ನ್ಯೂಸ್ ನಾಟೌಟ್: ಪಹಲ್ಗಾಮ್ ದಾಳಿಯ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ‘ಫೌಜಿʼ ಚಿತ್ರವನ್ನು ಬಹಿಷ್ಕರಿಸಬೇಕೆನ್ನುವ ಒತ್ತಾಯಗಳು ಕೇಳಿ ಬಂದಿವೆ. ‘ಫೌಜಿ’ ಬಹುನಿರೀಕ್ಷಿತ ಮೂವಿ.ಈ ಚಿತ್ರದಲ್ಲಿ ಟಾಲಿವುಡ್ ನಟ ಪ್ರಭಾಸ್ ಜತೆ ಪಾಕಿಸ್ತಾನ ಮೂಲದ ನಟಿಯೊಬ್ಬಳು ಕಾಣಿಸಿಕೊಳ್ಳುತ್ತಿದ್ದಾಳೆ ಎಂಬ ಸುದ್ದಿ ಹರಡಿದ್ದು, ಈಕೆಯನ್ನು ಚಿತ್ರದಿಂದ ಕೈ ಬಿಡಬೇಕೆಂದು ನೆಟ್ಟಿಗರು ಒತ್ತಾಯಿಸುತ್ತಿದ್ದಾರೆ.
ಈ ಹಿಂದೆಯೇ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ನೀಡಿದ ಪ್ರಭಾಸ್ ಈಗ ಮತ್ತೊಂದು ಬಿಗ್ ಪ್ರಾಜೆಕ್ಟ್‌ನಲ್ಲಿ ಕಾಣಿಸಿಕೊಳ್ಳಲು ರೆಡಿಯಾಗಿದ್ದಾರೆ. ‘ಸೀತಾ ರಾಮಂʼ ಖ್ಯಾತಿಯ ರಘು ಹನುಪುಡಿ ಪ್ರಭಾಸ್ ಅವರ ಜತೆ ‘ಫೌಜಿʼ ಎನ್ನುವ ಸಿನಿಮಾದಲ್ಲಿ ಒಂದಾಗಿದ್ದು, ಈಗಾಗಲೇ ಈ ಚಿತ್ರ ಸೆಟ್ಟೇರಿದೆ. ಚಿತ್ರೀಕರಣ ಕೂಡ ಭರದಿಂದ ಸಾಗುತ್ತಿದೆ.ಆದರೆ ಈ ಚಿತ್ರದಲ್ಲಿ ನಾಯಕಿಯಾಗಿ ಹೊಸ ಪ್ರತಿಭೆ ನಟಿ ಇಮಾನ್ವಿ/ ಇಮಾನ್ ಇಸ್ಮಾಯಿಲ್ ಅವರನ್ನು ಆಯ್ಕೆ ಮಾಡಲಾಗಿದೆ. ಹೀಗಾಗಿ ಅನೇಕರಿಂದ ಅಸಮಾಧಾನ ಬುಗಿಲೆದ್ದಿದೆ.ಇಮಾನ್ವಿ ಪಾಕಿಸ್ತಾನಿ ಸೇನಾಧಿಕಾರಿಯೊಬ್ಬರ ಮಗಳು. ಅವರು ಪಾಕಿಸ್ತಾನದ ಕರಾಚಿಯಲ್ಲಿ ಜನಿಸಿದ್ದರು ಎನ್ನುವ ಬಗ್ಗೆ ಇಂಟರ್ ನೆಟ್‌ನಲ್ಲಿ ಮಾಹಿತಿ ಹರಿದಾಡಿದ್ದು, ಇದು ಇಮಾನ್ವಿ ಅವರ ತಲೆನೋವಿಗೂ ಕಾರಣವಾಗಿದೆ.
ಆದರೆ ಇದಕ್ಕೆ ಸ್ಪಷ್ಟನೆ ನೀಡಿದ ನಟಿ “ಮೊದಲನೆಯದಾಗಿ ಪಹಲ್ಗಾಮ್ ನಲ್ಲಿ ನಡೆದ ದುರಂತ ಘಟನೆಗೆ ಸಂತಾಪವನ್ನು ಸೂಚಿಸುತ್ತೇನೆ. ನನ್ನ ಕುಟುಂಬ ಮತ್ತು ನನ್ನ ಮೂಲದ ಬಗ್ಗೆ ನಕಲಿ ಸುದ್ದಿಗಳು ಆನ್‌ಲೈನ್‌ನಲ್ಲಿ ಹರಿದಾಡುತ್ತಿದ್ದು, ನಾನಿದಕ್ಕೆ ಸ್ಪಷ್ಟನೆ ನೀಡಲು ಬಯಸುತ್ತೇನೆ ಎಂದು ಹೇಳಿದ್ದಾರೆ.
“ ಮೊದಲನೆಯದಾಗಿ ನನ್ನ ಕುಟುಂಬದಲ್ಲಿ ಯಾರೂ ಪಾಕಿಸ್ತಾನಿ ಮಿಲಿಟರಿಯೊಂದಿಗೆ ಯಾವುದೇ ರೀತಿಯಲ್ಲಿ ಸಂಬಂಧ ಹೊಂದಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಈ ವದಂತಿ ಹಬ್ಬಿದ್ದು, ಅದೆಲ್ಲವೂ ಸತ್ಯಕ್ಕೆ ದೂರವಾದುದು. ನಾನು ಹೆಮ್ಮೆಯ ಭಾರತೀಯ ಮೂಲದ ಅಮೆರಿಕನ್ ಪ್ರಜೆ. ನನಗೆ ನಾಲ್ಕು ಭಾಷೆ ಮಾತನಾಡಲು ಬರುತ್ತೆ. ಹಿಂದಿ, ತೆಲುಗು, ಗುಜರಾತಿ ಮತ್ತು ಇಂಗ್ಲಿಷ್ ಮಾತನಾಡಬಲ್ಲೆ. ನನ್ನ ಹೆತ್ತವರು ಬಾಲ್ಯದಲ್ಲಿ ಅಮೆರಿಕಕ್ಕೆ ಕಾನೂನುಬದ್ಧವಾಗಿ ವಲಸೆ ಬಂದ ನಂತರ ನಾನು ಕ್ಯಾಲಿಫೋರ್ನಿಯಾದ ಲಾಸ್ ಏಂಜಲೀಸ್‌ನಲ್ಲಿ ಜನಿಸಿದೆ ಎಂದಿದ್ದಾರೆ. ನನಗೆ ನಟನೆ ಮತ್ತು ನೃತ್ಯದ ಮೇಲೆ ಅಪಾರ ಆಸಕ್ತಿಯಿದೆ. ಇದರ ಅಭ್ಯಾಸವನ್ನೂ ಮಾಡಿದ್ದೇನೆ. ಈ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿದ ನಂತರ, ಭಾರತೀಯ ಚಿತ್ರರಂಗದಲ್ಲಿಯೂ ಕೆಲಸ ಮಾಡುವ ಅವಕಾಶಗಳನ್ನು ಪಡೆದಿದ್ದೇನೆ. ಇದಕ್ಕೆ ನನಗೆ ಖುಷಿಯಿದೆ. ಚಿತ್ರರಂಗ ನನ್ನ ಮೇಲೆ ಅಪಾರವಾದ ಫ್ರಭಾವ ಬೀರಿದೆ” ಎಂದಿದ್ದಾರೆ.ಭಾರತೀಯ ಗುರುತು ಮತ್ತು ಸಂಸ್ಕೃತಿ ನನ್ನ ರಕ್ತದಲ್ಲಿ ಆಳವಾಗಿ ಹರಿಯುತ್ತಿದೆ. ಈ ಪರಂಪರೆಯನ್ನು ನನ್ನ ಕೆಲಸದ ಮೂಲಕ ಮುಂದುವರಿಸಲು ನಾನು ಶ್ರಮಿಸುತ್ತೇನೆ ಎಂದು ಉತ್ತರಿಸುತ್ತಾ ಎಲ್ಲಾ ಊಹ ಪೋಹ ಸುದ್ದಿಗಳನ್ನು ತಳ್ಳಿ ಹಾಕಿದ್ದಾರೆ.
View this post on Instagram