ಬೆಂಗಳೂರು

ಪೊಲೀಸ್ ಮನೆಗೆ ನುಗ್ಗಿ ನಗ-ನಾಣ್ಯ ದೋಚಿದ ಕಳ್ಳರು..!

ನ್ಯೂಸ್ ನಾಟೌಟ್: ಸಾಮಾನ್ಯವಾಗಿ ಪೊಲೀಸರೆಂದರೆ ಕಳ್ಳರು ಹೆದರಿ ದೂರ ಇರ್ತಾರೆ. ಆದ್ರೆ ಇಲ್ಲೊಂದು ಕಡೆ ಪೊಲೀಸರ ಮನೆಗೇ ಕಳ್ಳರು ನುಗ್ಗಿ ನಗ-ನಾಣ್ಯ ದೋಚಿದ್ದಾರೆ. ಅಷ್ಟು ಸಾಲದು ಅಂತ ಎಸ್ ಐ ಮಗನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ಇತ್ತೀಚೆಗೆ ಸಬ್ ಇನ್ಸ್ ಪೆಕ್ಟರ್ ಓರ್ವರ ಮನೆಗೆ ಕಳ್ಳರ ತಂಡವೊಂದು ಹೊಂಚು ಹಾಕಿ  ನುಗ್ಗಿತು. ಮೊದಲು ಮನೆಗೆ ನುಗ್ಗಿದವರೇ ಸಿಕ್ಕಿ ಸಿಕ್ಕಿದ್ದನ್ನು ದೋಚಿದ್ದಾರೆ. ಹೋಗುವಾಗ ಸುಮ್ಮನೆ ಯಾಕೆ ಹೋಗೋದು ಅಂತ ಎಸ್ ಐ ಮಗನಿಗೆ ಚೆನ್ನಾಗಿ ಥಳಿಸಿ ಹೋಗಿದ್ದಾರೆ. ಅಂದ ಹಾಗೆ ಈ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಪೆರೇಸಂದ್ರ ಗ್ರಾಮದಲ್ಲಿ ನಡೆದಿದೆ. ಎಎಸ್ಐ ನಾರಾಯಣ ಸ್ವಾಮಿ ಅವರ ಮಗ ಶರತ್  ಮೇಲೆ  ದರೋಡೆಕೋರರು ಮೂರು ಗುಂಡು ಹಾರಿಸಿದ್ದಾರೆ.  ಕೂಡಲೆ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇವರು ಗಂಭೀರ ಸ್ಥಿತಿಯಲ್ಲಿದ್ದಾರೆ ಎಂದು ತಿಳಿದು ಬಂದಿದೆ. ಶರತ್ ರವರು ಮನೆಯಲ್ಲಿದ್ದ ಕುಟುಂಬಸ್ಥರನ್ನು ರಕ್ಷಿಸಲು ಹೋದಾಗ ದರೋಡೆಕೋರರು ಗುಂಡಿನ ದಾಳಿ ನಡೆಸಿ ಹೊಡೆದು ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.

Related posts

ಬೇಕಾಬಿಟ್ಟಿ ಫ್ರೀ ಟಿಕೆಟ್​ ಹರಿದು ಎಸೆಯುತ್ತಿದ್ದದ್ದೇಕೆ ಬಿಎಂಟಿಸಿ ಕಂಡೆಕ್ಟರ್! ಆ ಮಹಿಳೆಯಿಂದ ತಿಳಿಯಿತು ಕಂಡಕ್ಟರ್ ಕರ್ಮಕಾಂಡ! ಏನಿದು ಘಟನೆ?

ಬಾಂಗ್ಲಾದಿಂದ ಅಪ್ರಾಪ್ತ ಹುಡುಗಿಯರ ಕಳ್ಳಸಾಗಣೆ ಮಾಡಿ ಬೆಂಗಳೂರಿನಲ್ಲಿ ವೇಶ್ಯಾವಾಟಿಕೆ..! ಮನೆಯೊಂದರ ಮೇಲೆ ಸಿಸಿಬಿ ಅಧಿಕಾರಿಗಳಿಂದ ದಾಳಿ..!

ಯುವತಿಯಿಂದ ಲವ್ ಜಿಹಾದ್ ಸುಳ್ಳು ಆರೋಪ, ತನಿಖೆ ಆರಂಭಿಸಿದ ಪೊಲೀಸರೇ ಒಂದು ಕ್ಷಣ ಬೆಚ್ಚಿ ಬಿದ್ರು..!