ಕ್ರೈಂ

ಪೊಲೀಸ್ ಅಧಿಕಾರಿ ಶೋಭಾ ಕಟಾವ್ಕರ್ ಶವ ಫ್ಲ್ಯಾಟ್ ನಲ್ಲಿ ಪತ್ತೆ

ಬೆಂಗಳೂರು : ನಗರದ ಪುಟ್ಟೇನಹಳ್ಳಿಯ ತಮ್ಮ ಫ್ಲ್ಯಾಟ್ ನಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಶೋಭಾ ಕಟಾವ್ಕರ್(53) ಶವ ಪತ್ತೆಯಾಗಿದೆ. ಮನೆಯ ಸದಸ್ಯರೆಲ್ಲರೂ ಹಾಸನಕ್ಕೆ ತೆರಳಿದ್ದರು. ಈ ವೇ ಳೆ ಮನೆಯಲ್ಲಿ ಶೋಭಾ ಕಟಾವ್ಕರ್ ಒಬ್ಬರೇ ಇದ್ದರು .

ಫೋನ್ ರಿಸೀವ್ ಮಾಡದ ಕಾರಣ ಮನೆಯವರು ಸೆಕ್ಯುರಿಟಿಗೆ ಪರಿಶೀಲಿಸಲು ಸೂಚಿಸಿದ್ದಾರೆ. ರಾತ್ರಿ 8 ಗಂಟೆ ಸುಮಾರಿಗೆ ಪರಿಶೀಲಿಸಿದಾಗ ಸಾವನ್ನಪ್ಪಿರುವುದು ಪತ್ತೆಯಾಗಿದೆ. ಹೃದಯಾಘಾತದಿಂದ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಇತ್ತೀ ಚಿಗೆ ಎಸ್.ಪಿಯಾಗಿ ಮುಂಬಡ್ತಿ ಪಡೆದು ವರ್ಗಾವಣೆಗೊಂಡಿದ್ದ ಶೋಭಾ, ಕಲಬುರಗಿಯ ಪಿಟಿಸಿ ಉಪಪ್ರಾಂಶುಪಾಲರಾಗಿ ನಿಯೋಜನೆಗೊಂಡಿದ್ದರು. ಪುಟ್ಟೇನಹಳ್ಳಿ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ.

Related posts

ಇಂದೇ ನಟ ದರ್ಶನ್ ಬೆಂಗಳೂರಿನ ಆಸ್ಪತ್ರೆಗೆ ದಾಖಲು..! ದಾಸನ ಮನೆ ಮುಂದೆ ಅಭಿಮಾನಿಗಳನ್ನ ನಿಯಂತ್ರಿಸಲು ಸೆಕ್ಯೂರಿಟಿ ಗಾರ್ಡ್ ಗಳು ಹಾಗೂ ಪೊಲೀಸರ ಹರಸಾಹಸ

ರೀಲ್ಸ್‌ ಹುಚ್ಚಿಗೆ ಸ್ಟಂಟ್‌ ಮಾಡಲು ಹೋಗಿ ಪ್ರಪಾತಕ್ಕೆ ಬಿದ್ದ ಯುವಕ,ಮುಂದೇನಾಯ್ತು?

ಸುಳ್ಯ: ಲಾರಿಯಡಿಗೆ ಬಿದ್ದು ಆತ್ಮಹತ್ಯೆಗೆ ಯತ್ನಿಸಿದ್ದ ಯುವಕ ಸಾವು