ಕ್ರೈಂವೈರಲ್ ನ್ಯೂಸ್ಸಿನಿಮಾ

‘ಪ್ರಜ್ವಲ್​ ದೇವರಾಜ್​ ಇನ್ನಿಲ್ಲ’ ಎಂದು ಸುಳ್ಳು ಸುದ್ದಿ ಹಬ್ಬಿಸಿದ್ಯಾರು..? ದೂರು ನೀಡಲು ಮುಂದಾದ ಕುಟುಂಬಸ್ಥರು

171

ನ್ಯೂಸ್‌ ನಾಟೌಟ್: ಸ್ಯಾಂಡಲ್ ವುಡ್ ನಟ ಪ್ರಜ್ವಲ್ ದೇವರಾಜ್ ಆರೋಗ್ಯವಾಗಿದ್ದಾರೆ. ಆದರೆ ಕೆಲವು ಕಿಡಿಗೇಡಿಗಳು ಸೋಶಿಯಲ್​ ಮೀಡಿಯಾದಲ್ಲಿ ಪ್ರಜ್ವಲ್ ದೇವರಾಜ್ ಇನ್ನಿಲ್ಲ ಎಂಬ ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ನಟನ ಫೋಟೋವನ್ನು ದುರ್ಬಳಕೆ ಮಾಡಿಕೊಂಡು ಫೇಕ್​ ನ್ಯೂಸ್​ ಹರಡಲಾಗಿದೆ. ‘ಪ್ರಜ್ವಲ್​ ದೇವರಾಜ್​ ಇನ್ನಿಲ್ಲ. ಓಂ ಶಾಂತಿ’ ಎಂಬ ಕ್ಯಾಪ್ಷನ್​ನೊಂದಿಗೆ ಪ್ರಜ್ವಲ್​ ದೇವರಾಜ್​ ಅವರ ಫೋಟೋವನ್ನು ವೈರಲ್​ ಮಾಡಲಾಗಿದೆ.

ಇದು ಅವರ ಕುಟುಂಬದವರ ಗಮನಕ್ಕೂ ಬಂದಿದೆ. ಸುಳ್ಳು ಸುದ್ದಿಯ ಬಗ್ಗೆ ಪ್ರಜ್ವಲ್​ ದೇವರಾಜ್​ ಕುಟುಂಬದವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ಪ್ರಜ್ವಲ್ ದೇವರಾಜ್ ಕ್ಷೇಮವಾಗಿ ಇದ್ದಾರೆ. ಅವರ ಆರೋಗ್ಯದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಸೋಶಿಯಲ್​ ಮೀಡಿಯಾದಲ್ಲಿ ಸುಳ್ಳು ಸುದ್ದಿ ಹಬ್ಬಿಸಲಾಗಿದೆ. ಪ್ರಜ್ವಲ್ ಪೋಟೋಗಳನ್ನು ದುರ್ಬಳಕೆ ಮಾಡಲಾಗಿದೆ. ಆರೋಗ್ಯವಂತ ನಟನ ಬಗ್ಗೆ ಈ ರೀತಿಯ ವದಂತಿಗಳು ಸಲ್ಲದು. ಇದರಿಂದ ಕುಟುಂಬಸ್ಥರು ಹಾಗೂ ಅಭಿಮಾನಿಗಳಲ್ಲಿ ಆತಂಕ ಉಂಟಾಗುತ್ತದೆ’ ಎಂದು ಪ್ರಜ್ವಲ್​ ಆಪ್ತರು ಹೇಳಿದ್ದಾರೆ. ಕಿಡಿಗೇಡಿಗಳ ಈ ಕೃತ್ಯದ ವಿರುದ್ಧ ಕುಟುಂಬದವರು ಬೇಸರ ವ್ಯಕ್ತಪಡಿಸಿರುವುದು ಮಾತ್ರವಲ್ಲದೇ ಕಾನೂನಿನ ಕ್ರಮ ಕೈಗೊಳ್ಳುವ ಬಗ್ಗೆ ಆಲೋಚಿಸಿದ್ದಾರೆ. ಸುಳ್ಳು ಸುದ್ದಿ ಹಬ್ಬಿಸಿದವರ ವಿರುದ್ಧ ದೂರು ನೀಡಲು ಕುಟುಂಬದವರು ನಿರ್ಧರಿಸಿದ್ದಾರೆ ಎನ್ನಲಾಗಿದೆ.

Click 👇

https://newsnotout.com/2024/05/panjurli-kannada-news-v-udupi
https://newsnotout.com/2024/05/prajwal-revanna-and-airport-kannada-news
https://newsnotout.com/2024/05/tulunadu-film-balipe-news-daivaradhane
See also  ಶಾಲೆಯ ಬಳಿ ನಿಗೂಢ ಸ್ಫೋಟ..! ಪರಿಶೀಲನೆ ವೇಳೆ ಅನುಮಾನಾಸ್ಪದ ವೈಟ್ ಪೌಡರ್ ಪತ್ತೆ..!
  Ad Widget   Ad Widget   Ad Widget   Ad Widget   Ad Widget   Ad Widget   Ad Widget