ಕರಾವಳಿ

ಗಂಡನಿಂದ ಮಾನಸಿಕ ಕಿರುಕುಳ: ಸಂಬಂಧಿಕನೊಂದಿಗೆ ಓಡಿ ಹೋದ ಎರಡು ಮಕ್ಕಳ ತಾಯಿ

1.2k

ಸುಳ್ಯ: ಜಯನಗರದ ವಿವಾಹಿತ ಮಹಿಳೆಯೊಬ್ಬಳು ತನ್ನ ಗಂಡ ಮಾನಸಿಕ ಹಿಂಸೆ ನೀಡುತ್ತಾನೆ ಎಂದು ಆರೋಪಿಸಿ ಇಬ್ಬರು ಮಕ್ಕಳೊಂದಿಗೆ ಗಂಡನ ಸಂಬಂಧಿಕನೊಂದಿಗೆ ಓಡಿ ಹೋದ ಘಟನೆ ನಡೆದಿದೆ.

ಕೆಲ ದಿನಗಳ ಹಿಂದೆ ಈ ಮಹಿಳೆಯೇ ಸುಳ್ಯ ಪೋಲೀಸ್ ಠಾಣೆಗೆ ತೆರಳಿ ಗಂಡ ತನಗೆ ಹಿಂಸೆ ನೀಡುತ್ತಾನೆ. ನನಗೆ ಈತನೊಂದಿಗೆ ಇರಲು ಸಾಧ್ಯವಿಲ್ಲ ಎಂದು ದೂರು ನೀಡಿದ್ದಳು. ಬಳಿಕ ಈ ಪ್ರಕರಣ ರಾಜಿಯಲ್ಲಿ ಇತ್ಯರ್ಥಗೊಂಡಿತ್ತು. ಗಂಡನ ಮನೆಯ ಕೌಟುಂಬಿಕ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಮಹಿಳೆಗೆ ಪ್ರದೀಪನ ಪರಿಚಯವಾಗಿತ್ತು. ಅದರ ನಂತರ ಇವರಿಬ್ಬರೂ ಹಲವಾರು ಬಾರಿ ಒಟ್ಟಿಗೇ ಇದ್ದರು. ಈ ಮಹಿಳೆ ಪ್ರದೀಪನ ಮನೆಯಲ್ಲಿ ಕೆಲವೊಮ್ಮೆ ತಂಗಲು ಹೋಗುತ್ತಿದ್ದಳು. ಈ ವಿಚಾರ ಗಂಡನ ಗಮನಕ್ಕೆ ಬಂದಿರಲಿಲ್ಲ ಎಂಬ ವಿಚಾರ ತಿಳಿದುಬಂದಿದೆ. ಈ ನಡುವೆ ನಾಪತ್ತೆಯಾಗಿರುವ ಮಹಿಳೆ ಸ್ಥಳಿಯ ಸ್ವಸಹಾಯ ಸಂಘವೊಂದರ ಸದಸ್ಯೆಯಾಗಿದ್ದು, ಸಂಘದಿಂದ ಸುಮಾರು 1 ಲಕ್ಷ ರೂ.ಗಳಷ್ಟು ಸಾಲ ತೆಗೆದಿದ್ದು ಸ್ವ ಸಹಾಯ ಸಂಘದವರೂ ತಮ್ಮ ಅಳಲನ್ನು ಪೊಲೀಸರಲ್ಲಿ ತೋಡಿಕೊಂಡಿದ್ದಾರೆ.

See also  ಪುತ್ತೂರು: ನಕಲಿ ದಾಖಲೆಗಳ ಸರದಾರ ಅರೆಸ್ಟ್‌..! ಸುಳ್ಯ, ಪುತ್ತೂರು ನಗರಸಭೆ ಸೇರಿದಂತೆ ವಿವಿಧ ಗ್ರಾಮ ಪಂಚಾಯತ್‌ಗಳ ನಕಲಿ ದಾಖಲೆಗಳು ವಶಕ್ಕೆ
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget