ಕರಾವಳಿದೇಶ-ವಿದೇಶವಿಡಿಯೋವೈರಲ್ ನ್ಯೂಸ್

ವಶಪಡಿಸಿಕೊಂಡಿದ್ದ ಅಕ್ರಮ ಮದ್ಯ ನಾಶದ ವೇಳೆ ಬಾಟಲಿ ದೋಚಿದ ಜನರು..! ಮದ್ಯಪ್ರಿಯರ ಗುಂಪು ನೋಡಿ ಪೊಲೀಸರೇ ಶಾಕ್..! ಇಲ್ಲಿದೆ ವೈರಲ್ ವಿಡಿಯೋ

ನ್ಯೂಸ್ ನಾಟೌಟ್: ವಶಪಡಿಸಿಕೊಂಡಿದ್ದ ಅಕ್ರಮ ಮದ್ಯದ ಬಾಟಲಿಗಳನ್ನು ನಾಶ ಮಾಡುತ್ತಿದ್ದ ವೇಳೆಯಲ್ಲಿ ಪೊಲೀಸರ ಎದುರೇ ಮದ್ಯಪ್ರಿಯರು ಬಾಟಲಿಗಳನ್ನು ಹೊತ್ತೊಯ್ದ ಘಟನೆ ಆಂಧ್ರಪ್ರದೇಶದ ಗುಂಟೂರಿನಲ್ಲಿ ನಡೆದಿದೆ.

ರಾಜಧಾನಿ ಅಮರಾವತಿಯಿಂದ ಸುಮಾರು 40 ಕಿಲೋ ಮೀಟರ್‌ ದೂರದಲ್ಲಿರುವ ಗುಂಟೂರಿನಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ಏಯ್‌, ಏಯ್‌ ಎಂದು ಕೂಗಾಡುತ್ತಿರುವ ನಡುವೆಯೇ ಜನರು ಗುಂಪಿನಲ್ಲಿ ಬಂದು ಬಾಟಲಿಗಳನ್ನು ಹೊತ್ತೊಯ್ದಿದ್ದಾರೆ.

ಪೊಲೀಸರ ಕಾರ್ಯಾಚರಣೆಯಲ್ಲಿ ಅಕ್ರಮವಾಗಿ ವಶಪಡಿಸಿಕೊಂಡಿದ್ದ ಸುಮಾರು 50 ಲಕ್ಷ ರೂಪಾಯಿ ಮೌಲ್ಯದ ಮದ್ಯವನ್ನು ಡಂಪಿಂಗ್‌ ಯಾರ್ಡ್‌ ನಲ್ಲಿ ನಾಶಪಡಿಸುತ್ತಿದ್ದ ವೇಳೆ ಏಕಾಏಕಿ ಜನರ ಗುಂಪು ಲಗ್ಗೆ ಇಟ್ಟು ಮದ್ಯದ ಬಾಟಲಿಗಳನ್ನು ಹೊತ್ತೊಯ್ದಿರುವ ಘಟನೆಯಿಂದ ವರದಿಯಾಗಿದೆ.
ಮದ್ಯದ ಬಾಟಲಿ ನಾಶದ ಸಂದರ್ಭದಲ್ಲಿ ಜನರು ಲಗ್ಗೆ ಇಟ್ಟು ಬಾಟಲಿ ಹೊತ್ತೊಯ್ಯುತ್ತಾರೆ ಎಂಬ ಊಹೆ ಪೊಲೀಸರಿಗೆ ಇರಲಿಲ್ಲ ಎನ್ನಲಾಗಿದೆ.

Click

https://newsnotout.com/2024/09/arun-kumar-puttila-and-case-high-court-stay-on-investigation-kannada-news/
https://newsnotout.com/2024/09/mangaluru-eletric-scooter-kannada-news-notice-issue-mangaluru-corporation/
https://newsnotout.com/2024/09/electric-scooter-ola-kannada-news-viral-news-fire-on-showroom-police-arrested/
https://newsnotout.com/2024/09/food-corporation-of-india-kannada-news-job-vacency-all-over-india/
https://newsnotout.com/2024/09/muslim-ganesha-chaturti-kannada-news-mother-and-father-v/
https://newsnotout.com/2024/09/kannada-news-bengaluru-daravada-man-issue-with-women/

Related posts

ಸುಳ್ಯ:ಪಂಜದಲ್ಲಿ ಧಗಧಗನೇ ಹೊತ್ತಿ ಉರಿದ ಬೆಂಕಿ , ಸಮಯಪ್ರಜ್ಞೆಯಿಂದ ತಪ್ಪಿತು ಭಾರಿ ದೊಡ್ಡ ದುರಂತ

ಹಲವು ತಿಂಗಳಿನಿಂದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಚಿನ್ನ-ಬೆಳ್ಳಿ ಹರಿಕೆ ಅಂಗಡಿ ಬಂದ್..? ಮುಚ್ಚಿದ ಬಾಗಿಲಿನ ಹಿಂದಿನ ಅಸಲಿ ಕಥೆಯೇನು..?

ದನ ಕಟ್ಟಿ ಹಾಕಲು ಹೋದ ವ್ಯಕ್ತಿ ಮೇಲೆ ಕಾಡು ಹಂದಿ ಮಾರಣಾಂತಿಕ ದಾಳಿ, ಗಂಭೀರ ಸ್ಥಿತಿಯಲ್ಲಿದ್ದ ವ್ಯಕ್ತಿ ಆಸ್ಪತ್ರೆಗೆ ದಾಖಲು, ಸ್ಥಳಕ್ಕೆ ಬಾರದ ಅರಣ್ಯಾಧಿಕಾರಿಗಳು..!