೂರಿಗೆ ಹಿಂತಿರುಗಲು ವಿಮಾನ ಟಿಕೆಟ್ ಕಾಯ್ದಿರಿಸಿದ್ದಾರೆ. ಇದರ ಜೊತೆಗೆ ವಕೀಲರ ಮೂಲಕ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನಿಗೆ ಕೋರ್ಟ್ ಮೊರೆ ಹೋಗಿದ್ದಾರೆ. ಜಾಮೀನು ಮಂಜೂರಾಗುವ ಸಾಧ್ಯತೆ ಕಡಿಮೆ ಇದ್ದು, ಬಂಧನ ಖಚಿತ ಎಂಬಂತಾಗಿದೆ. ಪ್ರಜ್ವಲ್ ವಿರುದ್ಧ ವಾರೆಂಟ್ ಜಾರಿಯಾಗಿರುವುದರಿಂದ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಎಸ್‌ಐಟಿ ಕಾಯುತ್ತಿದೆ. ಆತನನ್ನು ಬಂಧಿಸಿ ಹೇಳಿಕೆ ಪಡೆಯಲಿದ್ದಾರೆ(ಎಸ್‌ಐಟಿ) ಎದುರು ಹಾಜರು ಪಡಿಸಲಾಗುವುದು ಎಂದಿದ್ದಾರೆ.

Click 👇

https://newsnotout.com/2024/05/bus-crician-basava-kalyana-news
https://newsnotout.com/2024/05/prajwal-revanna-sit-case-issue-s
https://newsnotout.com/2024/05/shrirama-helpline-kannada-news-love-jihad

Related posts

ಬಿಜೆಪಿ ಕಾರ್ಯಕರ್ತೆ ಶಕುಂತಲಾ ನಟರಾಜ್ ಅರೆಸ್ಟ್..! ಅಷ್ಟಕ್ಕೂ ಆಕೆ ಮಾಡಿದ ಪೋಸ್ಟ್ ನಲ್ಲೇನಿದೆ..?

ಪೊಲೀಸ್ ದೌರ್ಜನ್ಯ ಪ್ರಕರಣ: ಪುತ್ತೂರು ಡಿವೈಎಸ್ಪಿ, ಸಂಪ್ಯ ಎಸ್ಐ ಸೇರಿದಂತೆ ಮೂವರ ವಿರುದ್ಧ ಎಫ್ಐಆರ್, ಅರುಣ್ ಪುತ್ತಿಲ ಬರದಿರುತ್ತಿದ್ದರೆ ಹೊಡೆದು ಸಾಯಿಸ್ತಿದ್ದರು!

29 ವರ್ಷದ ಯುವತಿಯನ್ನು ಗರ್ಭವತಿಯನ್ನಾಗಿಸಿ “ನಾನಲ್ಲ” ಎಂದ 83 ವರ್ಷದ ಅಜ್ಜ..! “ನಾನಲ್ಲ” ಅಂದವನಿಗೆ ಡಿಎನ್ಎ ಪರೀಕ್ಷಾ ವರದಿಯಲ್ಲಿ ಕಾದಿತ್ತು ಅಚ್ಚರಿಯ ಫಲಿತಾಂಶ