ಕ್ರೈಂವೈರಲ್ ನ್ಯೂಸ್

ಪೊಲೀಸರನ್ನೇ ಮರವನ್ನೇರಿಸಿದ ಖತರ್ನಾಕ್ ಕಳ್ಳ..! ಅಷ್ಟಕ್ಕೂ ಪೊಲೀಸರು ಮರವನ್ನೇರಿದ್ದೇಕೆ ಗೊತ್ತಾ?

290

ನ್ಯೂಸ್ ನಾಟೌಟ್: ಪೊಲೀಸರನ್ನು ಕಂಡು ಕಳ್ಳರು ಮರವನ್ನೇರಿ ಅಡಗಿ ಕುಳಿತಿದ್ದನ್ನು ಕೇಳಿದ್ದೇವೆ. ಆದರೆ ಇಲ್ಲೊಂದು ಕಡೆ ಕಳ್ಳನನ್ನು ಹಿಡಿಯುವುದಕ್ಕೆ ಪೊಲೀಸರೇ ಮರವನ್ನೇರಿ ಭಾರಿ ಸುದ್ದಿಯಾಗಿದ್ದಾರೆ. ಈ ವಿಚಿತ್ರ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಅಷ್ಟಕ್ಕೂ ಪೊಲೀಸರು ಮರವನ್ನೇರಿ ಕುಳಿತಿದ್ಯಾಕೆ ಅನ್ನುವ ಪ್ರಶ್ನೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

ಮಥುರಾ- ಆಗ್ರಾ ನಡುವಿನ ಯಮುನಾ ಎಕ್ಸ್‌ಪ್ರೆಸ್‌ ವೇನಲ್ಲಿ ದರೋಡೆ ಪ್ರಕರಣ ಹೆಚ್ಚಳವಾಗುತ್ತಿದೆ. ಹೀಗಾಗಿ ಎಕ್ಸ್‌ಪ್ರೆಸ್‌ ವೇನಲ್ಲಿ ದರೋಡೆಯನ್ನು ತಡೆಯಲು ಪೊಲೀಸ್​​ ಅಧಿಕಾರಿಗಳು ಸಾಹಸವೊಂದಕ್ಕೆ ಕೈಹಾಕಿದ್ದಾರೆ.
ಇತ್ತೀಚಿಗೆ ದೆಹಲಿ- ಮಥುರಾ- ಆಗ್ರಾ ನಡುವಿನ ಯಮುನಾ ಎಕ್ಸ್‌ಪ್ರೆಸ್‌ ವೇನಲ್ಲಿ ಎರಡು ದರೋಡೆ ಪ್ರಕರಣಗಳು ನಡೆದಿದ್ದವು. ದೆಹಲಿಯ ಪಿಡಬ್ಲ್ಯೂಡಿ ಎಂಜಿನಿಯರ್ ದರೋಡೆ ಮಾಡುತ್ತಿದ್ದ. ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ, ತಲೆಮರೆಸಿಕೊಂಡು ಓಡಾಡುತ್ತಿದ್ದ. ಹೀಗಾಗಿ ಎಕ್ಸ್‌ಪ್ರೆಸ್‌ ವೇನಲ್ಲಿ ದರೋಡೆ ತಡೆಯಲು ಮಥುರಾ ಪೊಲೀಸರು ದರೋಡೆಕೋರರ ಸೆರೆ ಹಿಡಿಯಲು ಬಿಗ್​​ ಪ್ಲಾನ್​ ಮಾಡಿದ್ದಾರೆ.
ಮಥುರಾ ಪೊಲೀಸರು ಮರ ಹತ್ತಿ, ಬ್ಯಾಟರಿ ಹಿಡಿದುಕೊಂಡು ದರೋಡೆಕೋರರ ಮೇಲೆ ಹದ್ದಿನ ಕಣ್ಣು ಇಟ್ಟಿದ್ದಾರೆ. ಇನ್ನು ಮಥುರಾ ಪೊಲೀಸ್​ ಅಧಿಕಾರಿಗಳು ಮರ ಹತ್ತಿ ಕುಳಿತುಕೊಂಡಿರೋ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗಿದೆ.

See also  ಕೋಚಿಂಗ್ ಸೆಂಟರ್ ಗೆ ನೀರು ನುಗ್ಗಿ 3 ವಿದ್ಯಾರ್ಥಿಗಳ ಸಾವು ಪ್ರಕರಣಕ್ಕೆ ಟ್ವಿಸ್ಟ್..! 13 ಅಕ್ರಮ ಕೋಚಿಂಗ್ ಸೆಂಟರ್‌ ಗಳಿಗೆ ಬೀಗ..!
  Ad Widget   Ad Widget   Ad Widget     Ad Widget   Ad Widget   Ad Widget Ad Widget     Ad Widget   Ad Widget   Ad Widget