ವೈರಲ್ ನ್ಯೂಸ್

1969 ರಲ್ಲಿ ಮಾಡಿದ್ದ ಅಂಚೆ, ವಿಳಾಸಕ್ಕೆ ತಲುಪಿದ್ದು 2023ಕ್ಕೆ..! ಬರೋಬ್ಬರಿ 54 ವರ್ಷಗಳ ಬಳಿಕ ಬಂದ ಪತ್ರದಲ್ಲೇನಿತ್ತು?

196

ನ್ಯೂಸ್ ನಾಟೌಟ್ : ಹಿಂದಿನ ಕಾಲದಲ್ಲಿ ಆ ಅಂಚೆಯೇ ಜನರ ಸಂಪರ್ಕದ ಸಂಪನ್ಮೂಲವಾಗಿತ್ತು. ಏನೇ ಆದರೂ ಅಂಚೆ ಮೂಲಕವೇ ಮಾಹಿತಿಗಳು ರವಾನೆಯಾಗುತ್ತಿದ್ದವು. ಕೆಲವೊಮ್ಮೆ ಅಂಚೆ ಸರಿಯಾದ ಸಮಯಕ್ಕೆ ತಲುಪಿತ್ತಾದರೂ ಅವರು ಆ ಕಾರ್ಯಕ್ರಮಕ್ಕೆ ಬರಲು ಸಮಯ ಸಾಲದೆ ಇರುವ ಘಟನೆಗಳು ನಡೆಯುತ್ತಿದ್ದವು. ಎಷ್ಟೋ ಬಾರಿ ತಡವಾಗಿ ತಲುಪಿ ಉಪಯೋಗವೇ ಇಲ್ಲದಂತಾಗುತ್ತಿತ್ತು.

ಅದೇ ರೀತಿ ಅಮೆರಿಕದಲ್ಲಿ 1969ರಲ್ಲಿ ಮಾಡಲಾಗಿದ್ದ ಪೋಸ್ಟ್‌ ಒಂದು ಈ ವರ್ಷ ಅಂದರೆ, 2023ರಲ್ಲಿ ವಿಳಾಸಕ್ಕೆ ವಿಳಾಸಕ್ಕೆ ತಲುಪಿದೆ. ಬರೋಬ್ಬರಿ 54 ವರ್ಷಗಳ ನಂತರ ಪೋಸ್ಟ್‌ ಒಂದು ಅದರ ವಿಳಾಸಕ್ಕೆ ತಲುಪಿದೆ. ಆದರೆ ಈಗ ಆ ವಿಳಾಸದಲ್ಲಿ ಬೇರೆಯ ಕುಟುಂಬವೇ ಇದೆ. ಗ್ಯಾಗ್ನೋನ್ಸ್‌ ಎಂಬ ಹೆಸರಿಗೆ ಪೋಸ್ಟ್‌ ಬಂದಿದ್ದು ಅದು ಯಾರು ಎನ್ನುವುದು ಕೂಡ ಅಂಚೆ ಪಡೆದವರಿಗೆ ತಿಳಿದಿಲ್ಲವಂತೆ.

ಈ ವಿಚಾರವಾಗಿ ಅವರು ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾರೆ. ನಿಮಗ್ಯಾರಿಗಾದರೂ ಈ ಗ್ಯಾಗ್ನೋನ್ಸ್‌ ಯಾರು ಎಂದು ತಿಳಿದಿದ್ದರೆ ತಿಳಿಸಿ. ವಿಚಿತ್ರವೆಂದರೆ ಇದರಲ್ಲಿ ವಿಳಾಸದಲ್ಲಿ ಗ್ಯಾಗ್ನೋನ್ಸ್‌ ಅಥವಾ ಆ ವಿಳಾಸದಲ್ಲಿ ಯಾರಿದ್ದಾರೋ ಅವರಿಗೆ ಎಂದು ಬರೆಯಲಾಗಿದೆ” ಎಂದು ಪೋಸ್ಟ್‌ ಪಡೆದ ಜೆಸ್ಸಿಕಾ ಮಾಹಿತಿ ನೀಡಿದ್ದಾರೆ. ಹಾಗೆಯೇ ಅವರ ಅಕ್ಕ ಪಕ್ಕದ ಮನೆಯವರ ಮಾಹಿತಿ ಪ್ರಕಾರ ಗ್ಯಾಗ್ನೋನ್ಸ್‌ ಅವರು ಜೆಸ್ಸಿಕಾ ಅವರ ಮನೆಯೆ ಮಾಜಿ ಮಾಲೀಕರಾಗಿದ್ದರಂತೆ. ಅವರು ಆ ಮನೆಯಲ್ಲಿ 90ರ ದಶಕದ ತನಕ ವಾಸವಿದ್ದರು ಎನ್ನಲಾಗಿದೆ.
ಈ ಪೋಸ್ಟ್‌ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ಪೋಸ್ಟ್‌ ಅನ್ನು ಜೆಸ್ಸಿಕಾ ತಮ್ಮ ಫೇಸ್‌ಬುಕ್‌ನಲ್ಲಿ ಜುಲೈ 18ರಂದು ಹಂಚಿಕೊಂಡಿದ್ದಾರೆ ಆದರೆ, ಈಗ ಅದು ವೈರಲ್ ಆಗಿದೆ.

See also  ಪಶು ಆಸ್ಪತ್ರೆಗೆ ತಾನೇ ಬಂದು ವೈದ್ಯರಿಂದ ಚಿಕಿತ್ಸೆ ಪಡೆದ ಮಂಗ..! ಅಚ್ಚರಿ ಮೂಡಿಸಿದ ಕೋತಿಯ ವರ್ತನೆ..! ಇಲ್ಲಿದೆ ವಿಡಿಯೋ
  Ad Widget   Ad Widget   Ad Widget   Ad Widget   Ad Widget   Ad Widget   Ad Widget   Ad Widget