ರಾಜಕೀಯವಿಡಿಯೋವೈರಲ್ ನ್ಯೂಸ್

ಕುರ್ತಾ, ಪೈಜಾಮಾದಲ್ಲಿ ಇರುತ್ತಿದ್ದ ನರೇಂದ್ರ ಮೋದಿ ಪಂಚೆಯಲ್ಲಿ ಮಿಂಚಿದ್ದೇಕೆ..? ಇಲ್ಲಿದೆ ವೈರಲ್‌ ವಿಡಿಯೋ

197

ನ್ಯೂಸ್ ನಾಟೌಟ್‌: ಕುರ್ತಾ, ಪೈಜಾಮಾದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದ ಪ್ರಧಾನಿ ನರೇಂದ್ರ ಮೋದಿ (Narendra Modi) ಇದೀಗ ದಕ್ಷಿಣ ಭಾರತದ ಉಡುಗೆ ಪಂಚೆಯಲ್ಲಿ ಉಟ್ಟು ಪೊಂಗಲ್ ಆಚರಿಸಿದ್ದಾರೆ.

ಪ್ರಧಾನಿ ಮೋದಿ ಸದ್ಯ ಪಂಚೆ ಧರಿಸುವ ಮೂಲಕ ಎಲ್ಲರ ಗಮನಸೆಳೆದಿದ್ದು, ದೆಹಲಿಯ ರಾಜ್ಯ ಸಚಿವ ಎಲ್ ಮುರುಗನ್ (L Murugan) ಅವರ ನಿವಾಸದಲ್ಲಿನಡೆದ ಪೊಂಗಲ್ ಆಚರಣೆಯಲ್ಲಿ ಭಾಗವಹಿಸಲು ಪ್ರಧಾನಿಯವರು ದಕ್ಷಿಣ ಭಾರತದ ಪಂಚೆಯನ್ನು ಧರಿಸಿದ್ದರು ಎನ್ನಲಾಗಿದೆ.

ಪ್ರಧಾನಿ ಎಡ ಭುಜದ ಮೇಲೆ ಶಾಲು ಹೊದ್ದು, ಕಪ್ಪು ಕೋಟ್ ಜೊತೆಗೆ ಬಿಳಿ ಪಂಚೆ ಧರಿಸಿರುವುದನ್ನು ವೀಡಿಯೋದಲ್ಲಿ ಕಾಣಬಹುದು. ಅಲ್ಲದೆ ಒಲೆಯ ಮೇಲಿದ್ದ ಪಾತ್ರೆಗೆ ಏನೋ ಹಾಕುತ್ತಿರುವುದನ್ನು ಕೂಡ ಗಮನಿಸಬಹುದು. ಇದಾದ ಬಳಿಕ ಮಂಟಪದೊಳಗೆ ನಿಂತಿರುವ ಹಸುವಿನ ಕಡೆಗೆ ಹೋಗಿ ಹಸುವಿನ ಮೇಲೆ ಹೂವು ಹಾಕಿ ಅದಕ್ಕೆ ತಿನ್ನಿಸುವುದನ್ನು ಕೂಡ ವೀಡಿಯೋದಲ್ಲಿ ಕಾಣಬಹುದಾಗಿದೆ. ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.ಬಳಿಕ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ನರೇಂದ್ರ ಮೋದಿಯವರು ಸಮಸ್ತ ಜನತೆಗೆ ಪೊಂಗಲ್ ಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ.

ಸದ್ಯ ನರೇಂದ್ರ ಮೋದಿಯವರು ಪೊಂಗಲ್‌ (Pongal) ಆಚರಣೆಯ ವಿಧಿ-ವಿಧಾನಗಳನ್ನು ನಡೆಸುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

https://newsnotout.com/2024/01/arjuna-and-abhimanyu/
See also  ಸುಳ್ಯ: ಅತೀ ವೇಗದಿಂದ ವಾಹನ ಚಲಾಯಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ಹಲ್ಲೆ, ಸ್ಕೂಟಿ ಚಾಲಕನಿಗೆ ಕಲ್ಲಿನಿಂದ ಗುದ್ದಿದ ಆಟೋ ಚಾಲಕ
  Ad Widget   Ad Widget   Ad Widget   Ad Widget   Ad Widget   Ad Widget   Ad Widget