ಕ್ರೈಂ

ಮೀನು ಹಿಡಿಯಲು ಹೋದ ಯುವಕ ಕರೆಂಟ್ ಶಾಕ್ ಹೊಡೆದು ಸಾವು

ಸುಳ್ಯ: ತಾಲೂಕಿನ ದೇವಚಳ್ಳ ಗ್ರಾಮದ ಕರಂಗಲ್ಲಿನ ಯುವಕನೋರ್ವ ನದಿಗೆ ಮೀನು ಹಿಡಿಯಲು ಹೋಗಿ ಕರೆಂಟ್ ಶಾಕ್ ಹೊಡೆದು ಮೃತಪಟ್ಟ ಘಟನೆ ನಡೆದಿದೆ.

ನ.5 ರ ರಾತ್ರಿ ಕರಂಗಲ್ಲಿನ ದಿ. ಕೇಶವ ಗೌಡ ಅವರ ಪುತ್ರ ಕರಂಗಲ್ಲಿನ ಪ್ರಕಾಶ್ (37 ) ಎಂಬವರು ಮಾಡಬಾಕಿಲು ಭಾಗದ ನದಿಗೆ ಗೆಳೆಯನೊಂದಿಗೆ ಹೋಗಿ ಬ್ಯಾಟರಿ ಬಳಸಿ ಮೀನು ಹಿಡಿಯಲು ತೆರಳಿದ್ದಾರೆ. ಮೀನು ಹಿಡಿಯುತ್ತಿರುವ ಸಂದರ್ಭ ಇನ್ವರ್ಟರ್ ಬ್ಯಾಟರಿ ವಿದ್ಯುತ್ ಪ್ರವಹಿಸಿ ಪ್ರಕಾಶ್ ಮೃತರಾಗಿರುವುದಾಗಿ ತಿಳಿದು ಬಂದಿದೆ. ಸುಬ್ರಹ್ಮಣ್ಯ ಎಸ್ ಐ ಜಂಬೂರಾಜ್ ಮಾಹಾಜನ್ ಪೊಲೀಸರೊಂದಿಗೆ ಸ್ಥಳಕ್ಕೆ ತೆರಳಿ ತನಿಖೆ ನಡೆಸಿದ್ದಾರೆ.

Related posts

ಕಡಬ: ಆಸ್ಪತ್ರೆಗೆ ಕರೆತರುತ್ತಿದ್ದ ವೇಳೆ ಮಡಿಕೇರಿಯ ಎಸ್.ಐ ಹೃದಯಾಘಾತದಿಂದ ನಿಧನ

ಕೈಗೆ ಕೋಳ ಹಾಕಿಸಿಕೊಂಡಿದ್ದಾಗಲೇ ಪೊಲೀಸರೆದುರು ಸಿಗರೇಟ್ ಸೇದಿ ರೀಲ್ಸ್ ಮಾಡಿದ ರೌಡಿ..! ಪೊಲೀಸರ ಹೆದರಿಕೆ ಇಲ್ಲದ ಈತನ ಮೇಲಿರುವ ಕೇಸ್ ಗಳೆಷ್ಟು ಗೊತ್ತಾ..?

ಫೇಕ್ ವಿಡಿಯೋ ಬಗ್ಗೆ ರಶ್ಮಿಕಾ ಮಂದಣ್ಣ ಹೇಳಿದ್ದೇನು..? ಕೊಡಗಿನ ಬೆಡಗಿಯ ಮೊದಲ ಪ್ರತಿಕ್ರಿಯೆ ಹೇಗಿತ್ತು?