Uncategorized

ಪೊಲೀಸ್‌ ಠಾಣೆ ಬಳಿ ದಾಖಲೆಗಾಗಿ ವಿಡಿಯೋ ಚಿತ್ರೀಕರಣ ಅಪರಾಧವಲ್ಲ

ನ್ಯೂಸ್ ನಾಟೌಟ್: ಸರಕಾರಿ ಗೋಪ್ಯ ಕಾಯ್ದೆಯಡಿ (ಒಎಸ್‌ಎ) ಪೊಲೀಸ್‌ ಠಾಣೆಯನ್ನು ನಿಷೇಧಿತ ಸ್ಥಳ ಎಂದು ಗುರುತಿಸಿಲ್ಲ. ಹೀಗಾಗಿ ಪೊಲೀಸ್‌ ಠಾಣೆಯೊಳಗೆ ವಿಡಿಯೊ ಚಿತ್ರೀಕರಣ ಮಾಡುವುದು ಅಪರಾಧ ಆಗುವುದಿಲ್ಲ ಎಂದು ಬಾಂಬೆ ಹೈಕೋರ್ಟ್‌ನ ನಾಗ್ಪುರ ಪೀಠ ತಿಳಿಸಿದೆ.

ವಾರ್ಧಾ ಪೊಲೀಸ್‌ ಠಾಣೆಯೊಳಗೆ ಮಾರ್ಚ್‌ 2018ರಂದು ವಿಡಿಯೊ ಚಿತ್ರೀಕರಣ ಮಾಡುವುದರ ಮೂಲಕ ರವೀಂದ್ರ ಉಪಾಧ್ಯಾಯ ಎಂಬುವರು ಒಎಸ್‌ಎ ಕಾಯ್ದೆ ಉಲ್ಲಂಘಿಸಿದ್ದಾರೆ ಎಂಬ ಆರೋಪದ ಪ್ರಕರಣವನ್ನು ನ್ಯಾಯಮೂರ್ತಿಗಳಾದ ಮನಿಷ್‌ ಪಿತಾಳೆ ಮತ್ತು ವಾಲ್ಮಿಕಿ ಮೆನೇಜಸ್‌ ಅವರ ವಿಭಾಗೀಯ ಪೀಠ ಇತ್ತೀಚೆಗೆ ರದ್ದುಗೊಳಿಸಿದೆ.  ಒಎಸ್‌ಎಯ ಸೆಕ್ಷನ್‌ 3 ಮತ್ತು 2 (8)ರಲ್ಲಿ ಬೇಹುಗಾರಿಕೆಗೆ ಸಂಬಂಧಿಸಿದ ನಿಷೇಧಿತ ಸ್ಥಳಗಳಲ್ಲಿ ಪೊಲೀಸ್‌ ಠಾಣೆಯನ್ನು ಉಲ್ಲೇಖಿಸಿಲ್ಲ ಎಂದಿರುವ ಹೈಕೋರ್ಟ್‌, ಅದನ್ನು ‘ನಿಷೇಧಿತ ಸ್ಥಳ’ ಎಂಬ ವ್ಯಾಖ್ಯಾನದಲ್ಲಿ ಸೇರಿಸಬಹುದು ಎಂದು ‌ಆದೇಶದಲ್ಲಿ ಹೇಳಿದೆ.

ನೆರೆ ಹೊರೆಯವರೊಂದಿಗೆ ಜಗಳಕ್ಕೆ ಸಂಬಂಧಿಸಿ ಉಪಾಧ್ಯಾಯ ಅವರು ತನ್ನ ಪತ್ನಿಯೊಂದಿಗೆ ವಾರ್ಧಾ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದರು. ಇದೇ ವೇಳೆ ಅವರ ವಿರುದ್ಧವೂ ಪ್ರತಿ ದೂರು ದಾಖಲಾಯಿತು.  ಈ ಸಂದರ್ಭದಲ್ಲಿ ಠಾಣೆಯಲ್ಲಿ ನಡೆಯುತ್ತಿದ್ದ ಚರ್ಚೆಯನ್ನು ಉಪಾಧ್ಯಾಯ ವಿಡಿಯೊ ಚಿತ್ರೀಕರಣ ಮಾಡುತ್ತಿದ್ದರು. ಇದನ್ನು ಗಮನಿಸಿದ ಪೊಲೀಸರು ಅವರ ವಿರುದ್ಧ ಒಎಸ್‌ಎ ಕಾಯ್ದೆ ಉಲ್ಲಂಘನೆಯಡಿ ಎಫ್‌ಐಆರ್‌ ದಾಖಲಿಸಿ, ಆರೋಪಪಟ್ಟಿ ಸಲ್ಲಿಸಿದ್ದರು. ಅದನ್ನು ನ್ಯಾಯಾಲಯ ರದ್ದುಗೊಳಿಸಿದೆ.

Related posts

ಎದುರಾಳಿಯ ಒಂದೇ ಒಂದು ಏಟಿಗೆ ಕಿಕ್ ಬಾಕ್ಸರ್ ಪ್ರಾಣವೇ ಹೋಯ್ತು!

ಕೊಕ್ಕಡ: ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಅವ್ಯವಹಾರದ ಘಮ..ಘಮ..! ಸೂಕ್ತ ತನಿಖೆ ನಡೆಸುವಂತೆ ಒತ್ತಾಯಿಸಿ ಪ್ರತಿಭಟನೆ

ಮಡಪ್ಪಾಡಿ, ಮರ್ಕಂಜ ಅರಣ್ಯ ಪ್ರದೇಶದಲ್ಲಿ ಕಾಣಿಸಿಕೊಂಡ ಬೆಂಕಿ!