ನ್ಯೂಸ್ ನಾಟೌಟ್: ಕೇಂದ್ರೀಯ ಮೀಸಲು ಪೊಲೀಸ್ ಪಡೆ (CRPF) ಬಸ್ ಅನ್ನು ಕಳ್ಳತನ ಮಾಡಲು ಯತ್ನಿಸಿದ್ದ ಘಟನೆ ಕಲಬುರಗಿ ನಗರದಲ್ಲಿರುವ ಪೊಲೀಸ್ ಕಮಿಷನರ್ ಕಚೇರಿ ಆವರಣದಲ್ಲಿ ಸೋಮವಾರ(ಮೇ.13) ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಸೋನು ಭಗಿರಥ ಎಂಬವನು ಆರೊಪಿ ಎಂದು ಗುರುತಿಸಲಾಗಿದೆ. ಕೆಎ 32 ಜಿ 1550 ನಂಬರ್ನ ಸಿಆರ್ಪಿಎಫ್ ಪೊಲೀಸರ ಬಸ್ ಅನ್ನು ಕಮಿಷನರ್ ಕಚೇರಿ ಆವರಣದಲ್ಲಿ ನಿಲ್ಲಿಸಲಾಗಿತ್ತು ಎಂದು ವರದಿ ತಿಳಿಸಿದೆ.
ಚತ್ತಿಸಘಡ ಮೂಲದ ಕಳ್ಳ ಸೋನು ಭಗಿರಥ ಕಲಬುರಗಿಯಲ್ಲಿ ಸೆಂಟ್ರಿಂಗ್ ಕೆಲಸ ಮಾಡಿಕೊಂಡಿದ್ದನು. ಸೋಮವಾರ ಕುಡಿದ ನಶೆಯಲ್ಲಿ ಮಧ್ಯರಾತ್ರಿ ಕಮಿಷನರ್ ಕಚೇರಿ ಆವರಣದೊಳಗೆ ಬಂದಿದ್ದಾನೆ. ಬಳಿಕ ಆವರಣದಲ್ಲಿ ನಿಲ್ಲಿಸಿದ್ದ ಸಿಆರ್ಪಿಎಫ್ ಪೊಲೀಸರ ಬಸ್ ಒಳಗಡೆ ಹೋಗಿದ್ದಾನೆ. ಬಸ್ ಓರ್ವ ಕಾನ್ಸ್ಟೇಬಲ್ ಇದ್ದು, ನಿದ್ದೆಗೆ ಜಾರಿದ್ದರು ಎನ್ನಲಾಗಿದೆ. ಪೊಲೀಸ್ ಕಾನ್ಸಟೇಬಲ್ ಬಸ್ನ ಕಿಟಕಿಗೆ ತಮ್ಮ ಬಟ್ಟೆ ನೇತು ಹಾಕಿ, ಮಲಗಿದ್ದರು. ಇದನ್ನು ಕಂಡ ಕಳ್ಳ ಸೋನು ಪೊಲೀಸ್ ಕಾನ್ಸಟೇಬಲ್ ಜೇಬಿನಲ್ಲಿದ್ದ ಬಸ್ ಕೀ ತೆಗೆದುಕೊಂಡಿದ್ದಾನೆ. ಬಳಿಕ ಬಸ್ ಸ್ಟಾರ್ಟ್ ಮಾಡುತ್ತಿದ್ದ ಹಾಗೆ ಪೊಲೀಸ್ ಕಾನ್ಸಟೇಬಲ್ ಎಚ್ಚೆತ್ತುಕೊಂಡಿದ್ದಾನೆ. ತಕ್ಷಣ ಪೊಲೀಸ್ ಕಾನ್ಸಟೇಬಲ್ ಆರೋಪಿ ಸೋನು ಭಗಿರಥನನ್ನು ಬಂಧಿಸಿದ್ದಾರೆ. ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ವರದಿ ತಿಳಿಸಿದೆ.
Click 👇