ಕರಾವಳಿ

Mangaloare:Footboard ಪ್ರಯಾಣದ ವಿರುದ್ಧ ಮಂಗಳೂರಿನಲ್ಲಿ ಪೊಲೀಸರ ಕಾರ್ಯಾಚರಣೆ:123 ಕೇಸ್ ದಾಖಲು

ನ್ಯೂಸ್ ನಾಟೌಟ್ : ಮಂಗಳೂರಿನಲ್ಲಿ ಸಂಚರಿಸುತ್ತಿದ್ದ ಸಿಟಿ ಬಸ್‌ನಿಂದ ಏಕಾಏಕಿ ರಸ್ತೆಗೆಸೆಯಲ್ಪಟ್ಟು ಕಂಡಕ್ಟರೋರ್ವರು ದುರಂತ ಅಂತ್ಯ ಕಂಡಿದ್ದ ಬೆನ್ನಲ್ಲೇ ಪೊಲೀಸರು ನಗರದ ಸಿಟಿ ಬಸ್‌ಗಳ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಫುಟ್‌ಬೋರ್ಡ್ ಪ್ರಯಾಣದ 123 ಪ್ರಕರಣಗಳನ್ನು ದಾಖಲಿಸಿದ್ದಾರೆ.

ಅಲ್ಲದೆ ಜಾಗೃತಿಯಿಂದ ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಳ್ಳಬೇಕು. ಬಾಗಿಲು ಹೊಂದಿದ ಬಸ್‌ಗಳು ಇನ್ನು ಮುಂದೆ ಕಟ್ಟುನಿಟ್ಟಾಗಿ ಬಸ್ ಸಂಚಾರದಲ್ಲಿರುವ ವೇಳೆಗೆ ಬಾಗಿಲುಗಳನ್ನು ಸರಿಯಾಗಿ ಮುಚ್ಚುವಂತೆ ನೋಡಿಕೊಳ್ಳಬೇಕು. ಬಾಗಿಲು ಹೊಂದಿರದ ಹಳೆಯ ಸಿಟಿ ಬಸ್‌ಗಳು ಫುಟ್‌ಬೋರ್ಡ್ ಖಾಲಿಯಾಗುವವರೆಗೆ ಬಸ್ ಚಾಲನೆ ಮಾಡದಂತೆ ನೋಡಿಕೊಳ್ಳಬೇಕು ಎಂದು ಪೊಲೀಸ್ ಕಮಿಷನರ್ ಎಚ್ಚರಿಕೆ ನೀಡಿದ್ದಾರೆ.

ಈ ವಿಚಾರದಲ್ಲಿ ನಡೆದ ಸಭೆಯಲ್ಲಿ ಬಸ್ ನಿರ್ವಾಹಕರು ಬಾಗಿಲು ಇಲ್ಲದ ಫುಟ್‌ಬೋರ್ಡ್‌ನಲ್ಲಿ ನಿಂತಿರುವುದು ಕಂಡುಬಂದರೆ ಬಸ್ ಸಂಚರಿಸುವುದಿಲ್ಲ ಎಂದು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ನಂತೂರು ಸರ್ಕಲ್ ಬಳಿ ಬುಧವಾರ ಬಸ್ ನ ಫುಟ್ ಬೋರ್ಡ್ ನಲ್ಲಿದ್ದ ಈರಯ್ಯ(ಗುರು) ಎನ್ನುವ 23 ವರ್ಷದ ಕಂಡಕ್ಟರ್ ಆಯತಪ್ಪಿ ರಸ್ತೆಗೆ ಬಿದ್ದು ಉಸಿರು ಚೆಲ್ಲಿದ್ದರು.

Related posts

ಕಾಂಗ್ರೆಸ್ ಬೆಂಬಲಿಸಿದರೆ ಮತೀಯವಾದಿಗಳು ವಿಜೃಂಭಿಸುತ್ತಾರೆ! ಮತ್ತೊಂದು ಅಫ್ಘಾನಿಸ್ಥಾನ ಮತ್ತು ಪಾಕಿಸ್ಥಾನ ಆಗಲು ಬಿಡಬಾರದು ಬಿಜೆಪಿ ಅಭ್ಯರ್ಥಿ ವಿ. ಸುನೀಲ್ ಕುಮಾರ್ ಕರೆ

ಅಪ್ರಾಪ್ತ ಬಾಲಕರಿಗೆ ಮೂತ್ರ ಕುಡಿಸಿ ಗುದ ದ್ವಾರಕ್ಕೆ ಹಸಿ ಮೆಣಸಿನಕಾಯಿ ಉಜ್ಜಿದ ಕಿರಾತಕರು..! ಪೈಶಾಚಿಕತೆ ಮೆರೆದ ವಿಡಿಯೋ ವೈರಲ್

ಮದುವೆಯಾಗಿ 22 ದಿನಕ್ಕೆ ಆತ್ಮಹತ್ಯೆ ಮಾಡಿಕೊಂಡ ಟೀವಿ ಕ್ಯಾಮೆರಾಮೆನ್‌, ಪತ್ನಿ