ಕ್ರೈಂವೈರಲ್ ನ್ಯೂಸ್

ವಿಚಾರಣೆಗೆ ಬಂದ ಪೊಲೀಸರ ಮೇಲೆ ಬೆಂಕಿ ಎಸೆದು ಮಹಿಳೆಯ ಹೈಡ್ರಾಮ! ಅಷ್ಟಕ್ಕೂ ಏನಿದು ಪ್ರಕರಣ? ಯಾರೀ ಮಹಿಳೆ?

ನ್ಯೂಸ್ ನಾಟೌಟ್: ಸಾರ್ವಜನಿಕರ ದೂರಿನ ಮೇರೆಗೆ ವಿಚಾರಣೆಗೆ ತೆರಳಿದ ಪೊಲೀಸರ ಮೇಲೆ ಮಹಿಳೆಯೊಬ್ಬರು ಹ* ಲ್ಲೆ ನಡೆಸಿದ ಹಾಗೂ ಬೆಂಕಿ ಎಸೆದು ಗದ್ದಲ ಸೃಷ್ಟಿಸಿದ ಘಟನೆ ಕುಂದಾಪುರದಲ್ಲಿ ನಡೆದಿದೆ.

ಫ್ಯಾನ್ಸಿ ಅಂಗಡಿ ನಡೆಸುತ್ತಿದ್ದ ಸರೋಜಾ ದಾಸ್ ಎಂಬವರು ಹೀಗೆ ಹ* ಲ್ಲೆಗೆ ಯತ್ನ ನಡೆಸಿದ್ದು ಎನ್ನಲಾಗಿದ್ದು, ಇವರು ಪಾದಚಾರಿ ರಸ್ತೆಯಲ್ಲಿ ತಮ್ಮ ಅಂಗಡಿ ವಿಸ್ತರಿಸಿ ಸಾರ್ವಜನಿಕರಿಗೆ ಸಮಸ್ಯೆಯಾಗುವ ರೀತಿಯಲ್ಲಿ ವ್ಯವಹಾರ ನಡೆಸುತ್ತಿದ್ದಾರೆ ದೂರು ನೀಡಲಾಗಿತ್ತು.

ಕುಂದಾಪುರ ತಾಲೂಕು ಕೋಟೇಶ್ವರ ಮುಖ್ಯ ರಸ್ತೆಯಲ್ಲಿ ಘಟನೆ ನಡೆದಿದ್ದು, ಸ್ಥಳೀಯರು ಹಾಗೂ ವಾಹನ ಸವಾರರ ದೂರಿನ ಮೇರೆಗೆ ಪೊಲೀಸರು ಸ್ಥಳಕ್ಕೆ ಬಂದಿದ್ದು, ಅಂಗಡಿ ವಿಸ್ತರಣೆಯನ್ನು ತೆರವು ಮಾಡಲು ಯತ್ನಿಸಿದ್ದಾರೆ.

ಈ ಸಂದರ್ಭದಲ್ಲಿ ಸರೋಜಾ ದಾಸ್ ಪೊಲೀಸರ ಮೇಲೆ ಹ* ಲ್ಲೆಗೆ ಯತ್ನಿಸಿದ್ದಾರೆ. ಉದ್ದನೆಯ ಕೋಲಿನ ತುದಿಗೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಅದನ್ನು ಪೊಲೀಸರ ‌ಮೇಲೆ ಎಸೆದು ಗಲಾಟೆ ಮಾಡಿದ್ದಾರೆ. ಬಂಧಿಸಲು ಬಂದ ಪೊಲೀಸರನ್ನು ಎಳೆದಾಡಿ ಅವಾಂತರ ಸೃಷ್ಟಿ ಮಾಡಿದ ಮಹಿಳೆಯನ್ನು ಸಾರ್ವಜನಿಕರ ಸಹಾಯದಿಂದ ಬಂಧಿಸಲಾಗಿದೆ ಮತ್ತು ಪೊಲೀಸರು ಬೆಂಕಿ ನಂದಿಸಿದ್ದಾರೆ ಎನ್ನಲಾಗಿದೆ.

ಮಹಿಳೆ ವಿರುದ್ಧ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಹಿಂದೆ ಅಮಾವಾಸ್ಯೆ ಬೈಲು ಮತ್ತು ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಎನ್ನಲಾಗಿದೆ. ಯಾವುದೇ ಕೋರ್ಟು ವಾರಂಟ್‌ಗಳಿಗೂ ಕ್ಯಾರೇ ಮಾಡದ ಈ ಮಹಿಳೆ ಕೋರ್ಟ್‌ಗಳಿಗೆ ಹಾಜರಾಗಿರಲಿಲ್ಲ ಎಂದು ವರದಿ ತಿಳಿಸಿದೆ.

Related posts

ಗೂನಡ್ಕ: ಹಿಂದಿನಿಂದ ಬಂದು ಬಸ್ಸಿನೊಳಗೆ ನುಗ್ಗಿದ ಎಲ್‌ ಬೋರ್ಡ್‌ ಕಾರು

ಮುಂದಿನ ಆದೇಶ ಬರುವವರೆಗೆ ದರ್ಶನ್ ಗೆ ತಾತ್ಕಾಲಿಕ ರಿಲೀಫ್ ನೀಡಿದ ಕೋರ್ಟ್..! ಜಾಮೀನು ಷರತ್ತು ಉಲ್ಲಂಘನೆ ಆಗಿದೆ ಎಂದ ಸರ್ಕಾರದ ಪರ ವಕೀಲ

ರಾಸಲೀಲೆ: ಯುವಕ-ಯುವತಿ ಪೊಲೀಸ್ ವಶಕ್ಕೆ