ಕ್ರೈಂವಿಡಿಯೋವೈರಲ್ ನ್ಯೂಸ್

ಪೊಲೀಸ್ ವಾಹನದಲ್ಲಿ ರೀಲ್ಸ್ ಮಾಡಿದ ಯುವಕ..! ಆತನನ್ನು ಬಂಧಿಸಿದ ಪೊಲೀಸರು, ಇಲ್ಲಿದೆ ವೈರಲ್ ವಿಡಿಯೋ

158

ನ್ಯೂಸ್‌ನಾಟೌಟ್‌: ಪೊಲೀಸ್‌ ವಾಹನವನ್ನು ಬಳಸಿಕೊಂಡು ಇನ್ಸ್ಟಾಗ್ರಾಮ್‌ ರೀಲ್ಸ್‌ ಮಾಡಿದ ಯುವಕನೊಬ್ಬ ನನ್ನು ಪೊಲೀಸರು ಬಂಧಿಸಿದ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್‌ ನಲ್ಲಿ ನಡೆದಿದೆ.

ಇಂದಿರಾಪುರಂ ಪ್ರದೇಶದಲ್ಲಿ ಪೊಲೀಸರು ಟ್ರಾಫಿಕ್ ಕ್ಲಿಯರ್ ಮಾಡುವಲ್ಲಿ ನಿರತರಾಗಿದ್ದಾಗ ಮೊಯಿನ್ ಖಾನ್ ಎಂಬಾತ ಖಾಲಿಯಿದ್ದ ಪೊಲೀಸ್‌ ವಾಹನವನ್ನು ಬಳಸಿಕೊಂಡು ರೀಲ್ಸ್‌ ಮಾಡಿದ್ದಾನೆ. ಪೊಲೀಸ್‌ ವಾಹನದ ಸೀಟಿನಿಂದ ಕೆಳಗಿಳಿದು, ಕೋಲ್ಡ್‌ ಡ್ರಿಂಕ್‌ ಕುಡಿಯುತ್ತಾ ಬರುವ ದೃಶ್ಯಕ್ಕೆ ಮ್ಯೂಸಿಕ್‌ ವೊಂದನ್ನು ಹಾಕಿ ರೀಲ್ಸ್‌ ಮಾಡಿ ಫೆ.15 ರಂದು ಇನ್ಸ್ಟಾಗ್ರಾಮ್‌ ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಈ ವಿಡಿಯೋ ವಿಪರೀತ ವೈರಲ್ ಆಗಿದೆ. ಇಂದಿರಾಪುರಂನ ಕಣವಾಣಿ ಸೇತುವೆಯ ಬಳಿ ಟ್ರಾಫಿಕ್ ಜಾಮ್ ತೆರವುಗೊಳಿಸಲು ತೊಡಗಿದ್ದಾಗ, ಖಾಲಿ ಪೊಲೀಸ್ ವಾಹನವನ್ನು ಗಮನಿಸಿದ ಯುವಕ ಅದನ್ನು ಬಳಸಿ ರೀಲ್ ಮಾಡಿದ್ದಾರೆ. ವಿಡಿಯೋ ವೈರಲ್‌ ಆಗಿ ನಮ್ಮ ಗಮನಕ್ಕೆ ಬಂದ ಬಳಿಕ ಯುವಕನನ್ನು ಬಂಧಿಸಿದ್ದೇವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

See also  ದೇಶದಲ್ಲೇ ಅತಿ ಹೆಚ್ಚು ಆನ್‌ ಲೈನ್ ಲೈಂಗಿಕ ದೌರ್ಜನ್ಯಕ್ಕೆ ಕರ್ನಾಟಕದ ಮಕ್ಕಳು ಬಲಿ..! ಆತಂಕಕಾರಿ ಮಾಹಿತಿ ಬಹಿರಂಗ..!
  Ad Widget   Ad Widget   Ad Widget   Ad Widget   Ad Widget   Ad Widget   Ad Widget