Uncategorized

ನಕಲಿ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ದುಬೈಗೆ ಪರಾರಿ..! ನಿರೀಕ್ಷಣಾ ಜಾಮೀನು ಅರ್ಜಿ ತಿರಸ್ಕರಿಸಿದ ಕೋರ್ಟ್..!

ನ್ಯೂಸ್ ನಾಟೌಟ್: ಯು.ಪಿ.ಎಸ್.ಸಿ ನೇಮಕಾತಿಯಲ್ಲಿ ಮೋಸ ಮಾಡಿ ನಕಲಿ ದಾಖಲೆ ಮತ್ತು ಅಂಗವೈಕಲ್ಯದ ಪ್ರಯೋಜನ ಪಡೆದು ಪಾಸಾಗಿ ಐಎಎಸ್ ಅಧಿಕಾರಿಯಾಗಿದ್ದ ಪೂಜಾ ಖೇಡ್ಕರ್ ಗೆ ಕಾನೂನು ಸಂಕಷ್ಟ ಎದುರಾಗಿದೆ. ಪ್ರೊಬೇಷನರಿ ಐಎಎಸ್‌ ಅಧಿಕಾರಿ ಹುದ್ದೆ ರದ್ದಾದ ಬೆನ್ನಲ್ಲೇ ಪೂಜಾ ಖೇಡ್ಕರ್ ಬಂಧನ ಭೀತಿ ಎದುರಿಸುತ್ತಿದ್ದಾರೆ.

ಇದರ ಬೆನ್ನಲ್ಲೇ ನಿರೀಕ್ಷಣಾ ಜಾಮೀನು ಅರ್ಜಿಯನ್ನು ದೆಹಲಿ ನ್ಯಾಯಾಲಯ ವಜಾಗೊಳಿಸಿದೆ. ಈಗ ಪೂಜಾ ದುಬೈಗೆ ಪರಾರಿಯಾಗಿದ್ದಾರೆ ಎಂದು ವರದಿ ತಿಳಿಸಿದೆ. ಖೇಡ್ಕರ್‌ ಅವರ ಮೊಬೈಲ್‌ ಸ್ವಿಚ್‌ ಆಫ್‌ ಆಗಿದ್ದು, ಅವರು ಕಳೆದ ಕೆಲವು ದಿನಗಳಿಂದ ತಲೆಮರೆಸಿಕೊಂಡಿದ್ದರು ಎಂದು ಹೇಳಲಾಗಿದೆ.

ಇತರ ಹಿಂದುಳಿದ ವರ್ಗ ಹಾಗೂ ಅಂಗವೈಕಲ್ಯ ಕೋಟಾ ಅಡಿ ಮೀಸಲಾತಿ ದುರುಪಯೋಗಪಡಿಸಿಕೊಂಡು ಕೇಂದ್ರ ಲೋಕಸೇವಾ ಆಯೋಗದ (ಯುಪಿಎಸ್‌ಸಿ) ಪರೀಕ್ಷೆಯಲ್ಲಿ ತೇರ್ಗಡೆಯಾಗಲು ನಕಲಿ ದಾಖಲೆಗಳನ್ನು ಸಲ್ಲಿಸಿದ ಆರೋಪ ಖೇಡ್ಕರ್‌ ಮೇಲಿದೆ.ಇದರ ಜೊತೆಗೆ ಅಕ್ರಮವಾಗಿ ಖಾಸಗಿ ಕಾರಿಗೆ ಸರ್ಕಾರಿ ಫಲಕ ಹಾಕಿ ಓಡಾಡುತ್ತಿದ್ದ ಆರೋಪವೂ ಇದೆ. ಖೇಡ್ಕರ್‌ ಅವರು ಸುಳ್ಳು ಮಾಹಿತಿಗಳನ್ನು ನೀಡಿದ್ದಾರೆ ಎಂಬ ಆರೋಪಗಳನ್ನು ಪರಿಗಣಿಸಿ ಅವರ ನೇಮಕಾತಿ ಆದೇಶವನ್ನು ಯುಪಿಎಸ್‌ಸಿ ಬುಧವಾರ(ಜು.31)ರಂದು ರದ್ದುಗೊಳಿಸಿದೆ. ಅಷ್ಟಲ್ಲದೆ, ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳು ಮತ್ತು ನೇಮಕಾತಿಯಿಂದ ಡಿಬಾರ್‌ ಮಾಡಿದೆ ಎಂದು ವರದಿ ತಿಳಿಸಿದೆ.

Click

https://newsnotout.com/2024/08/dog-bite-to-the-old-lady-kannada-news-viral-news-son-complaint/
https://newsnotout.com/2024/08/25-lakh-salary-kannada-news-upsc-exam-viral-news-nomore/
https://newsnotout.com/2024/08/rahul-gandhi-kannada-news-sulthanpurcobbler-viral-news/
https://newsnotout.com/2024/08/prajwal-revanna-case-fsl-report-handover-to-the-sit-and-confirmed/
https://newsnotout.com/2024/08/wayanadu-army-dddbuild-bridge-kannada-news-kannada-landslide/
https://newsnotout.com/2024/08/mother-nomore-doubter-and-son-are-dipression-kannada-news/

Related posts

ಹಾಸನ ಆಸ್ಪತ್ರೆಯಲ್ಲಿ 24 ನವಜಾತ ಶಿಶುಗಳಿದ್ದ ಐಸಿಯು ವಾರ್ಡ್‌ನಲ್ಲಿ ಅಗ್ನಿ ಅವಘಡ..!ಸಿಬ್ಬಂದಿಯ ಸಮಯ ಪ್ರಜ್ಞೆಯಿಂದ ಶಿಶುಗಳನ್ನು ರಕ್ಷಿಸಿದ್ದೇಗೆ..?

Chamarajeshwara Temple: ‘ಹಾಯ್‌ ಪುಟ್ಟಾ…ಹೇಗಿದಿಯಾ..? ನಿನ್ನ ನೆನಪೇ ಕಾಡುತ್ತಿದೆ’, ದೂರವಾದ ಜೀವದ ಗೆಳತಿಗೆ ಪತ್ರ ಬರೆದು ದೇವರ ಹುಂಡಿಗೆ ಹಾಕಿದ ಪ್ರೇಮಿ..!

ಕೆವಿಜಿ ಕ್ಯಾಂಪಸ್ ನ್ಯೂಸ್: ಒಂದು ಕ್ಯಾಂಪಸ್ ಹಲವು ವಿಭಿನ್ನ ಕಾರ್ಯಕ್ರಮ, ಒಂದು ಕ್ಲಿಕ್ ಕ್ಯಾಂಪಸ್ ನ ಹಲವು ಅಪ್ಡೇಟ್ಸ್ ಇಲ್ಲಿದೆ ವೀಕ್ಷಿಸಿ