ನ್ಯೂಸ್ ನಾಟೌಟ್: ಮಗು ಹಠ ಮಾಡುತ್ತಿದೆ ಎಂದು ಅಂಗನವಾಡಿ ಸಹಾಯಕಿಯೊಬ್ಬರು ಮಗುವಿನ ಕೈಗೆ ಬರೆ ಎಳೆದು, ಡೈಪರ್ ಗೆ ಖಾರದ ಪುಡಿ ಹಾಕಿ ವಿಕೃತಿ ಮೆರೆದಿರುವ ಘಟನೆ ರಾಮನಗರದ ಕನಕಪುರ ತಾಲೂಕಿನ ಮಹರಾಜಕಟ್ಟೆ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ರಮೇಶ್ ಹಾಗೂ ಚೈತ್ರಾ ದಂಪತಿಯ ಎರಡೂವರೆ ವರ್ಷದ ಮಗು ಮೇಲೆ ಅಂಗನವಾಡಿ ಸಹಾಯಕಿ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.
ಅಂಗನವಾಡಿಯಲ್ಲಿ ಮಗು ಹಠ ಮಾಡುತ್ತಿದೆ ಎಂದು ಕೈ ಮೇಲೆ ಬರೆ ಹಾಕಿ ಬಳಿಕ ಡೈಪರ್ ಒಳಗೆ ಚಂದ್ರಮ್ಮ ಎಂಬವರು ಖಾರದಪುಡಿ ಹಾಕಿದ್ದರು.
ಅಂಗನವಾಡಿಯಿಂದ ಮಗು ಕರೆತರಲು ಹೋದಾಗ ಪೋಷಕರಿಗೆ ಹಲ್ಲೆಯ ವಿಚಾರ ತಿಳಿದಿದೆ. ಈ ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ಅಂಗನವಾಡಿ ಸಹಾಯಕಿ ಚಂದ್ರಮ್ಮ ವಿರುದ್ಧ ಕನಕಪುರ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.