ಕ್ರೈಂದೇಶ-ವಿದೇಶವೈರಲ್ ನ್ಯೂಸ್

ಭದ್ರತಾ ಪಡೆಗಳ ಗುಂಡಿಗೆ 7 ನಕ್ಸಲರು ಬಲಿ..! ಮಾವೋವಾದಿಗಳ ಶವಗಳನ್ನು ವಶಪಡಿಸಿಕೊಂಡ ಪೊಲೀಸ್

ನ್ಯೂಸ್ ನಾಟೌಟ್: ಛತ್ತೀಸ್‌ ಗಢದ ನಾರಾಯಣಪುರ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ನಡೆಸಿದ ಎನ್‌ ಕೌಂಟರ್‌ನಲ್ಲಿ ಕನಿಷ್ಠ ಏಳು ನಕ್ಸಲರು ಹತರಾಗಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.‌

ಪೊಲೀಸರು ಮತ್ತು ಕೇಂದ್ರೀಯ ಮೀಸಲು ಪೊಲೀಸ್ ಪಡೆಯ ಜಂಟಿ ತಂಡವು ಮಾವೋವಾದಿಗಳ ವಿರುದ್ಧ ಕಾರ್ಯಾಚರಣೆಯಲ್ಲಿ ತೊಡಗಿದ್ದಾಗ ದಕ್ಷಿಣ ಅಬುಜ್‌ ಮದ್‌ ನ ಕಾಡಿನಲ್ಲಿ ಮುಂಜಾನೆ 3 ಗಂಟೆ ಸುಮಾರಿಗೆ ಗುಂಡಿನ ಚಕಮಕಿ ನಡೆದಿದೆ. ಈ ವೇಳೆ 7 ಮಂದಿ ನಕ್ಸಲರು ಹತರಾಗಿದ್ದಾರೆ.

ಸಿಆರ್‌ಪಿಎಫ್ ತಂಡಗಳಲ್ಲದೆ ನಾರಾಯಣಪುರ, ದಾಂತೇವಾಡ, ಬಸ್ತಾರ್ ಮತ್ತು ಕೊಂಡಗಾಂವ್ ಜಿಲ್ಲೆಗಳ ಪೊಲೀಸ್‌ ನ ಜಿಲ್ಲಾ ಮೀಸಲು ಗಾರ್ಡ್ (ಡಿಆರ್‌ಜಿ) ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗುಂಡಿನ ಚಕಮಕಿ ಬಳಿಕ ಸಮವಸ್ತ್ರ ಧರಿಸಿದ್ದ ಏಳು ಮಾವೋವಾದಿಗಳ ಶವಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ಇನ್ನೂ ನಡೆಯುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

Click

https://newsnotout.com/2024/12/mother-and-2-child-kannada-news-viral-news-bengaluru/
https://newsnotout.com/2024/12/kannada-news-teaching-chennai-school-girl-get-unconcious/
https://newsnotout.com/2024/12/kannada-news-g-kannada-news-police-d-odisha/
https://newsnotout.com/2024/12/udupi-fishing-man-and-theft-4-lakh-rupees-case-police/
https://newsnotout.com/2024/12/indian-army-kannada-news-jammu-and-kashmir-solider-d/
https://newsnotout.com/2024/12/tamil-nadu-kannada-news-12-district-tamilnadu-hf/
https://newsnotout.com/2024/12/puttur-breeza-car-collision-kannada-news-viral-news-d/

Related posts

ರಸ್ತೆ ಮಧ್ಯೆ ಹುಡುಗಿಯರ ವಿಪರೀತ ಜಗಳ..! ಪ್ಯಾಂಟ್‌ ಬಿಚ್ಚಿದ್ರೂ ನಿಲ್ಲದ ಫೈಟಿಂಗ್‌..! ಇಲ್ಲಿದೆ ವೈರಲ್ ವಿಡಿಯೋ

ಹುಲಿ ಉಗುರು ಪ್ರಕರಣದ ಬಗ್ಗೆ ಮಾಜಿ ಗೃಹ ಸಚಿವ ಗರಂ ಆದದ್ದೇಕೆ..? ಅರಣ್ಯ ಇಲಾಖೆ ಅಧಿಕಾರಿಗಳು ಪ್ರಚಾರದ ಚಟಕ್ಕೆ ಬಿದ್ದಿದ್ದಾರೆ ಎಂದದ್ದೇಕೆ ಆರಗ ಜ್ಞಾನೇಂದ್ರ?

ಡೆಂಗ್ಯೂ ಬಗ್ಗೆ ರೀಲ್ಸ್ ಮಾಡಿದ್ರೆ 1 ಲಕ್ಷ ರೂಪಾಯಿ ಬಹುಮಾನ..! ಏನಿದು ಹೊಸ ಅಭಿಯಾನ..? ನೀವು ಭಾಗವಹಿಸ್ಬಹುದಾ..?