ಕ್ರೈಂರಾಜಕೀಯರಾಜ್ಯ

ರಾತ್ರಿ ಶಾಸಕ ಪ್ರದೀಪ್‌ ಈಶ್ವರ್‌ ಮನೆ ಮೇಲೆ ಕಲ್ಲು ತೂರಾಟ..! ಪೊಲೀಸರಿಂದ ಸ್ಥಳ ಪರಿಶೀಲನೆ

ನ್ಯೂಸ್ ನಾಟೌಟ್: ಲೋಕಸಭಾ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಡಾ ಕೆ.ಸುಧಾಕರ್‌ ಗೆಲುವು ಸಾಧಿಸಿದ ಬೆನ್ನಲ್ಲೇ ಚಿಕ್ಕಬಳ್ಳಾಪುರದ ಕಾಂಗ್ರೆಸ್‌ ಶಾಸಕ ಪ್ರದೀಪ್‌ ಈಶ್ವರ್‌ ಮನೆ ಮೇಲೆ ಕಲ್ಲು ತೂರಾಟ ನಡೆದಿದೆ ಎಂದು ಆರೋಪಿಸಲಾಗಿದೆ. “ಚಿಕ್ಕಬಳ್ಳಾಪುರದಲ್ಲಿ ಸುಧಾಕರ್‌ ಒಂದು ಮತದ ಮುನ್ನಡೆ ಸಾಧಿಸಿದದೂ ನಾನು ರಾಜೀನಾಮೆ ನೀಡುತ್ತೇನೆ” ಎಂದು ಪ್ರದೀಪ್‌ ಈಶ್ವರ್‌ ಸವಾಲು ಹಾಕಿದ್ದರು.

ಇದೀಗ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಡಾ ಕೆ.ಸುಧಾಕರ್‌ ಜಯ ಗಳಿಸಿದ್ದು, ಇದರ ಬೆನ್ನಲ್ಲೇ ಮಂಗಳವಾರ ರಾತ್ರಿ(ಜೂ.೪) ಚಿಕ್ಕಬಳ್ಳಾಪುರ ನಗರದ ಕಂದವಾರದಲ್ಲಿರುವ ಪ್ರದೀಪ್‌ ಈಶ್ವರ್‌ ಮನೆ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದಾರೆ ಎಂದು ವರದಿ ತಿಳಿಸಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎನ್ನಲಾಗಿದೆ.

Related posts

ಪಾರ್ಲಿಮೆಂಟ್ ನಲ್ಲಿ ಗುದ್ದಾಟ, ಬಡಿದಾಟ..! ಇಲ್ಲಿದೆ ವೈರಲ್ ವಿಡಿಯೋ

Darshan Thoogudeepa: ಶವ ವಿಲೇವಾರಿಗೆ 30 ಲಕ್ಷಕ್ಕೆ ಡೀಲ್‌..! ಪೊಲೀಸರ ದಿಕ್ಕು ತಪ್ಪಿಸಲು ದರ್ಶನ್ ಮತ್ತು ಸಹಚರರಿಂದ ನಡೆದಿತ್ತು ರೋಚಕ ಪ್ಲಾನ್..!

ಮದುವೆಗೆ ನಿರಾರಿಸಿದ ಹುಡುಗಿ, ಮನನೊಂದು ಯುವಕ ಆತ್ಮಹತ್ಯೆ..! ನಾನು ಒಬ್ಬ ಹುಚ್ಚು ಪ್ರೇಮಿ ಎಂದು ವಾಟ್ಸಪ್‌ ನಲ್ಲಿ ಸ್ಟೇಟಸ್ ಹಾಕಿ ನೇಣಿಗೆ ಶರಣು..!