ರಾಜ್ಯವೈರಲ್ ನ್ಯೂಸ್ಸಿನಿಮಾ

ಧಾರಾವಾಹಿ ಮೂಲಕ ಮತ್ತೆ ನಟನೆಗೆ ಮರಳಿದ ಪೂಜಾ ಗಾಂಧಿ..! ಯಾವುದು ಆ ಸಿರಿಯಲ್..? ಇಲ್ಲಿದೆ ಸಂಪೂರ್ಣ ಮಾಹಿತಿ

245

ನ್ಯೂಸ್‌ ನಾಟೌಟ್‌: ‘ಮುಂಗಾರು ಮಳೆ’ (Mungaru Male) ನಟಿ ಪೂಜಾ ಗಾಂಧಿ (Pooja Gandhi) ಅಭಿಮಾನಿಗಳಿಗೆ ಸಿಹಿಸುದ್ದಿ ಕೊಟ್ಟಿದ್ದು, ಮತ್ತೆ ತೆರೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.

‘ನಿನಗಾಗಿ’ ಎಂಬ ಸಿರಿಯಲ್ ನಲ್ಲಿ ಪೂಜಾ ಗಾಂಧಿ ನಟಿಸುತ್ತಿದ್ದಾರೆ ಎನ್ನಲಾಗಿದೆ. ಸಿನಿಮಾ ನಟಿಯೊಬ್ಬರ ಕಥೆ ಹೊಂದಿರುವ ‘ನಿನಗಾಗಿ’ ಸೀರಿಯಲ್‌ನಲ್ಲಿ ಸೂಪರ್ ಸ್ಟಾರ್ ರಚನಾ ಎಂಬ ಪಾತ್ರದಲ್ಲಿ ‘ಬಿಗ್ ಬಾಸ್’ ಖ್ಯಾತಿಯ ದಿವ್ಯಾ ಉರುಡುಗ ನಟಿಸುತ್ತಿದ್ದಾರೆ.

ಈ ಸೀರಿಯಲ್‌ಗೆ ಪೂಜಾ ಗಾಂಧಿ ವಿಶೇಷ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸದ್ಯ ಪೂಜಾ ಗಾಂಧಿ ಜೊತೆಗಿನ ಫೋಟೋಗಳನ್ನು ದಿವ್ಯಾ ಉರುಡುಗ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಧಾರಾವಾಹಿಯಲ್ಲಿ ನಟಿಸುತ್ತಿರುವ ಸಹಕಲಾವಿದರು ಕೂಡ ಫೋಟೋಗೆ ಪೋಸ್‌ ಕೊಟ್ಟಿದ್ದಾರೆ. ಮುಂಗಾರು ಮಳೆ, ಮಿಲನಾ, ಕೃಷ್ಣ, ಅನು, ತಾಜ್‌ಮಹಲ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ಪೂಜಾ ಗಾಂಧಿ ನಟಿಸಿದ್ದಾರೆ.

https://newsnotout.com/2024/07/donald-trump-under-attack-by-unkwon-kannada-news-modi-replay/: ಧಾರಾವಾಹಿ ಮೂಲಕ ಮತ್ತೆ ನಟನೆಗೆ ಮರಳಿದ ಪೂಜಾ ಗಾಂಧಿ..! ಯಾವುದು ಆ ಸಿರಿಯಲ್..? ಇಲ್ಲಿದೆ ಸಂಪೂರ್ಣ ಮಾಹಿತಿ

See also  ರಾಮ ದಶರಥ ಮಹಾರಾಜನಿಗೆ ಹುಟ್ಟಿಲ್ಲ, ಪುರೋಹಿತನಿಗೆ ಹುಟ್ಟಿದ್ದು..! ಮತ್ತೆ ನಾಲಗೆ ಹರಿಬಿಟ್ಟ ಪ್ರೊ.ಭಗವಾನ್..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget