Latestಕ್ರೈಂರಾಜಕೀಯವಿಡಿಯೋವೈರಲ್ ನ್ಯೂಸ್

ಹೆದ್ದಾರಿಯಲ್ಲೇ ಮಹಿಳೆಯೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ್ದ ರಾಜಕೀಯ ಮುಖಂಡ ಅರೆಸ್ಟ್..! ಇಲ್ಲಿದೆ ಸಂಪೂರ್ಣ ಮಾಹಿತಿ

1.2k

ನ್ಯೂಸ್ ನಾಟೌಟ್: ಮಹಿಳೆಯ ಜೊತೆ ನಡು ರಸ್ತೆಯಲ್ಲಿನ ಅಶ್ಲೀಲ ವಿಡಿಯೋ ವೈರಲ್ ಆದ ನಂತರ ಬಿಜೆಪಿ ಮುಖಂಡ ಎಂದು ಹೇಳಿಕೊಂಡಿದ್ದ ಮನೋಹರ್ ಲಾಲ್ ಧಕಾಡ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಆತನನ್ನು ಭಾನುವಾರ ಪೊಲೀಸರು ಬಂಧಿಸಿದ್ದಾರೆ.

ಮಧ್ಯಪ್ರದೇಶದ ಮಂದ್ಸೌರ್‌ನ ಮನೋಹರ್ ಲಾಲ್ ಧಕಾಡ್ ದೆಹಲಿ-ಮುಂಬೈ 8 ಲೇನ್ ಎಕ್ಸ್‌ ಪ್ರೆಸ್‌ ವೇಯಲ್ಲಿ ಮಹಿಳೆಯ ಜೊತೆ ಸೆ*ಕ್ಸ್‌ ನಡೆಸಿದ್ದರು. ಈ ವೇಳೆ ಮಹಿಳೆ ಸಂಪೂರ್ಣವಾಗಿ ಬೆತ್ತಲಾಗಿದ್ದು ಕಂಡು ಬಂದಿತ್ತು. ಈ ವಿಡಿಯೋ ವೈರಲ್‌ ಆದ ಬೆನ್ನಲ್ಲಿಯೇ ವಿವಾದಕ್ಕೆ ಕಾರಣವಾಗಿದೆ.

ಈ ಕುರಿತು ಹೇಳಿಕೆ ನೀಡಿದ ಪೊಲೀಸ್ ಅಧಿಕಾರಿ ಸಿಸಿ ಕ್ಯಾಮೆರಾದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಕಾಣಿಸಿಕೊಂಡಿರುವ ಬಿಳಿ ಬಣ್ಣದ ಕಾರು ಮನೋಹರ್ ಲಾಲ್ ಅವರಿಗೆ ಸೇರಿದ್ದು ದೃಢಪಟ್ಟಿದೆ, ಅಲ್ಲದೆ ಘಟನೆ ಸಂಬಂಧ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಜೊತೆಗೆ ಮನೋಹರ್ ಲಾಲ್ ಜೊತೆಗಿದ್ದ ಮಹಿಳೆಯ ಪತ್ತೆಗೆ ಹೆಚ್ಚಿನ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಹೇಳಿದ್ದರು.
ಮೇ 13ರ ಸಿಸಿಟಿವಿ ಫೂಟೇಜ್‌ ಇದಾಗಿದ್ದು, ಮುಖಂಡನ ಅರಿವಿಗೆ ಬಾರದಂತೆ ಸೆರೆಯಾಗಿದೆ. ತಮ್ಮ ಬಿಳಿ ಬಣ್ಣದ ಕಾರ್‌ ನಿಂದ ಧಾಕಡ್‌ ಮಹಿಳೆಯ ಜೊತೆ ಇಳಿದಿದ್ದು ಕಂಡು ಬಂದಿದೆ. ಅಷ್ಟು ಮಾತ್ರವಲ್ಲದೆ, ಮಹಿಳೆಯ ಜೊತೆ ನಡು ರಸ್ತೆಯಲ್ಲಿಯೇ ಅವರು ಲೈಂಗಿಕ ಕಾರ್ಯ ಮಾಡಿರುವುದು ದಾಖಲಾಗಿದೆ. ಧಕಾಡ್ ಅವರ ಪತ್ನಿ ಮಂದ್ಸೌರ್‌ನ ಬನಿ ಗ್ರಾಮದ ವಾರ್ಡ್ ಸಂಖ್ಯೆ 8 ರ ಚುನಾಯಿತ ಜಿಲ್ಲಾ ಪಂಚಾಯತ್ ಸದಸ್ಯೆ ಎಂದು ಹೇಳಲಾಗಿದೆ.

ಈ ವಿಡಿಯೋ ವೈರಲ್‌ ಆದ ಬೆನ್ನಲ್ಲಿಯೇ ಧಕಾಡ್ ಮಹಾಸಭಾ ಯುವ ಸಂಘ ಅವರನ್ನು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ತೆಗೆದುಹಾಕಿದೆ. ಬಿಜೆಪಿ ಕೂಡ ಧಕಾಡ್‌ ನಿಂದ ದೂರ ಸರಿದಿದೆ. ಅವರು ಪಕ್ಷದ ಪ್ರಾಥಮಿಕ ಸದಸ್ಯರಲ್ಲ ಮತ್ತು ಆನ್‌ ಲೈನ್ ನೋಂದಣಿ ಮೂಲಕ ಸೇರಿದ್ದಾರೆ ಎಂದು ಪಕ್ಷ ಹೇಳಿದೆ.

ಪಕ್ಷದ ಕಚೇರಿಯಲ್ಲಿ ಮುಖಂಡನಿಂದ ಮಹಿಳೆ ಜೊತೆ ಅಸಭ್ಯ ವರ್ತನೆ..! ವಿಡಿಯೋ ವೈರಲ್ ಆದ ಬೆನ್ನಲ್ಲೇ ಮುಖಂಡನಿಗೆ ನೋಟಿಸ್..!

ಮುಂದಿನ 5 ದಿನ ದ.ಕ. ಜಿಲ್ಲೆಗೆ ರೆಡ್ ಅಲರ್ಟ್..! ಮುನ್ನೆಚ್ಚರಿಕಾ ಕ್ರಮವಾಗಿ ಎನ್‌.ಡಿ.ಆರ್‌.ಎಫ್, ಎಸ್‌.ಡಿ.ಆರ್‌.ಎಫ್ ತಂಡ ಆಗಮನ

  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget