Uncategorized

ರಾಜ್ಯ ಪೊಲೀಸ್ ಕಾನ್ಸ್ ಸ್ಟೇಬಲ್ ಹುದ್ಧೆಗಳಿಗೆ ಅರ್ಜಿ ಆಹ್ವಾನ

ಬೆಂಗಳೂರು: ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಸುಮಾರು 1500 ಸಿವಿಲ್ ಪೊಲೀಸ್ ಕಾನ್ಸ್ ಸ್ಟೇಬಲ್ ಹುದ್ಧೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಏಪ್ರಿಲ್ 1 ರಿಂದಲೇ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಅಭ್ಯರ್ಥಿಗಳು ಯಾವುದೇ ಶುಲ್ಕ ತೆರಬೇಕಾಗಿಲ್ಲ. ಆನ್ ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ತಿಳಿಸಲಾಗಿದೆ. ಈ ವೇಳೆ ಇಮೇಲ್ ಐಡಿ, ಮೊಬೈಲ್ ಸಂಖ್ಯೆ, ಶೈಕ್ಷಣಿಕ ಅರ್ಹತಾ ಪಟ್ಟಿ, ಇತ್ತೀಚಿನ ಭಾವಚಿತ್ರ ಸಹಿತ ಅರ್ಜಿ ಸಲ್ಲಿಸಲು ಕೋರಲಾಗಿದೆ. ಲಿಖಿತ ಪರೀಕ್ಷೆ, ದೈಹಿಕ ಅರ್ಹತಾ ಪರೀಕ್ಷೆಗಳು ನಡೆಯಲಿದೆ. ಏಪ್ರಿಲ್ 30 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಆಸಕ್ತರು ಅರ್ಜಿ ಸಲ್ಲಿಸಬಹುದೆಂದು ಕೋರಲಾಗಿದೆ. ಈ ಬಗ್ಗೆ ಅಧಿಕೃತ ವೆಬ್ ಸೈಟ್ ನಲ್ಲಿ ಮಾಹಿತಿ ನೀಡಲಾಗುತ್ತದೆ ಎಂದು ತಿಳಿಸಲಾಗಿದೆ.

Related posts

ನಿಮ್ಮ ಮಕ್ಕಳು ಮೊಬೈಲ್ ನೋಡ್ತಾ ಊಟ ಮಾಡ್ತಾರಾ..?ಹಾಗಾದರೆ ಪೋಷಕರೇ ಹುಷಾರ್,ಈ ವಿಚಾರ ತಿಳ್ಕೊಳ್ಳಿ

ವೃದ್ದೆ ಹೆಸ್ರಲ್ಲಿ ₹3 ಕೋಟಿ ಸಾಲ ಪಡೆದು ವಂಚನೆ, ಏನಿದು ರಾಕ್ ಲೈನ್ ವೆಂಕಟೇಶ್ ಪುತ್ರನ ಕರ್ಮಕಾಂಡ..?

ಪರೀಕ್ಷೆಗೆಂದು ಬಂದಿದ್ದ ಒಂದೇ ಕಾಲೇಜಿನ 21 ನರ್ಸಿಂಗ್‌ ವಿದ್ಯಾರ್ಥಿನಿಯರಿಗೆ ಕೊರೊನಾ ಪಾಸಿಟಿವ್..! ಬೆಚ್ಚಿ ಬೀಳಿಸಿದ ವರದಿ