ಕ್ರೈಂ

ಮೊಬೈಲ್ ಕದ್ದು ಸಿಕ್ಕಿಬಿದ್ದ ಪೊಲೀಸ್‌ ಸಬ್‌ ಇನ್ಸ್ ಪೆಕ್ಟರ್

231
Spread the love

ತಿರುವನಂತಪುರ :ಕಳ್ಳತನ ಮಾಡಿದವ ಪೊಲೀಸ್ ಕೈಗೆ ಸಿಕ್ಕಿ ಬೀಳುವುದು ಸಾಮಾನ್ಯ. ಆದರೆ ಇಲ್ಲೊಬ್ಬ ಪೊಲೀಸ್ ಅಧಿಕಾರಿಯೇ ಹೆಣದ ಕಿಸೆಯಲ್ಲಿದ್ದ ಮೊಬೈಲ್‌ ಕದ್ದು ದೊಡ್ಡ ಸುದ್ದಿಯಾಗಿದ್ದಾನೆ.   ಎಸ್​ಐ ಸತ್ತು ಹೋದ ವ್ಯಕ್ತಿಯ ಬಳಿಯು ತನ್ನ ಕಳ್ಳ ಬುದ್ಧಿ ತೋರಿರುವುದು ಅಮಾನವೀಯ ಅನ್ನುವ ಟೀಕೆ ಕೇಳಿ ಬಂದಿದೆ. ಪೆರುಮಥುರಾ ಮೂಲದ ವ್ಯಕ್ತಿಯೊಬ್ಬ ಕನಿಯಾಪುರಂ ರೈಲ್ವೆ ನಿಲ್ದಾಣದ ಬಳಿ ಮೃತಪಟ್ಟಿದ್ದ. ಆತ್ಮಹತ್ಯೆ ಪ್ರಕರಣವೆಂದು ದಾಖಲಿಸಿದ ಎಸ್ಐ ಜ್ಯೋತಿ ಸುಧಾಕರ್ ಎಲ್ಲ ಪ್ರಕ್ರಿಯೆಯನ್ನು ಮುಗಿಸಿದ್ದರು. ಈ ಪ್ರಕ್ರಿಯೆ ವೇಳೆ ಎಸ್ಐ ಮೊಬೈಲ್ ಕಳ್ಳತನ ಮಾಡಿದ್ದಾರೆಂದು ತಿಳಿದುಬಂದಿದೆ. ಸದ್ಯ ಎಸ್‌ಐ ಅನ್ನು ಅಮಾನತು ಮಾಡಲಾಗಿದೆ.  

See also  ಬಾಲಕ ಹಠಾತ್ ನಾಪತ್ತೆ, ಬಾಲಕನಿಗಾಗಿ ಪೋಷಕರಿಂದ ತೀವ್ರ ಹುಡುಕಾಟ
  Ad Widget   Ad Widget   Ad Widget