ಕರಾವಳಿ

ಕಿಡ್ನಿ ಸಂಬಂಧಿ ಸಮಸ್ಯೆಯಿಂದ ಪೊಲೀಸ್ ಶ್ವಾನ ಸಾವು,ಅಪರಾಧ ಪ್ರಕರಣಗಳ ಪತ್ತೆಗೆ ಸಹಕರಿಸುತ್ತಿದ್ದ ಜ್ವಾಲಾ ಇನ್ನಿಲ್ಲ

309

ನ್ಯೂಸ್ ನಾಟೌಟ್ : ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಪೊಲೀಸ್ ಶ್ವಾನ ಮೃತ ಪಟ್ಟ ಘಟನೆ ಮಂಗಳೂರಿನಲ್ಲಿ ನಡೆದಿದೆ.ದ.ಕ ಜಿಲ್ಲಾ ಶ್ವಾನ ದಳದಲ್ಲಿ ಕರ್ತವ್ಯದಲ್ಲಿದ್ದ ಪೊಲೀಸ್ ಶ್ವಾನ ಕಳೆದ ಕೆಲ ತಿಂಗಳುಗಳಿಂದ ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಿತ್ತು.

ಪೊಲೀಸರಿಗೆ ಸಹಾಯ:

ಶ್ವಾನದ ಹೆಸರು ಜ್ವಾಲಾ. 7 ವರ್ಷ 10 ತಿಂಗಳು ವಯಸ್ಸು. ಡಾಬರ್‌ಮನ್ ಪಿಂಚರ್ ತಳಿಗೆ ಸೇರಿದ ಈಕೆ ದಕ್ಷಿಣ ಕನ್ನಡ ಜಿಲ್ಲಾ ಶ್ವಾನ ದಳದಲ್ಲಿ ಅಪರಾಧ ಪ್ರಕರಣಗಳ ಪತ್ತೆಗೆ ಸಂಬಂಧಿಸಿದಂತೆ ಪೊಲೀಸರಿಗೆ ಸಹಾಯ ಮಾಡುತ್ತಿತ್ತು.ಕಳೆದ ಕೆಲವು ಸಮಯಗಳಿಂದ ಕಿಡ್ನಿ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದ ಜ್ವಾಲಾ ಇಂದು ಸಾವನ್ನಪ್ಪಿತು. ಮೃತ ಶ್ವಾನಕ್ಕೆ ಸಕಲ ಗೌರವಾದಿಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಯಿತು. ಜ್ವಾಲಾಳನ್ನು ಸಿಬ್ಬಂದಿ ಕುಮಾರ ಕತ್ಲೇರ ನಿರ್ವಹಿಸುತ್ತಿದ್ದರು.

See also  ಸುಳ್ಯ: ಸ್ನೇಹ ಶಾಲೆಯಲ್ಲಿ ಉತ್ಸಾಹದ ಅಂತಾರಾಷ್ಟ್ರೀಯ ಯೋಗ ದಿನ, ಮನಸ್ಸು ಮತ್ತು ದೇಹದ ಒಂದಾಗಿಸುವಿಕೆಗೆ ನಿಜ ಅರ್ಥ ಬಂದಿದ್ದೇಗೆ..?
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget