ನ್ಯೂಸ್ ನಾಟೌಟ್: ಪಟ್ಟಣ ಪೊಲೀಸ್ ಠಾಣೆಗೆ ತನ್ನ ವಿರುದ್ದ ದೂರು ನೀಡಲು ಬರುತ್ತಿದ್ದ ಪತ್ನಿಯನ್ನು ಗಂಡ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿರುವ ಘಟನೆ ಮಂಗಳವಾರ (ಜೂ.03) ನಡೆದಿದೆ.
ಚಾಮರಾಜನಗರ ಸೋಮವಾರಪೇಟೆ ಗಿರೀಶ್ ತನ್ನ ಪತ್ನಿ ವಿದ್ಯಾಳನ್ನು ಕೊಲೆ ಮಾಡಿದ್ದಾನೆ. ಆರು ತಿಂಗಳ ಹಿಂದೆ ಗಂಡ-ಹೆಂಡತಿಯ ನಡುವೆ ಕಲಹ ಉಂಟಾಗಿದ್ದು, ಠಾಣೆಯ ಮೆಟ್ಟಿಲೇರಿದ ವಿದ್ಯಾಳನ್ನು ಸಾಂತ್ವನ ಕೇಂದ್ರದಲ್ಲಿ ಇರಿಸಲಾಗಿತ್ತು. ಇಂದು(ಮೇ.3) ಗಂಡನ ಕುಟುಂಬದ ವಿರುದ್ಧ ಠಾಣೆಗೆ ದೂರು ನೀಡಲು ಬರುತ್ತಿದ್ದ ಪತ್ನಿಯನ್ನು ಪತಿ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾನೆ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಸಿಮ್ಸ್ ಆಸ್ಪತ್ರೆಯಲ್ಲಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಇರಿಸಲಾಗಿದೆ.