ಕ್ರೈಂಚಿಕ್ಕಮಗಳೂರುವೈರಲ್ ನ್ಯೂಸ್

ಪೊಲೀಸರು ಗಲ್ಲಿಗಲ್ಲಿಯಲ್ಲಿ ಹುಡುಕುತ್ತಿದ್ದರೆ ರೌಡಿಶೀಟರ್ ಮರ ಏರಿ ನಿದ್ರಿಸುತ್ತಿದ್ದ..! ಫೈರಿಂಗ್ ಮಾಡಿ ಹೊಡೆದುರುಳಿಸಿದ ಪೊಲೀಸರ ರೋಚಕ ಸ್ಟೋರಿ..!

ನ್ಯೂಸ್ ನಾಟೌಟ್: ಪೊಲೀಸರಿಗೆ ಈ ರೌಡಿ ಶೀಟರ್ ಗಳ ಹಿಂದೆ ಓಡುವುದೇ ಒಂದು ದೊಡ್ಡ ಸವಾಲು. ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಅಲ್ಲಿ ಇಲ್ಲಿ ತಲೆಮರೆಸಿಕೊಳ್ಳುತ್ತಿರುವ ರೌಡಿಶೀಟರ್ ಬಗ್ಗೆ ಓದಿದ್ದೇವೆ.

ಆದರೆ ಇಲ್ಲೊಬ್ಬ ರೌಡಿ ಶೀಟರ್ ಪೊಲೀಸರು ನಗರದ ಗಲ್ಲಿಗಲ್ಲಿಗಳಲ್ಲಿ ಹುಡುಕುತ್ತಿದ್ದರೆ ಈತ ಮಾತ್ರ ದೊಡ್ಡ ಮರವನ್ನು ಏರಿ ನಿದ್ರಿಸುತ್ತಿದ್ದ. ಕಾಫಿ ತೋಟಗಳಲ್ಲಿ ತಲೆಮರೆಸಿಕೊಳ್ಳುತ್ತಿದ್ದ. ಹೀಗೆ ಓಡಾಡುತ್ತಿದ್ದವನನ್ನು ಪೊಲೀಸರು ಈಗ ಫೈರಿಂಗ್ ನಡೆಸಿ ಹೆಡೆಮುರಿ ಕಟ್ಟಿದ್ದಾರೆ.

ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರ ತಾಲೂಕು ತಾಲೂಕಿನ ಬಾಳೆಹೊನ್ನೂರು ಪೊಲೀಸರು ಪೂರ್ಣೇಶ್ ಎಂಬ ರೌಡಿ ಶೀಟರ್ ಮೇಲೆ ಫೈರಿಂಗ್ ನಡೆಸಿದ್ದಾರೆ. ಈತನ ಸುಳಿವು ಸಿಕ್ಕಿ ಆತನನ್ನು ಹಿಡಿಯುವುದಕ್ಕೆ ಮುಂದಾದಾಗ ಪೊಲೀಸರ ಮೇಲೆ ಚಾಕುವಿನಿಂದ ದಾಳಿ ನಡೆಸುವುದಕ್ಕೆ ಮುಂದಾಗಿದ್ದಾನೆ.

ಆಗ ಪೊಲೀಸರು ಪ್ರತಿಯಾಗಿ ಫೈರಿಂಗ್ ನಡೆಸಿ ಆತನನ್ನು ಉರುಳಿಸಿದ್ದಾರೆ. ಪಿ.ಎಸ್.ಐ.‌ದಿಲೀಪ್ ಕುಮಾರ್ ಪೂರ್ಣೇಶ್ ಕಾಲಿಗೆ ಫೈರಿಂಗ್ ಮಾಡಿದ್ದಾರೆ. ರೌಡಿಯಿಂದ ಹಲ್ಲೆಗೊಳಗಾದ ಪೇದೆ ಮಂಜುನಾಥ್ ಬಾಳೆಹೊನ್ನೂರು ಆಸ್ಪತ್ರೆಗೆ ದಾಖಲಾಗಿದ್ದರೆ ಆರೋಪಿ ಪೂರ್ಣೇಶ್ ನನ್ನು ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.

Related posts

ಹೊತ್ತಿ ಉರಿದ 8 ಜನರಿದ್ದ ಕಾರು..!15 ವರ್ಷದ ಹುಡುಗಿ ಸಜೀವ ದಹನ, ಆ ರಾತ್ರಿ ನಡೆದ್ದೇನು..?

2 ಮಕ್ಕಳ ತಾಯಿಯೊಂದಿಗೆ ಪ್ರೀತಿ, ಪ್ರಿಯಕರ ಆತ್ಮಹತ್ಯೆ..! ಆತನ ಶವ ನೋಡಿ ಬಂದ ಆಕೆಯೂ ನೇಣಿಗೆ ಶರಣು..!

ಕಡೆಪಾಲದಲ್ಲಿ ಮತ್ತೊಂದು ಲಾರಿ ಅಪಘಾತ