ಕರಾವಳಿಕ್ರೈಂವೈರಲ್ ನ್ಯೂಸ್

ಎಚ್ಚರ..! ಮಂಗಳೂರು ಪೊಲೀಸ್ ಕಮಿಷನರ್ ಹೆಸರಲ್ಲೇ ವಾಟ್ಸಾಪ್ ಸಂದೇಶ..! ಹಣಕ್ಕೆ ಬೇಡಿಕೆ ಇಟ್ಟವರ ಬಗ್ಗೆ ಐಪಿಎಸ್ ಅನುಪಮ್ ಅಗರ್ವಾಲ್ ಹೇಳಿದ್ದೇನು? ಇಲ್ಲಿದೆ ಸಂಪೂರ್ಣ ಮಾಹಿತಿ

290

ನ್ಯೂಸ್ ನಾಟೌಟ್: ಮಂಗಳೂರು ಪೊಲೀಸ್ ಕಮಿಷನರ್ ವಾಟ್ಸಪ್ ಹೆಸರಲ್ಲಿ ಮೆಸೆಜ್ ಮೂಲಕ ಹಣಕ್ಕೆ ಬೇಡಿಕೆ ಇಟ್ಟ ಘಟನೆ ವರದಿಯಾಗಿದೆ.

ವಾಟ್ಸಪ್ ನಲ್ಲಿ ಕಮಿಷನರ್ ಫೋಟೋ ಬಳಸಿ ಹಣಕ್ಕೆ ಬೇಡಿಕೆ ಇಟ್ಟಿದ್ದು, ಈ ಘಟನೆ ಇಂದು(ಅ.27) ರಂದು ಬೆಳಕಿಗೆ ಬಂದಿದೆ.

ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಫೋಟೋ ದುರ್ಬಳಕೆ ಮಾಡಲಾಗಿದ್ದು, ಅನುಪಮ್ ಅಗರ್ವಾಲ್ ಹೆಸರಲ್ಲಿ ಹಲವರಿಗೆ ವಾಟ್ಸಪ್ ಸಂದೇಶ ಕಳುಹಿಸಲಾಗುತ್ತದೆ.

ಸಂದೇಶ ಕಳುಹಿಸುವವರು ಅನುಪಮ್ ಅಗರ್ವಾಲ್ ಎಂಬುದಾಗಿ ಪರಿಚಯಿಸಿಕೊಂಡು ಬಳಿಕ ತಾನು ಆಸ್ಪತ್ರೆಯಲ್ಲಿರೋದಾಗಿ ಹೇಳಿ ಹಣ ಕಳುಹಿಸಿಕೊಡುವಂತೆ ಬೇಡಿಕೆ ಇಡುತ್ತಿದ್ದಾರೆ. ಅದನ್ನು 1 ಗಂಟೆಯೊಳಗೆ ಮರು ಪಾವತಿಸುವುದಾಗಿ ಸುಳ್ಳು ಆಸ್ವಾಸನೆಯು ನೀಡುತ್ತಿದ್ದು, ಈ ಬಗ್ಗೆ ಎಚ್ಚರ ವಹಿಸುವಂತೆ ಪೊಲೀಸ್ ಇಲಾಖೆ ಇಳಿಸಿದೆ.

ಯುಪಿಐ ಕೆಲಸ ಮಾಡ್ತಿಲ್ಲ, ಸ್ವಲ್ಪ ಹಣ ಇದ್ದರೆ ಕೊಡಿ, ಒಂದು ಗಂಟೆಯಲ್ಲಿ ವಾಪಾಸ್ ಕೊಡ್ತೀನಿ ಎಂದು ವಾಟ್ಸಾಪ್ ಮೆಸೇಜ್ ಬರುತ್ತದೆ. ಮಂಗಳೂರಿನ ಹಲವರಿಗೆ ಕಮಿಷನರ್ ಹೆಸರಲ್ಲಿ ಸಂದೇಶ ರವಾನೆಯಾಗಿದ್ದು, ಮಂಗಳೂರು ಕಮಿಷನರ್ ಅಧಿಕೃತ ವಾಟ್ಸಪ್ ಖಾತೆಯ ಫೋಟೋ ಬಳಸಿ ನಕಲಿ ಖಾತೆ ಸೃಷ್ಟಿದ್ದಾರೆ ಎನ್ನಲಾಗಿದೆ.

8319051976 ನಂಬರ್ ನಲ್ಲಿ ಕಮಿಷನರ್ ಫೋಟೋ ಬಳಸಿ ನಕಲಿ ವಾಟ್ಸಪ್ ಖಾತೆ ಸೃಷ್ಟಿಸಲಾಗಿದೆ. ನಕಲಿ ಖಾತೆ ಬಗ್ಗೆ ಸಾಮಾಜಿಕ ತಾಣಗಳಲ್ಲಿ ಕಮಿಷನರ್ ಸ್ಪಷ್ಟನೆ ನೀಡಿದ್ದು, ಯಾರೂ ಹಣ ನೀಡದಂತೆ ಸಾರ್ವಜನಿಕರಿಗೆ ಕಮಿಷನರ್ ಮನವಿ ಮಾಡಿದ್ದಾರೆ.

ಸೈಬರ್ ಕ್ರೈಂಗೆ ಈ ಬಗ್ಗೆ ಕ್ರಮಕ್ಕೆ ಸೂಚಿಸಿದ ಕಮಿಷನರ್ ಅನುಪಮ್ ಅಗರ್ವಾಲ್ ಸೂಕ್ತ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸುವುದಾಗಿ ಮಾಹಿತಿ ನೀಡಿದ್ದಾರೆ.

https://www.youtube.com/watch?v=mtKTEHG9O4I
See also  ನನ್ ಜೊತೆ ಇರ್ಬೇಕು, ಇಲ್ಲಾ ಆತ್ಮಹತ್ಯೆ ಮಾಡಿಕೊಳ್ತೇನೆ ಎಂದು ಹುಡುಗನಿಗೆ ಮಹಿಳೆ ಬೆದರಿಕೆ..? 16 ವರ್ಷದ ಹುಡುಗನೊಂದಿಗೆ 26ರ ಯುವತಿಗೆ ಲವ್..! ಹುಡುಗನ ಮನೆಯಲ್ಲೇ ಠಿಕಾಣಿ..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget