ಕ್ರೈಂದೇಶ-ವಿದೇಶವಿಡಿಯೋವೈರಲ್ ನ್ಯೂಸ್

ನಡು ರಸ್ತೆಯಲ್ಲಿ ಪೊಲೀಸ್ ಅಧಿಕಾರಿ ಮೇಲೆ ಸಾರ್ವಜನಿಕರಿಂದ ಮನಸೋ ಇಚ್ಛೆ ಥಳಿತ..! ಇಲ್ಲಿದೆ ವೈರಲ್ ವಿಡಿಯೋ

166

ನ್ಯೂಸ್‌ ನಾಟೌಟ್‌: ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರ ಗುಂಪು ಪೊಲೀಸ್ ಅಧಿಕಾರಿ ಮೇಲೆ ಹಲ್ಲೆ ಮಾಡಿರುವ ವಿಡಿಯೋ ವೈರಲ್ ಆಗುತ್ತಿದೆ.
ಉತ್ತರ ಪ್ರದೇಶದ ವಾರಣಾಸಿಯಲ್ಲಿ ಈ ಘಟನೆ ನಡೆದಿದ್ದು, ನಿನ್ನೆ(ನ.23) ಸಂಜೆ ತಮ್ಮ ಪತ್ನಿ ಮತ್ತು ಕುಟುಂಬಸ್ಥರೊಂದಿಗೆ ರಾಜತಾಲಾಬ್‌ ನ ಸ್ಟೇಷನ್ ಹೆಡ್ ಆಫೀಸರ್ (ಎಸ್‌ಎಚ್‌ಒ) ಅಜಿತ್ ವರ್ಮಾ ಪ್ರಯಾಣಿಸುತ್ತಿದ್ದರು.

ಈ ವೇಳೆ ರಸ್ತೆಯಲ್ಲಿ ಅವರ ಕಾರು ಆಟೋಗೆ ಢಿಕ್ಕಿಯಾಗಿದ್ದು, ಬಳಿಕ ಆಟೋ ಚಾಲಕ ಮತ್ತು ಅಜಿತ್ ವರ್ಮಾ ಜೊತೆ ಜಗಳ ನಡೆದಿದೆ. ಜಗಳ ತಾರಕಕ್ಕೇರಿದಾಗ ಕೆಲವರು ಮಧ್ಯಪ್ರವೇಶಿಸಿ ಅಜಿತ್ ವರ್ಮಾ ವಿರುದ್ಧ ಹಲ್ಲೆ ಮುಂದಾಗಿದ್ದಾರೆ ಎನ್ನಲಾಗಿದೆ.

ಈ ವೇಳೆ ಸ್ಥಳಕ್ಕೆ ದೌಡಾಯಿಸಿದ ಓರ್ವ ಪೊಲೀಸ್ ಸಿಬ್ಬಂದಿ ಜಗಳ ಬಿಡಿಸಲು ಮುಂದಾದರೂ ಮಾತುಕೇಳದ ಜನ ಪೊಲೀಸ್ ಅಧಿಕಾರಿ ಮೇಲೆ ಹಲ್ಲೆ ನಡೆಸಿದ್ದಾರೆ.
ಈ ವೇಳೆ ಇನ್ಸ್‌ ಪೆಕ್ಟರ್ ಸಮವಸ್ತ್ರದಲ್ಲಿ ಇರಲಿಲ್ಲ, ಆದ್ದರಿಂದ ಆತ ಪೊಲೀಸ್ ಅಧಿಕಾರಿ ಎಂದು ತಿಳಿಯದ ಜನ ಹಲ್ಲೆಗೆ ಮುಂದಾಗಿದ್ದಾರೆ. ಈ ವೇಳೆ ಅಜಿತ್ ತಾನು ಪೊಲೀಸ್ ಅಧಿಕಾರಿ.. ಕಾರಿನಲ್ಲಿ ನನ್ನ ಹೆಂಡತಿ ಮಕ್ಕಳಿದ್ದಾರೆ.. ಥಳಿಸಬೇಡಿ ಎಂದು ಹೇಳಿದರೂ ಕೇಳಿಸಿಕೊಳ್ಳದ ಜನ ಅಧಿಕಾರಿ ಮಾತುಕೇಳದೇ ಮನಸೋ ಇಚ್ಛೆ ಥಳಿಸಿದ್ದಾರೆ.

ಈ ವೇಳೆ ಅಜಿತ್ ಕೂಡ ಹಲ್ಲೆ ಮಾಡಿದ್ದು ಈ ಘರ್ಷಣೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಎರಡೂ ಕಡೆಯವರು ಪರಸ್ಪರ ಪೊಲೀಸ್ ದೂರು ದಾಖಲಿಸಿಕೊಂಡಿದ್ದಾರೆ ಎನ್ನಲಾಗಿದೆ.

Click

https://newsnotout.com/2024/11/parle-g-biriyani-kannada-news-viral-video-kannada-news-d/
https://newsnotout.com/2024/11/kannada-news-lovers-issue-viral-news-bengaluru/
https://newsnotout.com/2024/11/10-kannada-news-vijayapura-baby-human-trafficing-viral-news/
https://newsnotout.com/2024/11/election-kannada-news-kollapura-viral-video-kannada-news/
See also  2016ರಲ್ಲಿ ಉಳ್ಳಾಲದಲ್ಲಿ ಹಿಂದೂ ಕಾರ್ಯಕರ್ತನ ಹತ್ಯೆ ಪ್ರಕರಣ, ನಾಲ್ವರಿಗೆ ಜೀವಾವಧಿ ಶಿಕ್ಷೆ ಪ್ರಕಟ
  Ad Widget   Ad Widget   Ad Widget       Ad Widget     Ad Widget   Ad Widget   Ad Widget   Ad Widget   Ad Widget   Ad Widget