ಕ್ರೈಂವೈರಲ್ ನ್ಯೂಸ್

ರಿವಾಲ್ವರ್ ಕ್ಲೀನ್ ಮಾಡ್ತಿದ್ದಾಗ ಠಾಣೆಗೆ ಬಂದ ಮಹಿಳೆಗೆ ಗುಂಡೇಟು ಬಿದ್ದದ್ದೇಗೆ..? ಮುಂದೇನಾಯ್ತು..? ಘಟನೆ ನಡೆದದ್ದೆಲ್ಲಿ..?

ನ್ಯೂಸ್ ನಾಟೌಟ್ : ಪಾಸ್‌ಪೋರ್ಟ್ ಪರಿಶೀಲನೆಗೆ ಪೊಲೀಸ್ (Police) ಠಾಣೆಗೆ ಬಂದಿದ್ದ ಮಹಿಳೆಯೊಬ್ಬಳಿಗೆ ಸಬ್ ಇನ್‍ಸ್ಪೆಕ್ಟರ್ ಅಚಾನಕ್ಕಾಗಿ ಸರ್ವೀಸ್ ರಿವಾಲ್ವಾರ್ ಗುಂಡು ಹಾರಿಸಿದ ಘಟನೆ ಉತ್ತರ ಪ್ರದೇಶದ (Uttar Pradesh) ಅಲಿಘರ್‌ನಲ್ಲಿ ನಡೆದಿದೆ.

ಘಟನೆಯ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಘಟನೆಯಲ್ಲಿ ಗಾಯಗೊಂಡ ಮಹಿಳೆಯನ್ನು ಇಶ್ರತ್ ಎಂದು ಗುರುತಿಸಲಾಗಿದ್ದು, ಆಕೆ ತನ್ನ ಮಗನೊಂದಿಗೆ ಪಾಸ್ ಪೋರ್ಟ್ ಪರಿಶೀಲನೆಗೆ ಠಾಣೆಗೆ ಬಂದಿದ್ದರು ಎನ್ನಲಾಗಿದೆ. ಸ್ವಲ್ಪ ಸಮಯದ ನಂತರ ಬಂದ ಪೊಲೀಸ್ ಅಧಿಕಾರಿ ಎಸ್‍ಐ ಮನೋಜ್ ಶರ್ಮಾಗೆ ಪಿಸ್ತೂಲ್ ನೀಡಿದ್ದಾರೆ.

ಈ ವೇಳೆ ಸರ್ವೀಸ್ ರಿವಾಲ್ವರ್ ಕ್ಲೀನ್ ಮಾಡುತ್ತಿದ್ದಾಗ ಆಕಸ್ಮಿಕವಾಗಿ ಗುಂಡು ಸಿಡಿದಿದೆ. ಇದರಿಂದ ಮಹಿಳೆ ತಲೆಗೆ ಗಂಭೀರ ಗಾಯವಾಗಿದ್ದು, ಆಕೆ ಸ್ಥಳದಲ್ಲೇ ಕುಸಿದು ಬಿದ್ದಿದ್ದಾಳೆ ಎಂದು ವರದಿ ತಿಳಿಸಿದೆ.

ಗಾಯಗೊಂಡ ಮಹಿಳೆಯನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಗುಂಡು ಮಹಿಳೆಯ ತಲೆಯ ಹಿಂಭಾಗಕ್ಕೆ ತಗುಲಿದೆ. ಆಕೆಯ ಸ್ಥಿತಿ ಗಂಭೀರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎಸ್‍ಐ ಅನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದ್ದು, ಆತನ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ.

Related posts

ರಾಹುಲ್‌ ಗಾಂಧಿ ವೇದಿಕೆಯ ಫ್ಲೆಕ್ಸ್‌ನಲ್ಲಿ ಬಿಜೆಪಿ ಅಭ್ಯರ್ಥಿಯ ಫೋಟೋ, ಯಾರ ವಿರುದ್ಧವಾಗಿ ಪ್ರಚಾರ ಮಾಡಬೇಕಿತ್ತೋ ಅವರ ಫೋಟೋ ಕಾಂಗ್ರೆಸ್ ಫ್ಲೆಕ್ಸ್‌ನಲ್ಲಿ..!

ಸುಳ್ಯ: ವಿದ್ಯಾರ್ಥಿಗಳೆಂದು ನಂಬಿಸಿ ಚಿನ್ನದಂಗಡಿ ಮಾಲೀಕನಿಗೆ 3 ಪವನ್ ಕದ್ದ ಸರವನ್ನು ಹಿಡಿಸಿದ ಗಂಡ-ಹೆಂಡ್ತಿ..! ಚಿನ್ನದಂಗಡಿ ಮಾಲೀಕನಿಗೆ 1 ಲಕ್ಷದ 43 ಸಾವಿರ ರೂ. ಪಂಗನಾಮ..!

ಸೌದಿಯಲ್ಲಿ ಜೈಲು ಪಾಲಾದ ಮಂಗಳೂರಿನ ವ್ಯಕ್ತಿ..! 10 ವರ್ಷ ಲಾಂಡ್ರಿ ಅಂಗಡಿ ಇರಿಸಿಕೊಂಡಿದ್ದವ ಜೈಲು ಸೇರಿದ್ದೇಗೆ..?