ಕ್ರೈಂದೇಶ-ವಿದೇಶರಾಜಕೀಯವೈರಲ್ ನ್ಯೂಸ್

ನಾಪತ್ತೆಯಾಗಿದ್ದ ಮಾಜಿ ಸಚಿವನ ಶವ ಕಾಲುವೆಯಲ್ಲಿ ಪತ್ತೆ..! ಆ ಎರಡು ವಸ್ತುಗಳು ನೀಡಿದ ಸುಳಿವೇನು..?

ನ್ಯೂಸ್ ನಾಟೌಟ್: ಪಾಕ್ಯೊಂಗ್ ಜಿಲ್ಲೆಯ ಚೋಟಾ ಸಿಂಗ್ಟಾಮ್‌ನಿಂದ ಸಿಕ್ಕಿಂನ ಮಾಜಿ ಸಚಿವ ಪೌಡ್ಯಾಲ್ ಎಂಬವರು ಜುಲೈ 7 ರಂದು ನಾಪತ್ತೆಯಾಗಿರುವುದಾಗಿ ದೂರು ನೀಡಲಾಗಿತ್ತು. ನಂತರ ಹಿರಿಯ ರಾಜಕಾರಣಿಯನ್ನು ಹುಡುಕಲು ವಿಶೇಷ ತನಿಖಾ ತಂಡವನ್ನು (SIT) ಸಹ ರಚಿಸಲಾಗಿತ್ತು. ಇದೀಗ ಸಿಕ್ಕಿಂನ ಮಾಜಿ ಸಚಿವ ಆರ್‌ಸಿ ಪೌಡ್ಯಾಲ್ ಮೃತದೇಹ 9 ದಿನಗಳ ನಂತರ ಪಶ್ಚಿಮ ಬಂಗಾಳದ ಕಾಲುವೆಯಲ್ಲಿ ಪತ್ತೆಯಾಗಿದೆ.

ಸಿಲಿಗುರಿಯ ಫುಲ್ಬರಿಯಲ್ಲಿರುವ ತೀಸ್ತಾ ಕಾಲುವೆಯಲ್ಲಿ ಮಂಗಳವಾರ(ಜುಲೈ.16) 80 ವರ್ಷದ ಪೌಡ್ಯಾಲ್ ಅವರ ಶವ ತೇಲುತ್ತಿರುವುದು ಪತ್ತೆಯಾಗಿದೆ. ಮೇಲ್ನೋಟಕ್ಕೆ ತೀಸ್ತಾ ನದಿಯ ಮೇಲ್ಭಾಗದಿಂದ ಮೃತದೇಹ ಹರಿದು ಬಂದಿರುವ ಶಂಕೆ ವ್ಯಕ್ತವಾಗಿದೆ.

ವಾಚ್ ಮತ್ತು ಬಟ್ಟೆಯಿಂದಾಗಿ ಇವರ ಶವವನ್ನು ಗುರುತಿಸಲಾಗಿದೆ. ಆರ್‌ಸಿ ಪೌಡ್ಯಾಲ್​ ಜುಲೈ 7 ರಂದು ಪಕ್ಯೊಂಗ್ ಜಿಲ್ಲೆಯ ತನ್ನ ಹುಟ್ಟೂರಾದ ಛೋಟಾ ಸಿಂಗ್ಟಾಮ್‌ನಿಂದ ನಾಪತ್ತೆಯಾಗಿದ್ದರು. ಆರ್ ಸಿ ಪೌಡ್ಯಾಲ್ ಸಾವಿನ ತನಿಖೆ ಸದ್ಯ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪೌಡ್ಯಾಲ್ ಸಿಕ್ಕಿಂ ವಿಧಾನಸಭೆಯಲ್ಲಿ ಉಪಸಭಾಪತಿಯಾಗಿದ್ದರು ಮತ್ತು ನಂತರ ರಾಜ್ಯದ ಅರಣ್ಯ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ.

Related posts

ಶೇನ್ ವಾರ್ನ್ ಸಾವಿನಲ್ಲಿ ಶಂಕೆ ಇಲ್ಲ: ಥಾಯ್ಲೆಂಡ್ ಪೊಲೀಸರ ಸ್ಪಷ್ಟನೆ

11 ದಿನಗಳ ವ್ರತ ಅಂತ್ಯಗೊಳಿಸಿದ ನರೇಂದ್ರ ಮೋದಿ, ಇಲ್ಲಿದೆ ವಿಡಿಯೋ

30ಕ್ಕೂ ಹೆಚ್ಚು ಮಂದಿಗೆ ಕಚ್ಚಿದ ಹುಚ್ಚು ನಾಯಿ..!ಶಾಲಾ ಮಕ್ಕಳು ಸೇರಿದಂತೆ 16 ಮಂದಿ ಆಸ್ಪತ್ರೆಗೆ ದಾಖಲು..!