ರಾಜಕೀಯವೈರಲ್ ನ್ಯೂಸ್

ಕಾರ್ಯಕ್ರಮಕ್ಕೆ ಆಟೋ ಚಲಾಯಿಸಿಕೊಂಡು ಬಂದದ್ದೇಕೆ ಶಾಸಕ ಪ್ರದೀಪ್ ಈಶ್ವರ್? ಚಿಕ್ಕಬಳ್ಳಾಪುರ ಎಪಿಎಂಸಿಯಲ್ಲಿ ಮೂಟೆ ಹೊತ್ತಿದ್ದೀನಿ ಎಂದು ನೆನಪು ಮೆಲುಕು ಹಾಕಿದ ಶಾಸಕ

ನ್ಯೂಸ್ ನಾಟೌಟ್ : ಶಾಸಕ ಪ್ರದೀಪ್ ಈಶ್ವರ್ ಸದಾ ಒಂದಲ್ಲ ಒಂದು ವಿಚಾರವಾಗಿ ಸುದ್ದಿಯಲ್ಲಿರುತ್ತಾರೆ. ಖಾಕಿ ಶರ್ಟ್ ಧರಿಸಿ ಆಟೋ ಚಲಾಯಿಸುತ್ತಾ ಕಾರ್ಯಕ್ರಮಕ್ಕೆ ಬಂದು ಎಲ್ಲರ ಗಮನ ಸೆಳೆದಿದ್ದಾರೆ. ಚಿಕ್ಕಬಳ್ಳಾಪುರದ ಸರ್ ಎಂವಿ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ಆಟೋ ಚಾಲಕರಿಗೆ 5,000 ರೂ. ಸಹಾಯ ಧನ ನೀಡುವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಆಟೋ ಚಲಾಯಿಸಿಕೊಂಡು ಬಂದು ಶಾಸಕ ಪ್ರದೀಪ್ ಈಶ್ವರ್ ಪಾಲ್ಗೊಂಡಿದ್ದರು. 

ಇದಕ್ಕೂ ಮುನ್ನ, ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಟೋ ಚಾಲಕರ ಕಷ್ಟ ನನಗೆ ಗೊತ್ತಿದೆ. ನಾನು ಕೂಡ ಕಷ್ಟ ಪಟ್ಟಿದ್ದೀನಿ. ಚಿಕ್ಕಬಳ್ಳಾಪುರ ಎಪಿಎಂಸಿಯಲ್ಲಿ ಮೂಟೆ ಹೊತ್ತಿದ್ದೀನಿ. 50 ರೂ. ಸಿಗುತ್ತೆ ಅಂತ ಹಿಂದೆ ಆಟೋ ಓಡಿಸಿದ್ದೀನಿ ಎಂದು ನೆನಪಿಸಿಕೊಂಡರು.

ಮಾಜಿ ಸಚಿವ ಸುಧಾಕರ್ ಬಗ್ಗೆ ಮಾತನಾಡಿ, ಅಣ್ಣನಿಗೆ 5 ವರ್ಷ ವಿರಾಮ ಇದೆ. ವಿದ್ಯಾಸಂಸ್ಥೆಗಳನ್ನ ಕಟ್ಟಿ. ನೀವು ದುಡ್ಡು ಮಾಡೋ ಅವಶ್ಯಕತೆ ಇಲ್ಲ. ನಿಮ್ಮ ಹತ್ತಿರ ಈಗಾಗಲೇ ದುಡ್ಡು ಹೆಚ್ಚಾಗಿದೆ. ಬೈಬೇಕಾದರೇ ನನ್ನ ಬೈಯಿರಿ. ನನಗೆ ನೀವು ಬೈಯ್ಯೋದು ಏನು ಹೊಸದಲ್ಲ. ನಾನು ಬೈಸಿಕೊಳ್ಳೋದು ಹೊಸದಲ್ಲ. ನೀವು 5 ವರ್ಷ ನನಗೆ ಬಹಳ ತೊಂದರೆ ಕೊಟ್ಟಿದ್ದೀರಿ. ಆಗಲೇ ನಾನು ನಿಮಗೆ ಸೊಪ್ಪು ಹಾಕಿದವನಲ್ಲ, ಈಗ ಸೊಪ್ಪು ಹಾಕ್ತೀನಾ ಎಂದು ಸುಧಾಕರ್ ಗೆ ತಿರುಗೇಟು ನೀಡಿದ್ದಾರೆ.

Related posts

ಮಗು ಬಿದ್ದಾಗ ಪೆನ್ನು ತಲೆಗೆ ಚುಚ್ಚಿ ಸಾವು..! ಪುಟ್ಟ ಕಂದನ ಭವಿಷ್ಯ ಬೆಳಗಬೇಕಿದ್ದ ಪೆನ್ನು ಜೀವ ತೆಗೆದದ್ದೇಗೆ..?

ಗೋಡ್ಸೆಯ ಹಿಂದುತ್ವವನ್ನು ಸಂಭ್ರಮಿಸಬೇಕು ಎಂದ ಸೂಲಿಬೆಲೆ..! ಚಕ್ರವರ್ತಿ ಸೂಲಿಬೆಲೆ ಹೀಗೆ ಹೇಳಿದ್ದೇಕೆ?

ಪ್ರಧಾನಿ ಮೋದಿಗೆ ಮೈಸೂರು ಪೇಟ ತೊಡಿಸಿ, ಅಂಬಾರಿ ಪ್ರತಿಕೃತಿ ನೀಡಿ ಸನ್ಮಾನಿಸಿದ ಸಿಎಂ ಸಿದ್ದರಾಮಯ್ಯ, ಪ್ರಧಾನಿ – ಸಿಎಂ ಭೇಟಿಯ ಹಿಂದಿನ ಕಾರಣಗಳೇನು?