ಕ್ರೈಂದೇಶ-ಪ್ರಪಂಚದೇಶ-ವಿದೇಶವೈರಲ್ ನ್ಯೂಸ್

15 ವರ್ಷದ ಹಿಂದೆ ಭೀಕರ ಉಗ್ರ ದಾಳಿಗೆ ಸಾಕ್ಷಿಯಾಗಿದ್ದ ಮುಂಬೈನ ತಾಜ್ ಹೋಟೆಲ್ ಗೆ ಬಾಂಬ್ ಬೆದರಿಕೆ..! ಪೊಲೀಸ್ ಕಂಟ್ರೋಲ್ ರೂಂಗೆ ಕರೆ..!

ನ್ಯೂಸ್ ನಾಟೌಟ್: ಭಾರತ ದೇಶದ ವಾಣಿಜ್ಯ ರಾಜಧಾನಿ ಎಂದೇ ಹೆಸರಾಗಿರುವ ಮುಂಬೈ ಮಹಾ ನಗರದ ಮೇಲೆ ವೆಂಬರ್ 26, 2008 ರಂದು ಉಗ್ರರು ದಾಳಿ ನಡೆಸಿದ್ದ ಕರಾಳ ನೆನಪು ಇನ್ನೂ ಮಾಸಿಲ್ಲ. ಈಗ ಮತ್ತೆ ಅದೇ ತಾಜ್ ಹೋಟೆಲ್ ಗೆ ಹಾಗೂ ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಇಡಲಾಗಿದೆ ಎಂದು ಮುಂಬೈ ಪೊಲೀಸ್‌ ಕಂಟ್ರೋಲ್‌ ರೂಂಗೆ ಬೆದರಿಕೆ ಕರೆ ಬಂದಿರುವ ಘಟನೆ ಸೋಮವಾರ(ಮೇ.27) ಸಂಜೆ ನಡೆದಿದೆ.

ಹೋಟೆಲ್ ಹಾಗೂ ವಿಮಾನ ನಿಲ್ದಾಣದಲ್ಲಿ ಬಾಂಬ್ ಗಳನ್ನು ಇರಿಸಲಾಗಿದ್ದು, ಅವುಗಳನ್ನು ಸ್ಫೋಟಿಸುವುದಾಗಿ ಮುಂಬೈ ಪೊಲೀಸ್ ಕಂಟ್ರೋಲ್ ರೂಂಗೆ ಕರೆ ಬಂದಿದೆ. ಕಾರ್ಯಪ್ರವೃತ್ತರಾದ ಪೊಲೀಸರು ತಾಜ್ ಹೋಟೆಲ್ ಹಾಗೂ ವಿಮಾನ ನಿಲ್ದಾಣದಲ್ಲಿ ಶೋಧ ನಡೆಸಿದ್ದು, ಅನುಮಾನಾಸ್ಪದ ವಸ್ತುಗಳು ಕಂಡುಬಂದಿಲ್ಲ ಎನ್ನಲಾಗಿದೆ. ಮೇಲ್ನೋಟಕ್ಕೆ ಇದು ಹುಸಿ ಬಾಂಬ್‌ ಬೆದರಿಕೆಯಂತೆ ಕಂಡು ಬಂದಿದೆ ಎಂದು ವರದಿ ತಿಳಿಸಿದೆ.

Click 👇

https://newsnotout.com/2024/05/kiccha-in-tulunadu-and-speech-kannada-news
https://newsnotout.com/2024/05/nmc-talent-hire-2k24-news-innaguaration
https://newsnotout.com/2024/05/mangaluru-namaz-on-public-road-issue

Related posts

ಕಾರು ಓಡಿಸಿ ಇಬ್ಬರನ್ನು ಕೊಂದ ಉದ್ಯಮಿ ಪುತ್ರನಿಗೆ ರಾಜಮರ್ಯಾದೆ..! ಕೋರ್ಟ್‌ನ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ಮುಂದಾದ ಪೊಲೀಸ್..!

ಪೊಲೀಸ್ ಠಾಣೆಯಲ್ಲೇ ಮಹಿಳೆ ಜತೆ ರಾಸಲೀಲೆ ಪ್ರಕರಣ..! ಅಮಾನತ್ತುಗೊಂಡಿದ್ದ ಡಿ.ವೈ.ಎಸ್.​ಪಿ ರಾಮಚಂದ್ರಪ್ಪ ಬಂಧನ..!

ಬಿಳಿಯಾರು: ಬೈಕ್ – ಕಾರು ನಡುವೆ ಅಪಘಾತ, ಬೈಕ್ ಸವಾರನಿಗೆ ಗಾಯ