ಕರಾವಳಿಕ್ರೈಂವೈರಲ್ ನ್ಯೂಸ್

ಕೈಗೆ ಕೋಳ ಹಾಕಿಸಿಕೊಂಡಿದ್ದಾಗಲೇ ಪೊಲೀಸರೆದುರು ಸಿಗರೇಟ್ ಸೇದಿ ರೀಲ್ಸ್ ಮಾಡಿದ ರೌಡಿ..! ಪೊಲೀಸರ ಹೆದರಿಕೆ ಇಲ್ಲದ ಈತನ ಮೇಲಿರುವ ಕೇಸ್ ಗಳೆಷ್ಟು ಗೊತ್ತಾ..?

281

ನ್ಯೂಸ್ ನಾಟೌಟ್: ಇತ್ತೀಚಿನ ದಿನಗಳಲ್ಲಿ ಜೈಲು ಅನ್ನುವುದು ಗೂಂಡಾಗಳಿಗೆ, ಕಳ್ಳರಿಗೆ ಮನಃಪರಿವರ್ತನೆಯ ತಾಣವಾಗಿ ಬದಲಾಗುವ ಬದಲು ರೀಲ್ಸ್ ಮೋಜು ಮಸ್ತಿ ಮಾಡುವ ತಾಣಗಳಾಗಿ ಬದಲಾಗುತ್ತಿದೆಯೇ ಅನ್ನುವ ಅನುಮಾನ ಮೂಡಿಸುತ್ತಿದೆ. ಪೊಲೀಸರನ್ನು ಕಂಡರೆ ಭಯ ಪಡಬೇಕಿರುವ ಗೂಂಡಾಗಳು ಅವರೆದುರೇ ಕೈಗೆ ಕೋಳ ಹಾಕಿಕೊಂಡಿರುವಾಗಲೇ ಸಿಗರೇಟ್ ಸೇದುವಷ್ಟರ ಮಟ್ಟಿಗೆ ಪೊಗರಿನಿಂದ ಬೆಳೆದಿರುವುದು ವಿಪರ್ಯಾಸವೇ ಸರಿ. ಇಂತಹ ಒಂದು ಘಟನೆ ಬೆಂಗಳೂರಿನಲ್ಲಿ ನಡೆದಿದ್ದು ಈಗ ಎಲ್ಲ ಕಡೆ ವಿಡಿಯೋ ವೈರಲ್ ಆಗುತ್ತಿದೆ.

‘ಪೊಲೀಸರು ನನ್ನನ್ನು ಬಂಧಿಸಲು ಸಾಧ್ಯವಿಲ್ಲ’ ಎಂದು ವಿಡಿಯೋ ಮಾಡಿ ಕೆಲವು ಪುಂಡ ಹುಡುಗರಿಗೆ ಸ್ಟಾರ್ ಆಗಿದ್ದ ಸಿದ್ದಾಪುರ ರೌಡಿಶೀಟರ್ ರಾಹುಲ್ ಅಲಿಯಾಸ್ ಸ್ಟಾರ್ ರಾಹುಲ್ (Rowdy Sheeter Rahul) ಈಗ ಮತ್ತೊಂದು ರೀಲ್ಸ್ ಮಾಡಿ ಸುದ್ದಿಯಾಗಿದ್ದಾನೆ. ಪೊಲೀಸರ ಎದುರಲ್ಲೆ ಕೈಗೆ ಕೋಳ ಹಾಕಿದ್ದಾಗಲೇ ಸಿಗರೇಟ್ ಸೇದಿ ರೀಲ್ಸ್ ಮಾಡಿದ್ದಾನೆ. ಇದನ್ನು ಕಂಡ ಸಹಚರರು ಹೆಂಗೆ ನಮ್ಮಣ್ಣ ಎಂದು ಮೆರೆಯುತ್ತಿದ್ದಾರೆ.

ಈ ಹಿಂದೆ ಕೊಲೆಯತ್ನ ಕೇಸ್​ನಲ್ಲಿ ತಾಕತ್ ಇದ್ರೆ ಹಿಡಿಯಿರಿ ಎಂದು ಅವಾಜ್ ವಾಕಿ ವಿಡಿಯೋ ಮಾಡಿದ್ದ ಸ್ಟಾರ್ ರಾಹುಲ್ ಮತ್ತೊಂದು ರೀಲ್ಸ್ ಮಾಡಿದ್ದಾನೆ. ನ್ಯಾಯಾಲಯಕ್ಕೆ ಪೊಲೀಸರು ಹಾಜರು ಪಡಿಸಿ ಹೊರ ಕರೆತರುವಾಗಲೂ ಸಹ Instagram ರೀಲ್ಸ್ ಮಾಡಿದ್ದಾನೆ. ಪೊಲೀಸರ ಎದುರಲ್ಲೇ ಸಿಗರೇಟ್ ಸೇದಿ ವಿಡಿಯೋ ಮಾಡಿಸಿ ನಾನ್ ಕಸ್ಟಡಿಯಲ್ಲಿದ್ದರೂ ರಾಜನೇ, ಪೊಲೀಸರು ನನಗೇನು ಮಾಡಲಾರರು ಎಂಬ ಸಂದೇಶ ರವಾನಿಸಿದ್ದಾನೆ. ಸದ್ಯ ನಗರದಲ್ಲಿ ಸಾರ್ವಜನಿಕ ಪ್ರದೇಶದಲ್ಲಿ ಧೂಮಪಾನ ಮಾಡಿದವರಿಗೆ ಕೇಸ್ ದಾಖಲು ಮಾಡಲಾಗಿದೆ.

ಕುಳ್ಳು ರಿಜ್ವಾನ್ ಅತ್ಯಾಪ್ತ ಸಹಚರರಲ್ಲಿ ಒಬ್ಬನಾಗಿದ್ದ ಸ್ಟಾರ್ ರಾಹುಲ್ ಮೇಲೆ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ 960 ಕ್ಕೂ ಹೆಚ್ಚು ದೂರುಗಳು ದಾಖಲಾಗಿವೆ. ಇನ್ಸ್ಟಾಗ್ರಾಂ ವಿಡಿಯೋ ಮಾಡಿದ್ದ ಸ್ಟಾರ್ ರಾಹುಲ್ ಸಿಸಿಬಿ ಹಾಗೂ ಬೆಂಗಳೂರು ಸೌತ್ ಪೊಲೀಸ್ರು ಪೂರ್ತಿ ಹುಡುಕುತ್ತಿದ್ದಾರೆ ಆದ್ರೂ ನಾನು ಸಿಗಲ್ಲ ಎಂದಿದ್ದ.

ಜೊತೆಗೆ ಇನ್ನೊಬ್ಬ ರೌಡಿಶೀಟರ್ ಸೈಕಲ್ ರವಿ ಆಪ್ತ ಬೇಕರಿ ರಘು ಹತ್ಯೆಗೆ ಯತ್ನಿಸಿರುವುದಾಗಿಯೂ ವಿಡಿಯೋದಲ್ಲಿ ಹೇಳಿ ಪೊಲೀಸ್ರನ್ನ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ. ಈ ಹಿನ್ನಲೆ ಪೊಲೀಸರು ಆರೋಪಿಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದರು. ಈತನ ಮೇಲೆ ಕೊಲೆಯತ್ನ, ಸುಲಿಗೆ, ಡಕಾಯಿತಿ ಸೇರಿದಂತೆ ಅನೇಕ ಪ್ರಕರಣಗಳಿವೆ. ಇನ್ನು ಕಳೆದ ವರ್ಷ ಗಾಂಜಾ ಕೇಸ್ ಸಂಬಂಧ ರೌಡಿಶೀಟರ್ ರಾಹುಲ್ ಕಾಲಿಗೆ ಗುಂಡು‌ ಹಾರಿಸಿ ಬಂಧಿಸಿದ್ದರು.

See also  ಪುತ್ತೂರು: ತಮ್ಮನ ಕೊಲೆಗೈದ ಅಣ್ಣನ ಸೆರೆ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget