ಕ್ರೈಂದೇಶ-ಪ್ರಪಂಚದೇಶ-ವಿದೇಶವೈರಲ್ ನ್ಯೂಸ್

ಬಿಯರ್‌ ಸೇವಿಸಿ ಇಬ್ಬರು ಕಾನ್‌ ಸ್ಟೆಬಲ್‌ಗಳ ದುರಂತ ಅಂತ್ಯ..? ರಾತ್ರೋರಾತ್ರಿ ಇಬ್ಬರಿಗೂ ವಾಂತಿ-ಭೇದಿ..!

ನ್ಯೂಸ್‌ ನಾಟೌಟ್‌: ಇಬ್ಬರು ಪೊಲೀಸ್‌ ಪೇದೆಗಳು ಬಿಯರ್‌ ಸೇವಿಸಿ ಮೃತಪಟ್ಟ ಘಟನೆ ಮಧ್ಯಪ್ರದೇಶದಲ್ಲಿ ವರದಿಯಾಗಿದೆ. ಮಧ್ಯಪ್ರದೇಶದ ಛಿಂದ್ವಾರ ಜಿಲ್ಲೆಯಲ್ಲಿ ವಿಶೇಷ ಸಶಸ್ತ್ರ ಪಡೆಯ (SAF) ಇಬ್ಬರು ಪೇದೆಗಳು ಬಿಯರ್‌ ಸೇವಿಸಿ ಮೃತಪಟ್ಟಿದ್ದಾರೆ ಎಂಬುದಾಗಿ ಪೊಲೀಸ್ ಇಲಾಖೆಯಿಂದ ಮಾಹಿತಿ ನೀಡಲಾಗಿದೆ.

ಮೃತ ಕಾನ್‌ಸ್ಟೆಬಲ್‌ಗಳನ್ನು ದನಿರಾಮ್‌ ಉಯಿಕೆ (55) ಹಾಗೂ ಪ್ರೇಮ್‌ಲಾಲ್‌ ಕಾಕೋಡಿಯಾ (50) ಎಂಬುದಾಗಿ ಗುರುತಿಸಲಾಗಿದೆ. ಇವರು ಎಸ್‌ಎಎಫ್‌ನ 8ನೇ ಬೆಟಾಲಿಯನ್‌ ಸಿಬ್ಬಂದಿ ಆಗಿದ್ದರು. ಶನಿವಾರ (ಮೇ 25) ರಾತ್ರಿ ಇವರು ಅತಿಯಾಗಿ ಬಿಯರ್‌ ಸೇವಿಸಿದ್ದು, ನಂತರ ಮೃತಪಟ್ಟಿದ್ದಾರೆ ಎನ್ನಲಾಗಿದೆ. ದನಿರಾಮ್‌ ಹಾಗೂ ಪ್ರೇಮ್‌ಲಾಲ್‌ ಆಪ್ತರಾಗಿದ್ದು, ಶನಿವಾರ ರಾತ್ರಿ ಇಬ್ಬರೂ ಬಿಯರ್‌ ಪಾರ್ಟಿ ಮಾಡಿದ್ದಾರೆ.

ಇಬ್ಬರೂ ಊಟ ಮಾಡಿ ಮಲಗಿದ್ದು, ಕೆಲ ಹೊತ್ತಿನಲ್ಲಿಯೇ ವಾಂತಿ-ಭೇದಿ ಕಾಣಿಸಿಕೊಂಡಿದೆ. ಕೂಡಲೇ ಇಬ್ಬರನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ, ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಇಬ್ಬರೂ ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇನ್ನು, ಇಬ್ಬರ ಸಾವಿಗೆ ಏನು ಕಾರಣ ಎಂಬ ನಿಖರ ಮಾಹಿತಿ ಲಭ್ಯವಾಗಿಲ್ಲ. ಮರಣೋತ್ತರ ಪರೀಕ್ಷೆ ವರದಿ ಬಳಿಕ ಸಾವಿಗೆ ನಿಖರ ಕಾರಣ ತಿಳಿಯಲಿದೆ ಎಂಬುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

Click 👇

https://newsnotout.com/2024/05/cinematic-theft-and-viral-video-issue
https://newsnotout.com/2024/05/neonotals-are-nomore-by-fire
https://newsnotout.com/2024/05/kannada-news-pakisthan-quran-issue

Related posts

ಪಕ್ಕದ ಮನೆಯಲ್ಲಿ ಸ್ನಾನ ಮಾಡುತ್ತಿದ್ದ ಮಹಿಳೆ,ಇಣುಕಿ ನೋಡುತ್ತಿದ್ದ ಕಾಮುಕನ ಅರೆಸ್ಟ್ ಮಾಡಿ ಸ್ವರ್ಗ ತೋರಿಸಿದ ಪೊಲೀಸರು!

ಹೊಳೆಯಲ್ಲಿ ಮುಳುಗಿ ಇಬ್ಬರು ಮಕ್ಕಳು ಮೃತ್ಯು,ಮನೆಯವರಿಗೆ ತಿಳಿಸದೇ ಹೊಳೆ ಕಡೆ ತೆರಳಿದ್ದ ಮಕ್ಕಳು

ಹೆದ್ದಾರಿ ಬದಿಯ ಮರಕ್ಕೆ ಗುದ್ದಿ ನಿಂತ ಬಸ್ , ಚಾಲಕನ ನಿಯಂತ್ರಣ ತಪ್ಪಿ ದುರ್ಘಟನೆ